ಮಂಗಳ-ರಾಹು ಸಂಯೋಗ: ಈ ರಾಶಿಗಳ ಭವಿಷ್ಯ ಬದಲು, ಖುಲಾಯಿಸಲಿದೆ ಅದೃಷ್ಟದ ಬಾಗಿಲು! Astrology

Astrology  ಸಾಂದರ್ಭಿಕ ಚಿತ್ರ
Astrology ಸಾಂದರ್ಭಿಕ ಚಿತ್ರ
Published on

Astrology:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧೈರ್ಯ, ಶಕ್ತಿ, ಕೋಪ ಮತ್ತು ಕ್ರಿಯೆಯ ಕಾರಕನಾದ ಆಳುವ ಗ್ರಹ ಮಂಗಳನು ಭಾನುವಾರ ರಾತ್ರಿ ತನ್ನ ರಾಶಿ ಪರಿವರ್ತನೆ ಮಾಡಿದ್ದಾನೆ. ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಿರುವ ಮಂಗಳ, ಮುಂದಿನ ಒಂದೂವರೆ ತಿಂಗಳು ಅದೇ ರಾಶಿಯಲ್ಲಿ ನೆಲೆಸಲಿದ್ದಾನೆ.

ಜ್ಯೋತಿಷ್ಯದ ಪ್ರಕಾರ, ಮಿಥುನ ರಾಶಿಗೆ ಮಂಗಳನ ಪ್ರವೇಶ ಹಾಗೂ ರಾಹುವಿನೊಂದಿಗಿನ ಈ ವಿಶೇಷ ಸಂಯೋಗವು ಕೆಲವು ರಾಶಿಗಳಿಗೆ ಅದ್ಭುತ ಅವಕಾಶಗಳನ್ನು ಮತ್ತು ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಜ್ಯೋತಿಷ್ಯದಲ್ಲಿ ಮಂಗಳ ಶೌರ್ಯ ಮತ್ತು ಕ್ರಿಯೆಯ ಸಂಕೇತವಾಗಿದ್ದರೆ, ರಾಹುವನ್ನು ಚತುರತೆ ಮತ್ತು ಹಠಾತ್ ಬದಲಾವಣೆಗಳ ಕಾರಕ ಎಂದು ನೋಡಲಾಗುತ್ತದೆ. ಈ ಎರಡು ಪ್ರಭಾವಿ ಗ್ರಹಗಳ ಅಪೂರ್ವ ಸಂಯೋಗವು ಈ ಮೂರು ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಮಂಗಳ ಗ್ರಹದ ಸಂಚಾರ ಶುಭಕರವಾಗಿರುತ್ತದೆ. ಈ ಜನರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಬಾಕಿ ಉಳಿದಿದ್ದ ಹಣವನ್ನು ಮರಳಿ ಪಡೆಯಲಿದ್ದಾರೆ. ಹೊಸ ವೃತ್ತಿ ಹುಡುಕುತ್ತಿರುವವರಿಗೆ ಹೊಸ ಆರಂಭ ಸಿಗಬಹುದು. ದೀರ್ಘಕಾಲದಿಂದ ಬಗೆಹರೆಯದ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಸುಧಾರಣೆಗೆ ಅವಕಾಶಗಳು ಇರಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ಸಮಯ ಸ್ವಲ್ಪ ಸವಾಲಿನದ್ದಾಗಿರಬಹುದು. ಖರ್ಚುಗಳಲ್ಲಿ ಹೆಚ್ಚಾಗಬಹುದು. ಹಳೆಯ ಹೂಡಿಕೆಗಳು ಲಾಭವನ್ನು ನೀಡಬಲ್ಲವು. ತಂದೆ ತಾಯಿ ಆಶೀರ್ವಾದದೊಂದಿಗೆ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಲಿದೆ. ವಿದೇಶದಲ್ಲಿ ಓದಲು ಬಯಸುವವರಿಗೆ ಒಳ್ಳೆಯ ಸುದ್ದಿಯನ್ನು ಕೇಳಬಹುದು. ದೊಡ್ಡ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಮಿಥುನ ರಾಶಿ

ಮಂಗಳ ಗ್ರಹವು ಈ ರಾಶಿಯನ್ನು ಪ್ರವೇಶಿಸುತ್ತಿದೆ. ಆದ್ದರಿಂದ ಅದರ ಪ್ರಭಾವವು ಹೆಚ್ಚಾಗಿ ಕಂಡುಬರಬಹುದು. ಈ ಜನರು ಈ ಸಮಯದಲ್ಲಿ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಹಳೆಯ ಬಾಕಿ ಮತ್ತೆ ಕೈಸೇರಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಾಧಿಕಾರಿಯಿಂದ ಪ್ರಶಂಸೆ ದೊರೆಯಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net