Astrology: ಫೆಬ್ರವರಿಯಲ್ಲಿ ಸೂರ್ಯನು ಶತಭಿಷ ನಕ್ಷತ್ರಕ್ಕೆ ಸಾಗುತ್ತಾನೆ. ಅದೇ ರೀತಿ ಮಂಗಳನೂ ಕೂಡ ಈ ನಕ್ಷತ್ರಕ್ಕೆ ಸಾಗುತ್ತಾನೆ. ಈ ಸಮಯದಲ್ಲಿ ಸೂರ್ಯ ಮತ್ತು ಮಂಗಳನ ಗ್ರಹಗಳು ಶತಭಿಷ ನಕ್ಷತ್ರದಲ್ಲಿ ಒಟ್ಟಿಗೆ ನೆಲೆಸಿ ಮಂಗಳ ಆದಿತ್ಯ ರಾಜಯೋಗವನ್ನು ಸೃಷ್ಟಿಸುತ್ತವೆ. ಜ್ಯೋತಿಷ್ಯದ ಪ್ರಕಾರ, ಈ ರಾಜಯೋಗವು ಸಂಪತ್ತು, ಯಶಸ್ಸು ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಇದರಿಂದ ಕೆಲವೊಂದು ರಾಶಿಗಳು ಪ್ರಯೋಜನ ಪಡೆಯಲಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..