Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯ ದೇವ ಮತ್ತು ಬುದ್ಧಿ ಕಾರಕನಾದ ಬುಧ ಗ್ರಹದ ಸಂಯೋಜನೆಯು ಅತ್ಯಂತ ಶಕ್ತಿಶಾಲಿ ರಾಜಯೋಗಗಳನ್ನು ಸೃಷ್ಟಿಸುತ್ತದೆ. ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಜೂನ್ 16 ರಂದು ಸೂರ್ಯ ದೇವನು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ವಿಶೇಷವೆಂದರೆ, ಬುಧ ಗ್ರಹವು ಈಗಾಗಲೇ ತನ್ನ ಸ್ವರಾಶಿಯಾದ ಮಿಥುನದಲ್ಲಿ ವಿರಾಜಮಾನನಾಗಿದ್ದಾನೆ.