Numerology: ಈ 3 ದಿನಾಂಕಗಳಲ್ಲಿ ಜನಿಸಿದವರು ಪದೇಪದೆ ಪ್ರೇಮ ವೈಫಲ್ಯ ಅನುಭವಿಸುತ್ತಾರೆ!

photo (8)
Published on

Numerology: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಸಹಾಯದಿಂದ, ನಿಮ್ಮ ವೃತ್ತಿಜೀವನದಿಂದ ಹಿಡಿದು ಪ್ರೇಮ ಜೀವನದವರೆಗೆ ಎಲ್ಲದರ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.

ಹೌದು, ನಿಮ್ಮ ಜನ್ಮ ದಿನಾಂಕದ ಸಂಖ್ಯೆಗಳನ್ನು ಸೇರಿಸುವ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ನೀವು ಕಂಡುಹಿಡಿಯಬಹುದು. ಉದಾಹರಣೆಗೆ ನೀವು ಯಾವುದೇ ತಿಂಗಳ 23 ರಂದು ಜನಿಸಿದ್ದೀರಿ ಎಂದು ಭಾವಿಸೋಣ, ಆಗ ನಿಮ್ಮ ಮೂಲ ಸಂಖ್ಯೆ 5 ಆಗಿರುತ್ತದೆ, ಏಕೆಂದರೆ 2+3=5. ಹಾಗೆಯೇ, ಮೊದಲನೆಯದಾಗಿ ಜನ್ಮ ದಿನಾಂಕದ ಮೂಲ ಸಂಖ್ಯೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. 5,14 ಅಥವಾ 23 ರಂದು ಜನಿಸಿದವರ ಮೂಲ ಸಂಖ್ಯೆ 5.

ಮೂಲ ಸಂಖ್ಯೆ 5

ಯಾವುದೇ ತಿಂಗಳ 5, 14 ಮತ್ತು 23ರಂದು ಜನಿಸಿದ ವ್ಯಕ್ತಿಗಳ ಮೂಲ ಸಂಖ್ಯೆ 5. ಬುಧ ಈ ರಾಶಿಯವರ ಸಂಖ್ಯೆ ಅಧಿಪತಿ. ಈ ದಿನಾಂಕಗಳಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಮತ್ತು ಪ್ರಣಯಶೀಲರು. ಈ ರಾಶಿಯವರು ವ್ಯವಹಾರಗಳಲ್ಲಿ ಶ್ರೇಷ್ಠರು. ಆದರೆ, ಪ್ರೀತಿಯಲ್ಲಿ ಮಾತ್ರ ಪದೇಪದೆ ಮೋಸ ಹೋಗುತ್ತಾರೆ.

5ರಂದು ಜನಿಸಿದವರು

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 5 ರಂದು ಜನಿಸಿದ ಜನರು ಕಠಿಣ ಪರಿಶ್ರಮಗಳಾಗಿರುತ್ತಾರೆ. ಅವರು ಏನೋ ಮಾಡಿಯಾದರೂ ಕೆಲಸದಲ್ಲಿ ಯಶಗಳಿಸುತ್ತಾರೆ. ಆದರೆ, ಪ್ರೀತಿಯಲ್ಲಿ ಮಾತ್ರ ಸೋಲು ಅನುಭವಿಸುತ್ತಾರೆ.

14ರಂದು ಜನಿಸಿದವರು

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 14 ನೇ ತಾರೀಖಿನಂದು ಜನಿಸಿದವರು ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ. ಅವರ ಎಲ್ಲಾ ಕನಸುಗಳು ನನಸಾಗುತ್ತವೆ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ, ಅವರು ಮೋಸ ಹೋಗುವ ಸಾಧ್ಯತೆ ಹೆಚ್ಚು. ಅವರಿಗೆ ನಿಜವಾದ ಪ್ರೀತಿ ಬಹಳ ತಡವಾಗಿ ಸಿಗುತ್ತದೆ.

23ರಂದು ಜನಿಸಿದವರು

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 23 ನೇ ತಾರೀಖಿನಂದು ಜನಿಸಿದ ಜನರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಆದರೆ ಅವರು ನಿಜವಾದ ಪ್ರೀತಿಯನ್ನು ಹುಡುಕುತ್ತಲೇ ಇರುತ್ತಾರೆ. ಅವರಿಗೆ ಅದು ಎಂದಿಗೂ ಸಿಗುವುದಿಲ್ಲ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net