ಬುಧ ಸಂಚಾರ 2026: ಈ ರಾಶಿಯವರಿಗೆ ಒಲಿಯಲಿದೆ ಅಪಾರ ಐಶ್ವರ್ಯ! ನಿಮ್ದೂ ಇದೇ ರಾಶಿನಾ? Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಹೊಸ ವರ್ಷ 2026 ಆರಂಭವಾಗಿದೆ ಅಂದಿನಿಂದಲೇ ಬುಧ ಗ್ರಹವು ತನ್ನ ಪಥವನ್ನು ಬದಲಾಯಿಸಿ, ಪೂರ್ವಾಷಾಢ ಶುಕ್ರ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಬುದ್ಧಿವಂತಿಕೆ, ವ್ಯವಹಾರ, ಸಂವಹನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರಿಂದ ಅನೇಕ ರಾಶಿಗಳಲ್ಲಿ ನಕ್ಷತ್ರದ ಬದಲಾವಣೆಯಿಂದ ಹೊಸ ವರ್ಷವು ಆನಂದದಾಯಕವಾಗಿರುತ್ತದೆ.
ಆದಾಗ್ಯೂ, ಈ ಪರಿವರ್ತನೆಯ ಸಮಯದಲ್ಲಿ ಕೆಲವರ ವೃತ್ತಿಜೀವನದಲ್ಲಿ ಆಗುವ ಬದಲಾವಣೆಗಳು ವರ್ಷ ಪೂರ್ತಿ ಪರಿಣಾಮವನ್ನು ಬೀರಬಹುದು. ಇದರ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಬಹುದು. ಈ ಬದಲಾವಣೆಗಳು ಯಾವ ರಾಶಿ ಚಕ್ರದವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ನೋಡೋಣ ಬನ್ನಿ..

ಮೇಷ ರಾಶಿ

ಮೇಷ ರಾಶಿಯವರಿಗೆ, ಬುಧನ ಈ ಸಂಚಾರವು ಅನೇಕ ಲಾಭದ ಮಾರ್ಗಗಳನ್ನು ತೆರೆದುಕೊಡುತ್ತದೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಕಠಿಣ ಪರಿಶ್ರಮವು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ. ಕೆಲವರು ತಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳನ್ನು ಸಹ ಕಂಡುಕೊಳ್ಳಬಹುದು. ಆರೋಗ್ಯ ತೃಪ್ತಿಕರವಾಗಿರುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗಿದ್ದು, ಸಂತೋಷದಿಂದ ಕಾಲ ಕಳೆಯಲಿದ್ದೀರಿ.

ಧನು ರಾಶಿ

ಧನು ರಾಶಿಯವರಿಗೆ ಬುಧನ ಸಂಚಾರವು ಉತ್ತೇಜನ ನೀಡುತ್ತದೆ. ಇದು ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ಮಾಡಿ ಮುಗಿಸಲು ಪ್ರೇರೇಪಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಪ್ರೇಮ ಸಂಬಂಧಗಳು ಸಾಮರಸ್ಯದಿಂದ ಮುಂದುವರೆಯುತ್ತದೆ. ಈ ವರ್ಷವು ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಹಿಂದೆ ಸಾಲವಾಗಿ ನೀಡಿದ್ದ ಹಣ ಮರಳಿ ಬರುವ ಸಾಧ್ಯತೆ ಹೆಚ್ಚಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಬುಧನ ಸಂಚಾರವು ಒಳ್ಳೆಯದಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ಪ್ರಯತ್ನಗಳು ಈಗ ಫಲ ನೀಡಬಹುದು. ಉದ್ಯೋಗಿಗಳಿಗೆ ಕಚೇರಿಗಳಲ್ಲಿ ಒಳ್ಳೆಯ ಅವಕಾಶಗಳು ಸಿಗಲಿವೆ. ಈ ಸಮಯದಲ್ಲಿ ಇವರಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕುಟುಂಬಸ್ಥರಿಂದ ಬೆಂಬಲ ಸಿಗಲಿದ್ದು, ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net