

Lunar Eclipse: ಇದೇ ಸೆಪ್ಟೆಂಬರ್ 7ರಂದು ಪೂರ್ಣ ರಕ್ತ ಚಂದ್ರಗ್ರಹಣ ಗೋಚರಿಸಲಿದೆ. ಇದನ್ನು ರಾಹುಗ್ರಸ್ತ ಚಂದ್ರಗ್ರಹಣ ಎಂದೂ ಕರೆಯುತ್ತಾರೆ. ಗ್ರಹಣವು ರಾತ್ರಿ 9:58ಕ್ಕೆ ಪ್ರಾರಂಭವಾಗಲಿದ್ದು, ಮರುದಿನ, ಅಂದರೆ ಸೆಪ್ಟೆಂಬರ್ 8ರ ಮಧ್ಯರಾತ್ರಿ 1:26ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದ ಒಟ್ಟು ಅವಧಿ 3 ಗಂಟೆ 29 ನಿಮಿಷ. ಕುಂಭ ರಾಶಿಯಲ್ಲಿ ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಸಂಭವಿಸುವ ಚಂದ್ರಗ್ರಹಣ, ಭಾರತದಲ್ಲಿಯೂ ಸ್ಪಷ್ಟವಾಗಿ ಕಾಣಿಸಲಿದೆ ಎಂಬುದು ಗಮನಾರ್ಹ.
ಜ್ಯೋತಿಷ್ಯದ ಪ್ರಕಾರ, ರಾಶಿಚಕ್ರ ಚಿಹ್ನೆಗಳ ಮೇಲೆ ಸೂರ್ಯ ಮತ್ತು ಚಂದ್ರಗ್ರಹಣಗಳ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತದೆ. ಪೂರ್ಣ ಚಂದ್ರಗ್ರಹಣದಿಂದಾಗಿ, ಗ್ರಹಣವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಗಂಭೀರ ತೊಂದರೆಗಳನ್ನು ಎದುರಿಸಬಹುದು ಎಂದು ಸೂಚಿಸಲಾಗಿದೆ. ಗ್ರಹಣದ ಅವಧಿಯಲ್ಲಿ ಯಾವೆಲ್ಲ ರಾಶಿಯವರು ಜಾಗರೂಕರಾಗಿರಬೇಕು? ಪರಿಹಾರಗಳೇನು? ಎಂಬುದನ್ನು ಇಲ್ಲಿ ತಿಳಿಯೋಣ.
ಗ್ರಹಣದ ಪರಿಣಾಮದಿಂದಾಗಿ, ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಉದ್ಯಮಿಗಳಿಗೆ ಭಾರೀ ನಷ್ಟ ಸಂಭವಿಸಬಹುದು. ದಾಂಪತ್ಯ ಜೀವನದಲ್ಲಿ ಸಂತೋಷವಿರುವುದಿಲ್ಲ. ಮನೆಯಲ್ಲಿ ಅಶಾಂತಿಯ ವಾತಾವರಣ. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ. ಈ ರಾಶಿಯ ಮಹಿಳೆಯರು ಹೆಚ್ಚು ಜಾಗರೂಕರಾಗಿರುವುದು ಒಳಿತು.
ಪರಿಹಾರ: ಗಣಪತಿಯನ್ನು ಸ್ಮರಿಸಿ, ಮಂತ್ರವನ್ನು ಪಠನೆ: ಗಂ ಗಣಪತಯೇ ನಮಃ.
ದಾನ: ಬೆಲ್ಲ, ಕಡಲೆಕಾಯಿ.
ಗ್ರಹಣದಿಂದಾಗಿ, ಈ ರಾಶಿಯವರು ಅಶುಭ ಫಲಿತಾಂಶಗಳನ್ನು ನೋಡಲಿದ್ದಾರೆ. ಆರ್ಥಿಕ ನಷ್ಟದ ಸಾಧ್ಯತೆ. ನೀವು ಆತಂಕ, ಅಶಾಂತಿ, ಕೋಪ ಮತ್ತು ಬೇಸರವನ್ನು ಎದುರಿಸಬಹುದು.
ಪರಿಹಾರ: ವಿಷ್ಣುವನ್ನು ಸ್ಮರಿಸಿ, ನಮೋ ನಾರಾಯಣ ಮಂತ್ರವನ್ನು ಪಠಿಸಿ.
ದಾನ: ಗೋಧಿ
ಋಣಾತ್ಮಕ ಫಲಿತಾಂಶಗಳು ಒದಗಿ ಬರಬಹುದು. ದಾಂಪತ್ಯ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಆರ್ಥಿಕ ತೊಂದರೆಗಳ ಸಾಧ್ಯತೆ. ಶತ್ರುಗಳು ನಿಮ್ಮನ್ನು ವಂಚನೆಗೆ ದೂಡಲು ಪ್ರಯತ್ನಿಸುತ್ತಾರೆ.
ಪರಿಹಾರ: ಕೃಷ್ಣನನ್ನು ಸ್ಮರಿಸಿ, ಶ್ರೀ ಕೃಷ್ಣಾಯ ನಮಃ ಎಂದು ಜಪಿಸಿ.
ದಾನ: ಶುಭ ವಸ್ತುಗಳು
ಈ ರಾಶಿಚಕ್ರ ಚಿಹ್ನೆಯವರಿಗೆ ಈ ಗ್ರಹಣವು ವೃತ್ತಿಪರ ಜೀವನದಲ್ಲಿ ಸವಾಲುಗಳನ್ನು ತಂದಿಡಬಹುದು. ವೃತ್ತಿ ಅವಕಾಶಗಳನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಿ.
ಪರಿಹಾರ: ಓಂ ನಮಃ ಶಿವಾಯ ಎಂದು ಜಪಿಸಿ.
ದಾನ: ಕೆಂಪು ಬಟ್ಟೆ, ಮೆಣಸಿನಕಾಯಿ ಮತ್ತು ದಕ್ಷಿಣೆ.
ಕುಂಭ ರಾಶಿಯವರು ಚಂದ್ರಗ್ರಹಣದ ಬಳಿಕ ತಮ್ಮ ಸಂಗಾತಿಯ ವರ್ತನೆಯಿಂದ ಬೇಸತ್ತು ಅವರಿಂದ ದೂರವಿರುವ ಸಾಧ್ಯತೆ. ಆರೋಗ್ಯ ಸಮಸ್ಯೆಗಳೂ ಸಾಧ್ಯ. ಅವರು ಶಾಂತವಾಗಿರಲು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.
ಪರಿಹಾರ: ಭಗವಂತನನ್ನು ಸ್ಮರಿಸಿ, ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ.
ದಾನ: ಕಾಳುಗಳು, ಎಳ್ಳು ಮತ್ತು ದಕ್ಷಿಣೆ.
ಈ ಚಂದ್ರಗ್ರಹಣದ ಪರಿಣಾಮವಾಗಿ ಮೀನ ರಾಶಿಯವರು ಭಾವನಾತ್ಮಕ ಒತ್ತಡವನ್ನು ಎದುರಿಸಬಹುದು. ನಿಮ್ಮ ಆತಂಕ ಹೆಚ್ಚಾಗುತ್ತದೆ. ಅನಿರೀಕ್ಷಿತ ಸಮಸ್ಯೆಗಳ ಸಾಧ್ಯತೆಯೂ ಇದೆ.
ಪರಿಹಾರ: ಪರಮಾತ್ಮ ಮತ್ತು ದತ್ತಾತ್ರೇಯರನ್ನು ಸ್ಮರಿಸಿ. ಶ್ರೀ ಗುರುದೇವ ದತ್ತನನ್ನು ಜಪಿಸಿ.
ದಾನ: ಬೆಲ್ಲ ಅಥವಾ ಸಕ್ಕರೆ, ಹಾಲು, ಅರಿಶಿಣ.
ಟೀಕೆಗಳನ್ನು ಎದುರಿಸುವ ಸಾಧ್ಯತೆ. ಇದು ಅಸಮಾಧಾನಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ಕೋಪ ಮತ್ತು ಅಹಂಕಾರವು ನಿಮಗೆ ತೊಂದರೆ ಉಂಟುಮಾಡಬಹುದು.
ಪರಿಹಾರ: ಲಕ್ಷ್ಮಿ ದೇವಿಯನ್ನು ಸ್ಮರಿಸಿ. ಶ್ರೀ ಮಹಾಲಕ್ಷ್ಮಿ ನಮಃ ಎಂಬ ನಾಮವನ್ನು ಜಪಿಸಿ.
ದಾನ: ಹಾಲು, ಬೆಣ್ಣೆ ಮತ್ತು ಬಿಳಿ ಬಟ್ಟೆಗಳನ್ನು ದಾನ ಮಾಡಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.