2026 ರಲ್ಲಿ ಈ ರಾಶಿಯವರಿಗೆ ಭಾಗ್ಯದ ಡಬಲ್ ಡೋಸ್: ಮನೆಯಲ್ಲಿ ಲಕ್ಷ್ಮೀ ದೇವಿ, ಹೊರಗೆ ಯಶಸ್ವಿನಿ ದೇವಿ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ಸಮಯದಲ್ಲಿ ಹಲವಾರು ರಾಜಯೋಗಗಳು ಮತ್ತು ಶುಭ ಸಂಯೋಜನೆಗಳು ರೂಪುಗೊಳ್ಳಲಿವೆ. ವಿಶೇಷವಾಗಿ  ಕೆಲವೊಂದು ರಾಶಿಗಳ ಮೇಲೆ ಮಾಳವೀಯ ಮತ್ತು ಹಂಸ ರಾಜಯೋಗಗಳು ಪರಿಣಾಮ ಬೀರಲಿವೆ. 
ಜ್ಯೋತಿಷ್ಯದ ಪ್ರಕಾರ, 2026 ರಲ್ಲಿ ಗುರುವು ತನ್ನದೇ ಆದ ರಾಶಿಯಲ್ಲಿ ಹಂಸ ರಾಜಯೋಗವನ್ನು ರೂಪಿಸುತ್ತಾನೆ. ಶುಕ್ರನು ತನ್ನ ಉಚ್ಚ ರಾಶಿಯನ್ನು ಪ್ರವೇಶಿಸಿ ಮಾಲವ್ಯ ರಾಜಯೋಗವನ್ನು ರೂಪಿಸುತ್ತಾನೆ. ಈ ಚಲನೆಯಿಂದ ಈ ರಾಶಿಚಕ್ರ ಚಿನ್ಹೆಗಳಿಗೆ ಸಮೃದ್ಧಿಯನ್ನು ತರುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಯಾವ ರಾಶಿಚಕ್ರದವರು ಹೊಸ ವರ್ಷದಂದು ಅದೃಷ್ಟಶಾಲಿಗಳಾಗುತ್ತಾರೆ ಎಂದು ನೋಡೋಣ ಬನ್ನಿ..

ಮೇಷ ರಾಶಿ

2026 ರ ಹೊಸ ವರ್ಷದ ಆರಂಭದಲ್ಲಿ ಹಂಸ ಮತ್ತು ಮಾಳವೀಯ ರಾಜಯೋಗಗಳು ರೂಪುಗೊಳ್ಳುವುದರಿಂದ ಮೇಷ ರಾಶಿಯವರಿಗೆ ಅನುಕೂಲಕರ ಅವಧಿ ಇದಾಗಿದೆ. ಈ ಸಮಯದಲ್ಲಿ ಆಸ್ತಿ ಕೊಳ್ಳುವವರಿಗೆ ಸೂಕ್ತವಾದ ಸಮಯ. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೆಲಸದಲ್ಲಿರುವ ಜನರು ನಿಮ್ಮ ಕೆಲಸಕ್ಕೆ ಪ್ರೊತ್ಸಾಹ ನೀಡುತ್ತಾರೆ. ಈ ಹೊಸ ವರ್ಷ ಸಾಧನೆಯ ಸಮಯವನ್ನು ತರಲಿದ್ದು, ನಿಮ್ಮ ಮೇಲಾಧಿಕಾರಿಗಳ ಪ್ರಶಂಸೆಗೆ ಒಳಗಾಗಲಿದ್ದೀರಿ.

ಕನ್ಯಾರಾಶಿ

ಹಂಸ ಮತ್ತು ಮಾಳವೀಯ ರಾಜ್ಯ ಯೋಗವು ಕನ್ಯಾ ರಾಶಿಯವರ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಬಳ ಹೆಚ್ಚಾಗುವ ನಿರೀಕ್ಷೆ ಇದ್ದು, ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ನಿರ್ಧಾರವನ್ನು ಮೆಚ್ಚಿಕೊಳ್ಳುತ್ತಾರೆ. ಹೊಸ ಜವಬ್ದಾರಿಗಳು ಪಡೆಯುವ ಸಾಧ್ಯತೆಯೂ ಹೆಚ್ಚಿದೆ.

ಮಕರ ರಾಶಿ

2026 ರಲ್ಲಿ ಹಂಸ ಮತ್ತು ಮಾಳವೀಯ ರಾಜ್ಯ ಯೋಗದ ರಚನೆಯು ಮಕರ ರಾಶಿಯವರಿಗೆ ಸುವರ್ಣ ಯುಗಕ್ಕೆ ಕಾರಣವಾಗುತ್ತದೆ. ಈ ಸಮಯದಲ್ಲಿ ಹೊಸ ಯೋಜನೆಗಳಿಗೆ ಹೂಡಿಕೆ ಮಾಡುವವರು ಉತ್ತಮ ಪ್ರಯೋಜನವನ್ನು ಪಡೆಯಲಿದ್ದೀರಿ. ಹೊಸ ಪಾಲುದಾರಿಕೆಯನ್ನು ಕೂಡ ಪಡೆಯಬಹುದು. ದೀರ್ಘಕಾಲದವರೆಗೆ ತಡೆಹಿಡಿಯಲಾಗಿದ್ದ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಕಚೇರಿಗಳಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net