

Astrology: ಯುಗಾದಿ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭದ ಸಂಭ್ರಮದ ಹಬ್ಬ. ಬ್ರಹ್ಮದೇವನು ಸೃಷ್ಟಿ ಆರಂಭಿಸಿದ ದಿನವಿದು ಎಂದು ನಂಬಲಾಗಿದೆ. ಈ ದಿನ ಜನರು ಮುಂಜಾನೆ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಮನೆಗೆ ಮಾವಿನ ಎಲೆಗಳ ತೋರಣ ಕಟ್ಟಿ ಪೂಜಿಸುತ್ತಾರೆ. ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲ ಸವಿಯುವುದು ಈ ಹಬ್ಬದ ವಿಶೇಷ.
ಜ್ಯೋತಿಷ್ಯದ ಪ್ರಕಾರ ಈ ಹಬ್ಬದಿಂದ ಕೆಲವೊಂದು ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ..