ಈ ಮೂರು ರಾಶಿಯವರಿಗೆ ಶಾಪಿಂಗ್​ ಅಂದರೆ ತುಂಬಾನೇ ಇಷ್ಟ! ನೀವೂ ಇದೇ ರಾಶಿನಾ? Zodiac Signs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
  • ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
  • ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಸಾಮಾನ್ಯವಾಗಿ ಒಂದು ನಿರ್ದಿಷ್ಟ ಗುಂಪಿನ ಜನರು ಎಲ್ಲಿಗೆ ಹೋದರು ಏನನ್ನಾದರೂ ಖರೀದಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಆ ವಸ್ತುವಿನ ಅಗತ್ಯವೇ ಇಲ್ಲದಿರಬಹುದು. ಆದರೂ, ಶಾಪಿಂಗ್​ ಮೇಲಿನ ಅವರ ಅತಿಯಾದ ಒಲವಿನಿಂದಾಗಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಆಗಾಗ ವ್ಯರ್ಥ ಖರ್ಚುಗಳನ್ನು ಮಾಡುತ್ತಾರೆ.
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ಮದುವೆ, ದಾಂಪತ್ಯ ಜೀವನ, ಉದ್ಯೋಗ ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಗುಣಗಳ ಮೇಲೆ ಜ್ಯೋತಿಷ್ಯದ ಪ್ರಭಾವ ತುಂಬಾ ಇದೆ.
ಅದೇ ರೀತಿ ಕೆಲವು ರಾಶಿಚಕ್ರಗಳಲ್ಲಿ ಜನಿಸಿದ ಜನರು ಅನಗತ್ಯ ವಸ್ತುಗಳನ್ನು ಖರೀದಿಸುವ ಅಭ್ಯಾಸವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದಹಾಗೆ, ಅನಗತ್ಯ ಮತ್ತು ನಿಷ್ಪ್ರಯೋಜಕ ವಸ್ತುಗಳಿಗೆ ಹಣ ಖರ್ಚು ಮಾಡುವ ಅಭ್ಯಾಸವಿರುವವರು ಜೀವನದಲ್ಲಿ ಪ್ರಗತಿ ಸಾಧಿಸುವುದು ತುಂಬಾನೇ ಕಷ್ಟ. ಹಾಗಾದರೆ, ಯಾವ ರಾಶಿಯವರು ತಮ್ಮ ಶಾಪಿಂಗ್ ಅಭ್ಯಾಸದಿಂದಾಗಿ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಈ ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ. ಅವರು ಯಾವಾಗಲೂ ಯಾವುದಾದರೂ ವಿಷಯದ ಬಗ್ಗೆ ಭಾವನಾತ್ಮಕವಾಗಿರುತ್ತಾರೆ. ಅವರು ಹೊರಗೆ ಹೋದಾಗ, ಏನನ್ನಾದರೂ ನೋಡಿದರೆ, ಅದನ್ನು ತಕ್ಷಣ ಖರೀದಿಸುತ್ತಾರೆ. ಈ ರಾಶಿಯವರು ಶಾಪಿಂಗ್ ಅನ್ನು ಆಟವನ್ನಾಗಿ ಮಾಡಿಕೊಂಡಿರುತ್ತಾರೆ. ಅವರು ಗಳಿಸುವ ಹಣದಲ್ಲಿ ಬಹುತೇಕ ಭಾಗ ಅನಗತ್ಯ ಖರ್ಚುಗಳಿಗೆ ಹೋಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಜನರಲ್ಲಿ ಅಧಿಕಾರ ಹೊಂದುವ ಬಯಕೆ ತುಂಬಾ ಇರುತ್ತದೆ. ಅವರು ಸೊಗಸಾಗಿ ಕಾಣಲು ಬಹಳಷ್ಟು ಹಣವನ್ನು ಖರ್ಚು ಮಾಡಲು ಇಷ್ಟಪಡುತ್ತಾರೆ. ಅವರು ಬಟ್ಟೆ ಮತ್ತು ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ದುಬಾರಿ ಬ್ರ್ಯಾಂಡ್‌ಗಳನ್ನು ಇಷ್ಟಪಡುವ ಜನರು ಸಿಂಹ ರಾಶಿಯವರಾಗಿರಬಹುದು. ಹೀಗಾಗಿ ಅವರು ಅನಗತ್ಯ ಖರ್ಚುಗಳನ್ನು ಹೆಚ್ಚು ಮಾಡುತ್ತಾರೆ. 

ಮೀನ ರಾಶಿ

ಮೀನ ರಾಶಿಯಲ್ಲಿ ಜನಿಸಿದ ಜನರು ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಇತರರ ಬಗ್ಗೆ ಸಹಾನುಭೂತಿ ತೋರುವ ಇವರು ಇತರರಿಗೆ ಸಹಾಯ ಮಾಡಲು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ರಾಶಿಯವರು ಕಲ್ಪನಾ ಲೋಕದಲ್ಲಿ ವಾಸಿಸುತ್ತಾರೆ ಮತ್ತು ವಾಸ್ತವಿಕ ಜೀವನವನ್ನು ಎಂದಿಗೂ ಇಷ್ಟಪಡುವುದಿಲ್ಲ. ಶಾಪಿಂಗ್ ಮಾಡುವ ಅಭ್ಯಾಸವು ಈ ರಾಶಿಯವರ ಒಳ್ಳೆಯ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net