ಲಾಭ ದೃಷ್ಟಿ ಯೋಗ 2026: ಮೇ 11ರಿಂದ ಈ ರಾಶಿಯವರಿಗೆ ಕುಬೇರ ಯೋಗ, ಕೈ ಇಟ್ಟಲ್ಲೆಲ್ಲಾ ಚಿನ್ನ! Astrology

Astrology ಸಾಂದರ್ಭಿಕ ಚಿತ್ರ
Astrology ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯದ ಪ್ರಕಾರ, ಮೇ 11, 2026 ರಿಂದ ಸೂರ್ಯ ಮತ್ತು ಗುರುಗಳ ನಡುವೆ "ಲಭ ದೃಷ್ಟಿ ಯೋಗಂ" ಎಂಬ ವಿಶೇಷ ಶುಭ ಸಂಯೋಜನೆಯು ರೂಪುಗೊಳ್ಳುತ್ತದೆ. ಈ ವೇಳೆ ಸೂರ್ಯನು ಗುರುವಿನ ಮೇಲೆ ತನ್ನ ಅಂಶವನ್ನು ಬೀರುತ್ತಾನೆ. ಇದು ಜನರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವದ ಜವಬ್ದಾರಿಯನ್ನು ತುಂಬಲು ಪ್ರೇರೇಪಿಸುತ್ತದೆ.
ಜ್ಯೋತಿಷ್ಯದ ಪ್ರಕಾರ, ಈ ಎರಡು ಗ್ರಹಗಳು ಒಂದು ನಿರ್ದಿಷ್ಟ ಕೋನದಲ್ಲಿ ಬಂದಾಗ ಈ ಸಂಯೋಗ ಸಂಭವಿಸುತ್ತದೆ. ಈ ಸಂಯೋಗವು ವ್ಯಕ್ತಿಗಳಿಗೆ ಪ್ರಗತಿ ಮತ್ತು ಹೊಸ ಅವಕಾಶಗಳನ್ನು ತರಲು ಸಹಾಯ ಮಾಡುತ್ತದೆ. ಈ ಸಮಯವು ಕೆಲವೊಂದು ರಾಶಿಚಕ್ರದವರಿಗೆ ಬಹಳ ಉಪಯುಕ್ತ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ....

ಸಿಂಹ ರಾಶಿ

ಗ್ರಹಗಳ ಸಂಯೋಜನೆಯು ಸಿಂಹ ರಾಶಿಯವರಿಗೆ ಗೌರವ ಮತ್ತು ಯಶಸ್ಸನ್ನು ತರುವಂತಹ ಸಮಯ ಇದಾಗಿದೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಸ್ಥಗಿತಗೊಂಡ ಯೋಜನೆಗಳನ್ನು ಪುನರಂಭಿಸಬಹುದು. ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಧನು ರಾಶಿ

ಗ್ರಹಗಳ ಸಂಯೋಗವು ಧನು ರಾಶಿಯವರಿಗೆ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಅಧ್ಯಯನ, ವೃತ್ತಿ ಮತ್ತು ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸಮಯ ಇದಾಗಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದ್ದು, ಹಠಾತ್ ಲಾಭಗಳು ಸಾಧ್ಯತೆಗಳಿವೆ. ಅಲ್ಲದೇ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ, ಈ ಸಮಯ ಸ್ಥಿರತೆ ಮತ್ತು ಪ್ರಗತಿಯನ್ನು ತರುವಂತಹ ಸಮಯ ಇದಾಗಿದೆ. ಕೆಲಸದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭಗಳು ಸಿಗಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಈ ಸಮಯದಲ್ಲಿ ಸಂಬಂಧಗಳು ಸಿಹಿಯಾಗಲಿದ್ದು, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net