ಬಾತ್ರೂಮ್‌ನಲ್ಲಿ ಕನ್ನಡಿ ಹಾಕುವ ಮುನ್ನ ಹುಷಾರ್! ಈ ಸಣ್ಣ ತಪ್ಪು ನಿಮ್ಮ ನೆಮ್ಮದಿ ಕೆಡಿಸಬಹುದು..Bathroom mirror

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Bathroom mirror: ಸ್ನಾನಗೃಹವನ್ನು ಮನೆಯ ಬಹಳ ಮುಖ್ಯ ಭಾಗವೆಂದು ಪರಿಗಣಿಸಲಾಗುತ್ತದೆ. ಆದರಿಂದ ಅವುಗಳ ಸ್ವಚ್ಛತೆಯ ಕಡೆ ಗಮನಹರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದಾಗ್ಯೂ, ಸ್ನಾನ ಗೃಹದಲ್ಲಿ ಸ್ಥಾಪಿಸಲಾದ ಕನ್ನಡಿಯ ಬಗ್ಗೆ ಗಮನಹರಿಸುವುದು ಕೂಡ ವಿಶೇಷವಾಗಿರುತ್ತದೆ.
ಸ್ನಾನಗೃಹದಲ್ಲಿರುವ ಕನ್ನಡಿಯು ನಿಮ್ಮ ದೈನಂದಿನ ಜೀವನದ ಮೇಲೆ ಹಾಗೂ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಸ್ನಾನಗೃಹದಲ್ಲಿ ಹಲವು ಬಾರಿ, ಯಾವುದೇ ಜ್ಞಾನವಿಲ್ಲದೆ, ಅಥವಾ ತಪ್ಪಾದ ಸ್ಥಳದಲ್ಲಿ ಕನ್ನಡಿಯನ್ನು ಇಡುತ್ತೇವೆ. ಇವು ನಮಗೆ ಅರಿವಿಲ್ಲದೆಯೇ ನಕರಾತ್ಮಕ ಪರಿಣಾಮಗಳು ಬೀರಬಹುದು. ಹಾಗಾಗಿ ಕನ್ನಡಿಯನ್ನು ಇರಿಸುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ದಿಕ್ಕಿನತ್ತ ಗಮನ ಹರಿಸಿ

ಸ್ನಾನಗೃಹದಲ್ಲಿ ಕನ್ನಡಿ ಇಡುವುದು ತಪ್ಪಲ್ಲ. ಆದರೆ ಅದರ ಸರಿಯಾದ ದಿಕ್ಕನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಸ್ನಾನಗೃಹದ ಬಾಗಿಲಿನ ಮುಂದೆ ಕನ್ನಡಿಯನ್ನು ನೇರವಾಗಿ ಇಡಬಾರದು. ಯಾವುದೇ ವ್ಯಕ್ತಿ ಒಳಗೆ ಹೋಗುವಾಗ ನಿಮ್ಮ ನೋಟ ನೇರವಾಗಿ ಕನ್ನಡಿಯ ಮೇಲೆ ಬೀಳದಿರುವ ಪ್ರದೇಶದಲ್ಲಿ ಇರಿಸಬೇಕು. ಇಲ್ಲದಿದ್ದರೆ, ಅದು ನಿಮ್ಮ ಮೇಲೆ ನೇರವಾಗಿ ನಕರಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ. ಅಂದಹಾಗೇ, ನೀವೇನಾದರೂ ಸ್ನಾನಗೃಹದಲ್ಲಿ ಕನ್ನಡಿಯನ್ನು ಇಡಲು ಬಯಸಿದರೆ, ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಇಡುವುದು ಉತ್ತಮ.

ಸರಿಯಾದ ಗಾತ್ರವೂ ಮುಖ್ಯ

ವಾಸ್ತುಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಕನ್ನಡಿಯ ಆಕಾರವೂ ಮುಖ್ಯವಾಗಿದೆ. ಆಯತಾಕಾರದ ಅಥವಾ ಚೌಕಾಕಾರದ ಕನ್ನಡಿಯನ್ನು ಅಳವಡಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನ್ನಡಿಗಳು ಮನೆಗೆ ಸಕರಾತ್ಮಕ ಶಕ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವೇನಾದರೂ, ಮನೆಯ ಸ್ನಾನಗೃಹಕ್ಕೆ ಕನ್ನಡಿಯನ್ನು ಅಳವಡಿಸುವ ಮುನ್ನ ಸರಿಯಾದ ಗಾತ್ರವನ್ನುಹೊಂದಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಒಡೆದ ಗಾಜನ್ನು ಬಳಸುವುದನ್ನು ತಪ್ಪಿಸಿ

ಜ್ಯೋತಿಷ್ಯದ ಪ್ರಕಾರ, ಮುರಿದ, ಬಿರುಕು ಬಿಟ್ಟ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಶುಭ ಎಂದು ಕರೆಯಲಾಗುತ್ತದೆ. ಇಂತಹ ಕನ್ನಡಿಗಳು ಮನೆಗೆ ನಕರಾತ್ಮಕ ಪರಿಣಾಮ ಹಾಗು ಘರ್ಷಣೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಸ್ನಾನಗೃಹದಲ್ಲಿರುವ ಕನ್ನಡಿ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

ಸರಿಯಾದ ಮಾಹಿತಿ ತಿಳಿದ ನಂತರವೇ ಸ್ನಾನಗೃಹದಲ್ಲಿ ಕನ್ನಡಿಯನ್ನು ಅಳವಡಿಸಿ

ಜ್ಯೋತಿಷ್ಯದ ಪ್ರಕಾರ, ಸ್ನಾನಗೃಹದಲ್ಲಿ ಕನ್ನಡಿಯನ್ನು ಅಳವಡಿಸುವುದು ಹಾನಿಕಾರಕವಲ್ಲ. ಆದರೆ, ನೀವು ಕೆಲವೊಂದು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ. ಸರಿಯಾದ ದಿಕ್ಕು, ಮತ್ತು ಸ್ವಚ್ಛವಾದ ಕನ್ನಡಿಯನ್ನು ಆರಿಸಿದರೆ ಇದು ಯಾವುದೇ ರೀತಿಯಲ್ಲಿಯೂ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net