ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಗ್ರಹವೆಂದು ಪರಿಗಣಿಸಲ್ಪಟ್ಟಿದೆ. ಕೇತುವು ಸಂಸಾರದ ಜಂಜಾಟಗಳಿಂದ ಬಿಡುಗಡೆ ನೀಡಿ, ಆಧ್ಯಾತ್ಮಿಕ ಉನ್ನತಿಗೆ ದಾರಿ ಮಾಡಿಕೊಡುತ್ತಾನೆ. ಹಾಗಾಗಿ ಇವನನ್ನು 'ಮೋಕ್ಷ ಕಾರಕ' ಎನ್ನುತ್ತಾರೆ. ಈ ಗ್ರಹವು ಮುಖ್ಯವಾಗಿ ಆಧ್ಯಾತ್ಮಿಕತೆ, ಅಂತಃಪ್ರಜ್ಞೆ, ಕರ್ಮ ಮತ್ತು ಅನಿರೀಕ್ಷಿತ ಘಟನೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಆದಾಗ್ಯೂ, ಕೇತುವಿನ ಚಲನೆಯಿಂದ ಅನೇಕರ ಜೀವನದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಹೇಳುತ್ತಾರೆ.