

Vastu tips: ಎಲ್ಲರ ಮನೆಯಲ್ಲೂ ಅವರು ಪೂಜಿಸುವ ದೇವರುಗಳ ಫೋಟೋ ಇರುವುದು ಸಾಮಾನ್ಯವಾಗಿರುತ್ತದೆ. ಅಂದಹಾಗೇ, ಕೆಲವು ಧಾರ್ಮಿಕ ಗ್ರಂಥಗಳು ಹಾಗೂ ವಾಸ್ತು ಶಾಸ್ತ್ರವು ಕೆಲವು ದೇವರುಗಳ ಫೋಟೋಗಳನ್ನು ಮನೆಯಲ್ಲಿ ಹಾಗೂ ದೇವಾಲಯದಲ್ಲಿ ಸರಿಯಾದ ದಿಕ್ಕಿನಲ್ಲಿಡಬೇಕೆಂದು ಹೇಳುತ್ತವೆ. ಅದೇ ರೀತಿಯಲ್ಲಿ ಹನುಮಂತನ ಫೋಟೋವನ್ನು ಮನೆಯಲ್ಲಿ ಇಡಬೇಕೆ ಅಥವಾ ಇಡಬಾರದೇ ಎಂಬ ಗೊಂದಲ ಆದಷ್ಟು ಜನರಲ್ಲಿ ಇರುವಂತದ್ದು.
ನೀವೇನಾದರೂ, ಪಂಚಮುಖಿ ಆಂಜನೇಯನ ವಿಗ್ರಹ ಹಾಗೂ ಫೋಟೋವನ್ನು ಮನೆಯಲ್ಲಿ ಇಡಬೇಕೆಂದು ಬಯಸಿದರೆ ವಿಶೇಷವಾಗಿ ಕಾಳಜಿ ವಹಿಸಬೇಕು. ಈ ದೇವರ ಪೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ನಿಮಗೆ ಕೆಡಕು ಉಂಟಾಗುವುದಂತೂ ಗ್ಯಾರಂಟಿ.
* ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪಂಚಮುಖಿ ಹನುಮಂತನ ಫೋಟೋ ಇಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ, ಇದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಉತ್ತಮ ಫಲವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ದೇವರ ಫೋಟೋವನ್ನು ಇಡುವುದರಿಂದ ನಿಮ್ಮಲ್ಲಿರುವ ಭಯ ದೂರವಾಗಿ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ದೂರವಾಗುವಂತೆ ಮಾಡುತ್ತದೆ.
* ಮನೆಯಲ್ಲಿ ಪಂಚಮುಖಿ ಹನುಮಂತನ ಛಾಯಾಚಿತ್ರವನ್ನು ಎಂದಿಗೂ ಅಶುದ್ಧ ಸ್ಥಳದಲ್ಲಿ ಇಡಬಾರದು. ವಿಗ್ರಹ ಮತ್ತು ಛಾಯಾಚಿತ್ರವನ್ನು ಕೆಟ್ಟ ವಾಸನೆ, ಕೊಳಕು ಮತ್ತು ಧೂಳು ಇರುವಂತಹ ಸ್ಥಳದಲ್ಲಿ ಇಡುವುದರಿಂದ ಅದು ವ್ಯಕ್ತಿಯ ಜೀವನ ಮತ್ತು ಮನೆಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ ಈ ಫೋಟೋವನ್ನು ಮನೆಯ ಬಾಗಿಲಿನ ಮೇಲೆ ಇರಿಸುವಾಗ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಯೋಚಿಸುವುದು ಉತ್ತಮ.
* ಪಂಚಮುಖಿ ಹನುಮಂತನ ಛಾಯಾಚಿತ್ರವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ಇದು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ. ಕುಟುಂಬದ ವಾತಾವರಣವು ಸಂತೋಷವಾಗಿದ್ದು, ರಾತ್ರಿ ಬೀಳುವಂತಹ ಕೆಟ್ಟ ಕನಸುಗಳನ್ನು ತಡೆಯುತ್ತದೆ.
* ವಾಸ್ತು ಶಾಸ್ತ್ರದ ಪ್ರಕಾರ, ಪಂಚಮುಖಿ ಹನುಮಂತನ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ದುಷ್ಟಶಕ್ತಿಗಳು ಮನೆ ಒಳಗೆ ಬರುವುದಿಲ್ಲ. ಇದು ವಾಸ್ತು ದೋಷವನ್ನು ತೆಗೆದುಹಾಕಲು ಸಹಾಯ ಮಾಡಿ. ಯಾರ ದೃಷ್ಟಿಯೂ ನಿಮ್ಮ ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳುತ್ತದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.