ಮನೆಯ ಸುತ್ತ ಇಲಿಗಳು ಓಡಾಡುವುದು ಒಳ್ಳೆಯದೋ.. ಕೆಟ್ಟದ್ದೋ? Vastu tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu tips: ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಪಕ್ಷಿಗಳು, ಕೀಟಗಳು ಮತ್ತು ಕೆಲವು ಪ್ರಾಣಿಗಳ ಉಪಸ್ಥಿತಿಯು ಒಳ್ಳೆಯದು ಮತ್ತು ಕೆಟ್ಟದ್ದನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಮನೆಯ ಮುಂದೆ ಕಾಗೆ ಕೂಗುವುದನ್ನು ಸಂಬಂಧಿಕರು ಬರುತ್ತಾರೆ ಎಂದು ಸೂಚಿಸುತ್ತದೆ. ಹಲ್ಲಿಗಳು ನುಡಿಯುವುದನ್ನು ಸಕರಾತ್ಮಕ ಶಕ್ತಿ ಬರಲಿದೆ ಎಂದು ಸೂಚಿಸುತ್ತದೆ. ಅದೇ ರೀತಿ ಇದ್ದಕ್ಕಿಂದಂತಲೇ ಮನೆಯಲ್ಲಿ ಸುತ್ತಲೂ ಇಲಿಗಳು ಓಡಾಡಲು ಪ್ರಾರಂಭಿಸಿದರೆ, ಅದರ ಅರ್ಥವೇನು? ಮನೆಯಲ್ಲಿ ಇಲಿಗಳಿರುವುದು ಒಳ್ಳೆಯದೋ? ಕೆಟ್ಟದ್ದೋ? ಎಂದು ತಿಳಿಯೋಣ ಬನ್ನಿ...

ಮನೆಯಲ್ಲಿರುವ ಇಲಿಗಳು ಒಳ್ಳೆಯವೋ ಕೆಟ್ಟದ್ದೋ?

ಮನೆಯಲ್ಲಿ ಇದ್ದಕ್ಕಿಂದಂತೆ ಒಂದು ಅಥವಾ ಹಲವಾರು ಇಲಿಗಳನ್ನು ನೋಡುವುದು ಸಾಮಾನ್ಯವಾಗಿ ಮನೆಗೆ ನಕರಾತ್ಮಕ ಶಕ್ತಿ ಹಾಗೂ ಕೆಟ್ಟ ಶಕನು ಬೀಳುತ್ತದೆ ಎಂದು ನಂಬಲಾಗಿದೆ.
ಕೆಲವೊಮ್ಮೆ, ಇಲಿಗಳ ಉಪಸ್ಥಿತಿಯು ಸಕಾರಾತ್ಮಕ ಮತ್ತು ಒಳ್ಳೆಯ ಸಂಗತಿಗಳು ಸಂಭವಿಸಲಿವೆ ಎಂಬುದನ್ನು ಸೂಚಿಸಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ಇಲಿಗಳನ್ನು ಕೆಟ್ಟ ಶಕುನವೆಂದೇ ಪರಿಗಣಿಸಲಾಗುತ್ತದೆ. ಇಲಿಗಳ ಕುರಿತಾದ ನಂಬಿಕೆಗಳು ವಿಭಿನ್ನ ಅರ್ಥಗಳನ್ನು ಹೊಂದಿದ್ದು, ಇದು ಮನೆಯ ಸುತ್ತಲೂ ಇಲಿಗಳು ಓಡಾಡುವುದನ್ನು ಸಾಮಾನ್ಯವಾಗಿ ದುರದೃಷ್ಟದ ಚಿಹ್ನೆ ಎಂದು ಕರೆಯಲಾಗುತ್ತದೆ.

ಹಾನಿ ಮತ್ತು ನಷ್ಟ

ಇಲಿಗಳು ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಅಂದರೆ, ಬಟ್ಟೆ, ಕಾಗದಗಳು ಮತ್ತು ಧಾನ್ಯಗಳನ್ನು ಹಾನಿಗೊಳಿಸಬಹುದು. ಈ ರೀತಿ ಘಟನೆ ಸಂಭವಿಸಿದರೆ, ಆರ್ಥಿಕ ನಷ್ಟ ಎಂದು ಸೂಚಿಸಲಾಗುತ್ತದೆ.

ನಕಾರಾತ್ಮಕ ಶಕ್ತಿ

ಮನೆಯಲ್ಲಿ ಇಲಿಗಳು ಹಠಾತ್ತನೆ ಕಾಣಿಸಿಕೊಳ್ಳುವುದನ್ನು ಕೆಲವು ಸಮಸ್ಯೆಗಳನ್ನು ಸೂಚಿಸುತ್ತದೆ. ಇದರರ್ಥ ಮಾಡಲು ಹೋಗಬೇಕಾದ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಇಲಿಗಳನ್ನು ಅಶುದ್ಧ ಜೀವಿಗಳು ಎಂದು ಗುರುತಿಸುವುದರಿಂದ ಮನೆಗೆ ನಕರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮನೆಯ ಜನರು ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಆರೋಗ್ಯದ ಪರಿಣಾಮಗಳು

ಇಲಿಗಳು ಹಲವು ರೋಗಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿವೆ. ವಾಸ್ತು ಪ್ರಕಾರ, ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದರೆ ಇದನ್ನು ಅಶುಭ ಎಂದು ಸೂಚಿಸಲಾಗುತ್ತದೆ. ಅಲ್ಲದೆ, ಇಲಿಗಳು ಹಿಂಡು ಹಿಂಡಾಗಿ ಮನೆಯಿಂದ ಓಡಿಹೋಗುವುದನ್ನು ಆರ್ಥಿಕ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇಲಿಗಳು ಯಾವಾಗ ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ?

ಇಲಿಗಳನ್ನು ಸಾಮಾನ್ಯವಾಗಿ ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆಯಾದರೂ, ಕೆಲವು ಸ್ಥಳಗಳಲ್ಲಿ ಅವುಗಳನ್ನು ಸಮೃದ್ಧಿ ಮತ್ತು ಫಲವತ್ತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಾಂದರ್ಭಿಕವಾಗಿ ಕಾಣಿಸಿಕೊಂಡು ಮನೆಯಲ್ಲಿ ಹಾನಿ ಮಾಡದಿದ್ದರೆ, ಅದು ಶುಭ ಸಂಕೇತ ಎಂದು ಕರೆಯಲಾಗುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net