ಭಾರೀ ಆರ್ಥಿಕ ಲಾಭದತ್ತ ಈ ರಾಶಿಗಳು: ಬುಧ ಸಂಚಾರದ ಮಹಾಯೋಗ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಗ್ರಹಗಳ ಅಧಿಪತಿ ಬುಧನು ಡಿಸೆಂಬರ್​ 20 ರಂದು ಜ್ಯೇಷ್ಠ ನಕ್ಷತ್ರದ ಮೊದಲ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಜ್ಯೋತಿಷ್ಯದ ಪ್ರಕಾರ, ಬುಧನ ಈ ಸಂಚಾರವು ೧೨ ರಾಶಿಚಕ್ರಗಳ ಮೇಲೆ ಶುಭ ಮತ್ತು ಅಶುಭ ಎರಡೂ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ, ಈ ಬುಧನ ಸಂಚಾರವು ಕೆಲವೊಂದು ರಾಶಿಚಕ್ರಗಳ ಜನರಿಗೆ ಉತ್ತಮ ಲಾಭಗಳಾಗುವ ನಿರೀಕ್ಷೆ ಇದೆ ಎಂದು ಹೇಳಿದೆ. ಈ ನಕ್ಷತ್ರದ ಸಂಚಾರದಿಂದ ಯಾವ ರಾಶಿ ಚಕ್ರಗಳು ಲಾಭವನ್ನು ಪಡೆಯಲಿವೆ ಎಂದು ನೋಡೋಣ ಬನ್ನಿ....

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಜನರ ಸಂಭಾಷಣೆಗಳು ಮೊದಲಿಗಿಂತ ಹೆಚ್ಚು ಆಸಕ್ತಿದಾಯಕವಾಗಿದೆ. ನಿಮ್ಮ ಸಂಬಂಧದಲ್ಲಿ ಉಂಟಾಗುತ್ತಿದ್ದ ಘರ್ಷಣೆಗಳು ಕಡಿಮೆಯಾಗಲಿವೆ. ಕಚೇರಿಗಳಲ್ಲಿ ಸಂತೋಷದ ವಾತಾವರಣವಿರಲಿದ್ದು, ಅಧಿಕಾರಿಗಳಿಂದ ಪ್ರಶಂಸೆ ಪಡೆಯಲಿದ್ದೀರಿ. ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ.

ಮಿಥುನ ರಾಶಿ

ಬುಧ ಸಂಚಾರವು ಮಿಥುನ ರಾಶಿಯವರಿಗೆ ಲಾಭದ ಹಾದಿಯನ್ನು ಮಾಡಿಕೊಡುತ್ತದೆ. ಈ ಜನರಿಗೆ ಯಶಸ್ಸಿನ ಹಾದಿ ಹೆಚ್ಚಾಗಲಿದೆ. ಉದ್ಯೋಗ ಇಲ್ಲದವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದದಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣಗೊಳಿಸುವಂತಹ ಸಮಯ ಇದಾಗಿದೆ.

ಕನ್ಯಾ ರಾಶಿ

ಬುಧನ ಈ ಸಂಚಾರವು ಕನ್ಯಾ ರಾಶಿಯವರಿಗೆ ಒಳ್ಳೆಯ ಸಮಯವನ್ನು ತರಬಹುದು. ಈ ಜನರಿಗೆ ಭೌತಿಕ ಸಂತೋಷವನ್ನು ಹೆಚ್ಚಾಗಲಿದ್ದು, ಹೊಸ ಬಸ್ನೇಹಿತರ ಪರಿಚಯವಾಗಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ವೃತ್ತಿಜೀವನದಲ್ಲಿ ಅನೇಕ ಲಾಭಗಳನ್ನು ಕಂಡುಕೊಳ್ಳಲಿದ್ದಾರೆ. ವ್ಯಾಪಾರ ಮಾಡುವವರಿಗೆ ಆರ್ಥಿಕ ಲಾಭಗಳ ನಿರೀಕ್ಷೆ ಇದೆ. ಈ ಸಮಯದಲ್ಲಿ ಹಳೆಯ ಹೂಡಿಕೆಗಳು ಹೆಚ್ಚು ಲಾಭವನ್ನು ನೀಡುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net