2026 ಚತುರ್ಗ್ರಹಿ ಯೋಗ: ಈ ರಾಶಿಯವರ ಮನೆಗೆ ಬರಲಿದ್ದಾಳೆ ಸಂಪತ್ತಿನ ಅಧಿದೇವತೆ! ನಿಮ್ದೂ ಇದೇ ರಾಶಿನಾ?Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಹೊಸ ವರ್ಷ ಜನವರಿ 2026 ಆರಂಭವಾಗಿದೆ ಅದರ ಜೊತೆಗೆ ಹೊಸ ಭರವಸೆಗಳಿಂದ ಜನರು ಬದುಕಲು ಪ್ರಾರಂಭಿಸಿದ್ದಾರೆ. ಅಂದಹಾಗೇ, ಈ ವರ್ಷದ ಆರಂಭದಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ಗ್ರಹಗಳ ರಾಜ ಸೂರ್ಯನು ಸಂಪತ್ತು ಮತ್ತು ಸಮೃದ್ಧಿ ನೀಡುತ್ತದೆ ಎಂದು ಹೇಳಲಾಗುತ್ತದೆ.
ಈ ಗ್ರಹಗಳ ಸಂಯೋಜನೆಯು ಲಕ್ಷ್ಮಿ ನಾರಾಯಣ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಋಷಕ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದ ಕೆಲವು ರಾಶಿಗಳಲ್ಲಿ ವೃತ್ತಿ, ಸಂಪತ್ತು, ಗೌರವ ಮತ್ತು ಯಶಸ್ಸನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಚತುರ್ಗ್ರಹಿ ಯೋಗವು ಕರ್ಮ ಭಾವದಲ್ಲಿ ರೂಪುಗೊಳ್ಳುತ್ತದೆ. ಇದರಿಂದ ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಗೌರವವನ್ನು ಪಡೆಯಲಿದ್ದಾರೆ. ಉದ್ಯೋಗ, ಬಡ್ತಿ ಅಥವಾ ಉನ್ನತ ಸ್ಥಾನವನ್ನು ಪಡೆಯಲಾಗುತ್ತದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಉದ್ಯಮಿಗಳಿಗೆ ದೊಡ್ಡ ಆದೇಶಗಳು, ಹೊಸ ಗ್ರಾಹಕರು ಮತ್ತು ಲಾಭದಲ್ಲಿ ಗಮನಾರ್ಹ ಹೆಚ್ಚಳವಾಗುವ ಸಾಧ್ಯತೆಯಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಜನವರಿಯು ತುಂಬಾ ಫಲಪ್ರದವಾಗಲಿದೆ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದೆ. ಉನ್ನತ ಶಿಕ್ಷಣ, ವಿದೇಶ ಪ್ರಯಾಣ ಅಥವಾ ವಿದೇಶಗಳಿಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ವರ್ಷವು ಮಾನಸಿಕವಾಗಿ ತುಂಬಾ ಉನ್ನತರಾಗಲಿದ್ದೀರಿ. ಆರ್ಥಿಕವಾಗಿ ಸಂಪತ್ತನ್ನು ಹೊಂದಲಿದ್ದಿರಿ.

ಮಕರ ರಾಶಿ

ಮಕರ ರಾಶಿಯವರಿಗೆ, ಈ ಸಂಯೋಗವು ಲಗ್ನ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ವೃತ್ತಿ, ಸಂಪತ್ತು, ಆರೋಗ್ಯದಲ್ಲಿ ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ತುಂಬಾ ಶುಭ ಒಳ್ಳೆಯ ಸಮಯವಾಗಿದೆ. ಈ ವರ್ಷ ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net