ನಿಮ್ಮ ಮನೆಯ ಸುತ್ತ ಮುತ್ತ ತೆಂಗಿನ ಮರ ಇದಿಯೇ? ಹಾಗಿದ್ದರೆ ವಾಸ್ತು ಏನನ್ನು ಸೂಚಿಸುತ್ತದೆ! Vastu tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu tips: ತೆಂಗಿನ ಮರಗಳು ಸೌಂದರ್ಯವನ್ನು ಮಾತ್ರವಲ್ಲದೆ ಉತ್ತಮ ಶಕ್ತಿಯನ್ನು ಸಹ ತರುತ್ತವೆ. ಈ ಮರವನ್ನು ಪವಿತ್ರ ಮತ್ತು ದೇವರುಗಳಿಗೆ ಪ್ರಿಯವೆಂದು ಕತೆಯಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತೆಂಗಿನಕಾಯಿಯನ್ನು ಅನೇಕ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇದು ಸಕರಾತ್ಮಕ ಶಕ್ತಿಯನ್ನು ಮನೆಗೆ ಹೊತ್ತು ತರುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ ಮೂಲೆಯಲ್ಲಿ ತೆಂಗಿನ ಮರವನ್ನು ನೆಡುವುದರಿಂದು ಇದು ಮನೆಗೆ ಉತ್ತಮ ಆರ್ಥಿಕ ಲಾಭಗಳನ್ನು ನೀಡುತ್ತದೆ. ಹಾಗೆ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಅಪಾಯಕಾರಿ ಎಂದು ಸೂಚಿಸಲಾಗುತ್ತದೆ. ಹಾಗಾಗಿ ನೀವೇನಾದರೂ, ಮನೆಯ ಸುತ್ತ ಮುತ್ತ ತೆಂಗಿನ ಮರವನ್ನು ನೆಡಲು ಬಯಸಿದರೆ, ಯಾವಾಗಲೂ ಒಳ್ಳೆಯ ದಿಕ್ಕನ್ನೇ ಆರಿಸಿಕೊಳ್ಳಬೇಕು. ಇದು ನಿಮ್ಮ ಮನೆಗೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.
ಮಳೆಗಾಲದ ಸಮಯದಲ್ಲಿ ತೆಂಗಿನ ಮರಗಳಲ್ಲಿ ಅಸಾಮಾನ್ಯ ಹೂವುಗಳು ಮತ್ತು ಹಣ್ಣು ಬಿಡುವುದನ್ನು ನೋಡಬಹುದು. ಪೂಜೆ ಮತ್ತು ಹಬ್ಬಗಳ ಸಮಯದಲ್ಲಿ ತೆಂಗಿನಕಾಯಿ ಅತ್ಯಗತ್ಯ. ಹಾಗಾಗಿ ಮನೆಯಲ್ಲಿ ತೆಂಗಿನ ಮರವನ್ನು ಹೊಂದಿರುವುದು ಧಾರ್ಮಿಕವಾಗಿ ಶುಭವಾಗಿದೆ. ಇದು ಮನೆಗೆ ಶಾಖವನ್ನು ಕಡಿಮೆ ಮಾಡಿ, ವಾತಾವರಣವನ್ನು ತಂಪಾಗಿರಿಸುತ್ತದೆ.
ಮನೆಯಲ್ಲಿ ತೆಂಗಿನ ಮರ ನೆಡುವುದು ಶಾಂತಿ, ಸಮೃದ್ಧಿ ಮತ್ತು ಉತ್ತಮ ಶಕ್ತಿ ತುಂಬಲು ಸಹಾಯವಾಗುತ್ತದೆ. ಹಾಗಾಗಿ ತಪ್ಪು ದಿಕ್ಕಿನಲ್ಲಿ ಮರವನ್ನು ನೆಡುವುದರಿಂದ ಮನೆಗೆ ವಾಸ್ತು ದೋಷ ಉಂಟಾಗಬಹುದು. ಹಾಗಾಗಿ ಆದಷ್ಟು ಜಾಗೃತಿಯಿಂದ ಸರಿಯಾದ ಸ್ಥಳದಲ್ಲಿ ತೆಂಗಿನ ಮರ ನೆಡುವುದು ಶುಭವಾಗಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net