ರೋಹಿಣಿ ನಕ್ಷತ್ರಕ್ಕೆ ಬುಧನ ಎಂಟ್ರಿ: ಈ ರಾಶಿಯವರ ಜೀವನದಲ್ಲಿ ಬರಲಿದೆ ಸುಖ-ಸಮೃದ್ಧಿ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ಧಿಶಕ್ತಿ, ಸಂವಹನ ಮತ್ತು ವ್ಯಾಪಾರ-ವ್ಯವಹಾರಗಳ ಕಾರಕ ಎಂದು ಕರೆಯಲ್ಪಡುವ ಬುಧ ಗ್ರಹವು ಶೀಘ್ರದಲ್ಲೇ ತನ್ನ ನಕ್ಷತ್ರ ಪಥವನ್ನು ಬದಲಾಯಿಸಲಿದೆ. ಗ್ರಹಗಳ ರಾಜಕುಮಾರ ಎಂದು ವರ್ಣಿಸಲ್ಪಡುವ ಬುಧನ ಈ ಸಂಚಾರವು ವ್ಯಕ್ತಿಯ ಆರ್ಥಿಕ ಮತ್ತು ಬೌದ್ಧಿಕ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
ಮುಂಬರುವ ಮಂಗಳವಾರ, ಮೇ 19, 2026 ರಂದು ಮಧ್ಯಾಹ್ನ 2:37 ಕ್ಕೆ ಬುಧ ಗ್ರಹವು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಲಿದೆ. ಚಂದ್ರನ ಆಧಿಪತ್ಯದ ರೋಹಿಣಿ ನಕ್ಷತ್ರಕ್ಕೆ ಬುಧನ ಆಗಮನವು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ವಿಶಿಷ್ಟವಾದ ಘಟನೆಯೆಂದು ಪರಿಗಣಿಸಲಾಗಿದೆ.
ಬುಧನ ಬುದ್ಧಿನತ್ತೆ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುವುದರಿಂದ ಕೆಲವೊಂದು ರಾಶಿಯವರಿಗೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಿದ್ರೆ ಬುಧನ ಸಂಚಾರದಿಂದ ಯಾವ ರಾಶಿಯವರಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಬುಧನು ಆಳುವುದರಿಂದ ಈ ಜನರಿಗೆ ಬಹಳ ಉಪಯೋಗ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ಜನರು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದಾರೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯವಾಗಿದೆ. ಕಚೇರಿಗಳಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಪಿತ್ರಾರ್ಜಿತ ಆಸ್ತಿಗಳು ಗಣನೀಯ ಲಾಭವನ್ನು ನೀಡಲಿವೆ.

ಕರ್ಕಾಟಕ ರಾಶಿ

ರೋಹಿಣಿಯನ್ನು ಚಂದ್ರನು ಮತ್ತು ಕರ್ಕ ರಾಶಿಯನ್ನು ಚಂದ್ರನು ಆಳುವುದರಿಂದ, ಈ ರಾಶಿಚಕ್ರ ಚಿಹ್ನೆಯು ನಿಮಗೆ ಅದೃಷ್ಟವನ್ನು ತರುತ್ತದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಹೆಚ್ಚಾಗಲಿದ್ದು, ಜವಬ್ದಾರಿ ತೆಗೆದುಕೊಳ್ಳಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ದೂರ ಪ್ರಯಾಣ ಮಾಡಲಿದ್ದೀರಿ. 

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಸಾಲಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ತಂದೆ-ತಾಯಿ ಆಶೀರ್ವಾದದೊಂದಿಗೆ ಹೊಸ ಕೆಲಸಕ್ಕೆ ಕೈ ಹಾಕಲಿದ್ದೀರಿ. ಹೊಸ ವಾಹನ ಮತ್ತು ಆಸ್ತಿ ಖರೀದಿಸುವವರಿಗೆ ಈ ಸಮಯ ಬಹಳ ಪ್ರಯೋಜನವಾಗಲಿದೆ. ನಿಮಗೆ ಬರಬೇಕಿದ್ದ ಹಣ ಮರಳಿ ಸಿಗುವ ಸಾಧ್ಯತೆ ಇದೆ.  ಕುಟುಂಬದೊಂದಿಗೆ ನೆಮ್ಮದಿ ವಾತಾವರಣ ಸಿಗಲಿದ್ದು, ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ (ಏಜೆನ್ಸೀಸ್). 
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net