ಈ ದಿನಾಂಕಗಳಂದು ಜನಿಸಿದವರು ಸದಾ ದೇವರ ರಕ್ಷಣೆಯಲ್ಲಿರುತ್ತಾರಂತೆ! ನೀವು ಹುಟ್ಟಿದ್ದೂ ಇದೇ ದಿನಾನಾ? Numerology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ
  • ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಭವಿಷ್ಯ ಹೇಳುತ್ತೆ
  • ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ
Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.
ಅಂದಹಾಗೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ. ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್​ ಸಂಖ್ಯೆ 2+4= 6 ಆಗಿರುತ್ತದೆ.
ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದವರು ದೈವಿಕ ಶಕ್ತಿಗಳಿಂದ ರಕ್ಷಣೆಯನ್ನು ಹೊಂದಿರುತ್ತಾರಂತೆ. ಅವರ ಮೇಲೆ ಯಾರಾದರೂ ಮಾಟ ಮಂತ್ರ, ದುಷ್ಟ ಕಣ್ಣು ಅಥವಾ ದುಷ್ಟ ಆಲೋಚನೆಗಳ ಮೂಲಕ ಅಡೆತಡೆಗಳನ್ನು ಉಂಟು ಮಾಡಿದರೆ, ದೈವ ಶಕ್ತಿಗಳು ಖಂಡಿತವಾಗಿಯೂ ಅವರನ್ನು ರಕ್ಷಿಸುತ್ತವೆ ಎಂದು ಹೇಳಲಾಗಿದೆ. ಆ ದೈವಿಕ ಶಕ್ತಿಗಳು ಅವರ ಪೂರ್ವಜರಾಗಿರಬಹುದು, ಕುಲದೇವತೆಗಳಾಗಿರಬಹುದು ಅಥವಾ ಬೇರೆ ಯಾವುದಾದರೂ ದೇವರಾಗಿರಬಹುದು. ಆದರೆ, ಒಂದು ವಿಷಯವಂತೂ ಖಚಿತ, ಅದೇನೆಂದರೆ, ಈ ದಿನಾಂಕಗಳಲ್ಲಿ ಜನಿಸಿದವರು ದೇವರ ರಕ್ಷಣೆಯಲ್ಲಿ ಇರುತ್ತಾರೆ. ಹಾಗಾದರೆ, ಯಾವ ದಿನಾಂಕಗಳಲ್ಲಿ ಜನಿಸಿದವರಿಗೆ ದೇವರ ರಕ್ಷಣೆ ಇರುತ್ತದೆ ಅನ್ನೋದನ್ನು ನಾವೀಗ ತಿಳಿಯೋಣ.

1, 10, 19 ಹಾಗೂ 28ರಂದು ಜನಿಸಿದ ಜನರು

ಈ ದಿನಾಂಕಗಳಲ್ಲಿ ಜನಿಸಿದವರ ಅದೃಷ್ಟ ಸಂಖ್ಯೆ 1. ಈ ಸಂಖ್ಯೆಗಳನ್ನು ಗ್ರಹಗಳ ಅಧಿಪತಿಯಾದ ಸೂರ್ಯನು ಆಳುತ್ತಾನೆ. ಅವರು ಕೆಲವು ದೈವಿಕ ಶಕ್ತಿಗಳಿಂದ ಆಧ್ಯಾತ್ಮಿಕವಾಗಿ ಸದಾ ರಕ್ಷಿಸಲ್ಪಡುತ್ತಾರೆ. ಈ ದಿನ ಹುಟ್ಟಿದವರು ಪ್ರಬಲ ವ್ಯಕ್ತಿತ್ವ ಹೊಂದಿರುತ್ತಾರೆ. ಅವರು ಮಾತನಾಡಲು ಆರಂಭಿಸಿದರೆ ಎಲ್ಲರು ಅವರತ್ತ ಆಕರ್ಷಿತರಾಗುತ್ತಾರೆ ಮತ್ತು ಈ ರಕ್ಷಣಾತ್ಮಕ ಗುರಾಣಿ ಅವರು ಎದುರಿಸುವ ಅತ್ಯಂತ ಕಷ್ಟಕರ ಸಂದರ್ಭಗಳಿಂದಲೂ ಅವರನ್ನು ರಕ್ಷಿಸುತ್ತದೆ.

ದಿನಾಂಕ 2, 11, 20 ಹಾಗೂ 29

ಈ ದಿನಾಂಕಗಳಲ್ಲಿ ಜನಿಸಿದವರ ಅದೃಷ್ಟ ಸಂಖ್ಯೆ 2. ಈ ಸಂಖ್ಯೆಗಳನ್ನು ಜಲ ಗ್ರಹವಾದ ಚಂದ್ರನು ಆಳುತ್ತಾನೆ. ಚಂದ್ರನ ಶಕ್ತಿಯು ನಿರಂತರವಾಗಿ ಬದಲಾಗುತ್ತಿರುತ್ತದೆ. ಹಣೆಯ ಮೇಲೆ ಚಂದ್ರನನ್ನು ಧರಿಸಿರುವ ಶಿವನ ಶಕ್ತಿಯಿಂದ ರಕ್ಷಿಸಲ್ಪಡುತ್ತಾರೆ. ಅವರು ಸ್ವಭಾವತಃ ಶುದ್ಧರಾಗಿರುವುದರಿಂದ ಮತ್ತು ಸುಲಭವಾಗಿ ಭಾವನಾತ್ಮಕವಾಗಿರುವುದರಿಂದ, ಈ ಎರಡೂ ಶಕ್ತಿಗಳು ಅವರಿಗೆ ರಕ್ಷಣೆ ಮತ್ತು ಆಶೀರ್ವಾದಗಳನ್ನು ಒದಗಿಸುತ್ತವೆ.

9, 18 ಹಾಗೂ 27ರಂದು ಜನಿಸಿದವರು

ಈ ದಿನಾಂಕಗಳಲ್ಲಿ ಜನಿಸಿದ ಜನರು ಗ್ರಹಗಳ ಅಧಿಪತಿಯಾದ ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಅವರು ಧೈರ್ಯ, ಶಕ್ತಿ ಮತ್ತು ಮಾನಸಿಕ ದೃಢತೆಯಿಂದ ತುಂಬಿರುತ್ತಾರೆ. ಅವರು ದೈವಿಕ ಶಕ್ತಿಗಳಿಂದ ರಕ್ಷಿಸಲ್ಪಡುತ್ತಾರೆ. ತಮ್ಮಲ್ಲಿರುವ ಆತ್ಮ ಬಲದಿಂದ, ದುಷ್ಟಶಕ್ತಿಗಳು ಮತ್ತು ಇತರ ಹಾನಿಕಾರಕ ಶಕ್ತಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ದೈವಿಕ ರಕ್ಷಣೆಯು ಅವರಿಗೆ ನಿರ್ಭಯತೆ ಮತ್ತು ಹೋರಾಡಲು ಬಲವಾದ ದೈಹಿಕ ಶಕ್ತಿ ನೀಡುತ್ತದೆ. ತಮ್ಮ ಗುಪ್ತ ಶತ್ರುಗಳಿಂದಲೂ ರಕ್ಷಿಸಲ್ಪಡುತ್ತಾರೆ.

ದಿನಾಂಕ 7, 16 ಹಾಗೂ 25

ಈ ದಿನಾಂಕಗಳಲ್ಲಿ ಜನಿಸಿದ ಜನರನ್ನು ಕೇತು ಗ್ರಹ ಆಳುತ್ತದೆ. ಜ್ಯೋತಿಷ್ಯದ ಪ್ರಕಾರ, ಕೇತು ಒಂದು ನೆರಳು ಗ್ರಹವಾಗಿದ್ದು, ಅದು ಏಕಾಂತತೆ, ನಿಗೂಢತೆ ಮತ್ತು ಅಂತಃಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಅವರು ಸಕಾರಾತ್ಮಕ ಅತೀಂದ್ರಿಯ ಶಕ್ತಿಗಳಿಂದ ರಕ್ಷಿಸಲ್ಪಟ್ಟಿರುತ್ತಾರೆ. ಅವರ ಅಂತಃಪ್ರಜ್ಞೆಯಿಂದಾಗಿ, ಅವರು ಭೌತಿಕ ಸುಖಗಳಿಗಿಂತ ಆಧ್ಯಾತ್ಮಿಕ ಪ್ರಪಂಚದ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಹೀಗಾಗಿ ಅವರಿಗೆ ದೈವಿಕ ರಕ್ಷಣೆ ಇರುತ್ತದೆ. 
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net