2026 ಪಂಚಗ್ರಹಿ ಯೋಗ: ಇಂದಿನಿಂದ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಯೋಜನೆಯನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಮಕಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕೆಲವೊಂದು ಗ್ರಹಗಳು ಬದಲಾಗುತ್ತಿರುತ್ತವೆ. ಅಂದರಲ್ಲಿ  ಅಪರೂಪದ ಪಂಚಗ್ರಹಿ ಯೋಗವು ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. 
 ಮಕರ ಸಂಕ್ರಾಂತಿಯಂದು (ಜ. 14) ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ  ಮತ್ತು ಮಂಗಳ, ಬುಧ, ಶುಕ್ರ ಮತ್ತು ಚಂದ್ರರು ಸಹ ಮಕರ ರಾಶಿಯಲ್ಲಿ ಸೂರ್ಯನೊಂದಿಗೆ ಸೇರಿ ಪಂಚಗ್ರಹಿ ಯೋಗವನ್ನು ರೂಪಿಸುತ್ತಾರೆ. ಈ ಗ್ರಹಗಳ ಬದಲಾವಣೆಯು ಶಕ್ತಿ, ಸಂಪತ್ತು, ಬುದ್ದಿವಂತಿಕೆ ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತಿದ್ದು, ಇದರಿಂದ ಕೆಲವೊಂದು ರಾಶಿಗಳಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಮಕರ ರಾಶಿ

ಮಕರ ರಾಶಿಯವರಿಗೆ ಈ ಗ್ರಹಗಳ ಸಂಚಾರವು ಫಲಪ್ರದವಾಗಿರುತ್ತದೆ. ಇದರಿಂದ ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿದ್ದೀರಿ. ಇದು ವ್ಯಕ್ತಿತ್ವವನ್ನು ರೂಪಿಸುತ್ತದೆ. ಸ್ವತಃ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಈ ಸಮಯದಲ್ಲಿ ಇವರು ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದಾರೆ. ವ್ಯವಹಾರದಲ್ಲಿ ಇರುವವರಿಗೆ ಉತ್ತಮ ಲಾಭಗಳನ್ನು ಪಡೆಯಬಹುದಾಗಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ, ಪಂಚಗ್ರಹಿ ಯೋಗವು ನಿಮ್ಮ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಉತ್ತಮ ಜೀವನವನ್ನು ಕಳೆಯಲಿದ್ದೀರಿ. ಈ ಯೋಗವು ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಹನ ಖರೀದಿಗೆ ಶುಭ ಸಮಯ ಇದಾಗಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗದಲ್ಲಿರುವವರು ತಮ್ಮ ಆಯ್ಕೆಯ ಸ್ಥಳದಲ್ಲಿ ಸ್ಥಳಾಂತರಗೊಳ್ಳಲು ಅಥವಾ ಕೆಲಸ ಮಾಡಲು ಅವಕಾಶವನ್ನು ಪಡೆಯಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ, ಗ್ರಹಗಳ ಚಲನೆಯು ಇದು ತುಂಬಾ ಶುಭಕರವಾಗಿದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರುತ್ತದೆ. ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಆರ್ಥಿಕ ಲಾಭದ ಹೊಸ ಮೂಲಗಳು ಹೊರಹೊಮ್ಮುತ್ತವೆ ಮತ್ತು ಹೂಡಿಕೆಗಳು ಲಾಭದಾಯಕವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಉತ್ತಮ ಸಮಯ ಇದಾಗಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net