ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಒಳಿತು

Nitya-Bhavishya-vvani-1-2-1
Published on

ಮೇಷ: ಸ್ಪರ್ಧಾತ್ಮಕ ಮನೋಭಾವ ಮೂಡಿ ಉತ್ಸಾಹ ಹೆಚ್ಚುತ್ತದೆ. ಆದರೆ ಅದಕ್ಕೆ ಶರೀರ ಒಪ್ಪುವ ಸಾಧ್ಯತೆ ಕಡಿಮೆ ಇದೆ. ಅದೃಷ್ಟ ಸಂಖ್ಯೆ: 3

ವೃಷಭ: ಸಂಬಂಧ ಇಲ್ಲದವರ ವ್ಯವಹಾರದಲ್ಲಿ ಸಾಕ್ಷಿ ನುಡಿಯಲು ನಿಮ್ಮನ್ನು ಕರೆಯುತ್ತಾರೆ. ನೀವು ದ್ವಂದ್ವದಲ್ಲಿರುತ್ತೀರಿ. ಅದೃಷ್ಟ ಸಂಖ್ಯೆ: 1

ಮಿಥುನ: ಹತ್ತಿರದ ಸ್ನೇಹಿತರೊಬ್ಬರ ಅಹಂಕಾರ ಕಂಡು ಬೇಸರವಾದೀತು. ಅದನ್ನು ತಿಳಿಸುವ ಅವಕಾಶ ನಿಮಗಿರದು. ಅದೃಷ್ಟ ಸಂಖ್ಯೆ: 2

ಕಟಕ: ಏನೇನೋ ಕೆಲಸ ಮಾಡಬೇಕೆಂದುಕೊಳ್ಳುವಿರಿ. ಆದರೆ ಚಿಕ್ಕಪುಟ್ಟ ಅನಾರೋಗ್ಯದಿಂದ ನಿಮ್ಮ ದಿನ ಹಾಳಾಗಬಹುದು. ಅದೃಷ್ಟ ಸಂಖ್ಯೆ: 6

ಸಿಂಹ: ಹೊಸತನ್ನು ಮಾಡಲು ಪ್ರಯತ್ನಿಸದೆ ಮಾಡಿದ್ದೇ ಮಾಡಿ ಬೇಸರ ಆಗುತ್ತದೆ. ಆದರೆ ನೀವು ಅದಕ್ಕೆ ಒಗ್ಗಿದ್ದೀರಿ. ಅದೃಷ್ಟ ಸಂಖ್ಯೆ: 5

ಕನ್ಯಾ: ಕಷ್ಟಗಳು ಸಹಜ. ಆದರೆ ಯಾರೂ ಪಡದ ಕಷ್ಟ ಬಂದಿಲ್ಲ ಎಂದು ಸಮಾಧಾನಪಟ್ಟು ಮುಂದಕ್ಕೆ ಸಾಗಿ. ಅದೃಷ್ಟ ಸಂಖ್ಯೆ: 9

ತುಲಾ: ನಿಮಗೆ ಏಕಾಗ್ರತೆ ಕಷ್ಟ. ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳಲಾಗದೆ ದ್ವಂದ್ವದಲ್ಲಿ ಬೀಳುವಿರಿ. ಅದೃಷ್ಟ ಸಂಖ್ಯೆ: 6

ವೃಶ್ಚಿಕ: ಆಕಸ್ಮಿಕವಾಗಿ ಸಹಾಯ ಕೇಳಿ ಬರುವ ಸ್ನೇಹಿತನಿಗೆ ಏನು ಹೇಳಬೇಕೆಂದು ಮೊದಲೇ ಸಿದ್ಧರಾದರೆ ಉತ್ತಮ. ಅದೃಷ್ಟ ಸಂಖ್ಯೆ: 7

ಧನುಸ್ಸು: ಬಹಳ ಮಿತ್ರರು ನಾಟಕೀಯ ಗೆಳೆತನವನ್ನು ಪ್ರದರ್ಶಿಸುತ್ತಾರೆ. ಅದೇ ನಿಮ್ಮ ಮನಸ್ಸಿಗೆ ಬೇಸರ ಮೂಡಿಸುತ್ತದೆ. ಅದೃಷ್ಟ ಸಂಖ್ಯೆ: 1

ಮಕರ: ಕೆಲಸ ಮಾಡುತ್ತೇನೆ ಎನ್ನುವಿರಿ. ಆದರೆ ಬರೀ ಮಾತೇ ಕೃತಿಯಾಗದು. ಅದರಿಂದ ನಿಮಗೆ ಉಪದೇಶ ತಪ್ಪದು. ಅದೃಷ್ಟ ಸಂಖ್ಯೆ: 5

ಕುಂಭ: ಬಹಳ ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಆದರೆ ಕೊನೆಯಲ್ಲಿ ಆಗುವ ಎಡವಟ್ಟಿನಿಂದ ಎಲ್ಲ ಹಾಳಾಗುವ ಸಾಧ್ಯತೆ. ಅದೃಷ್ಟ ಸಂಖ್ಯೆ: 4

ಮೀನ: ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯ. ಕಾರಣ ಕುತ್ತಿಗೆನೋವು, ಬೆನ್ನುನೋವು ಬಂದೀತು. ಅದೃಷ್ಟ ಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net