ಎದ್ದ ತಕ್ಷಣ ಈ ವಸ್ತುಗಳನ್ನು ನೋಡುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ! ಇದರಿಂದ ಅಶುಭ ಕಟ್ಟಿಟ್ಟ ಬುತ್ತಿ..Vastu tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu tips: ವಾಸ್ತು ಶಾಸ್ತ್ರವು ಬೆಳಗಿನ ಮೊದಲ ನೋಟಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತದೆ. ಜ್ಯೋತಿಷ್ಯದ ಪ್ರಕಾರ, ನಾವು ಬೆಳಿಗ್ಗೆ ಎದ್ದು ನೋಡುವ ಕೆಲವೊಂದು ವಸ್ತುಗಳು ನಮ್ಮ ಮನಸ್ಸು ಮತ್ತು ದೈನಂದಿನ ಚಟುವಟಿಕೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನಾವು ಬೆಳಿಗ್ಗೆ ಎದ್ದು ನಾವು ಏನು ನೋಡುತ್ತೇವೋ ಅದರ ಮೇಲೆ ನಮ್ಮ ದಿನ ನಡೆಯುತ್ತದೆ ಎಂದು ವಾಸ್ತು ಸೂಚಿಸುತ್ತದೆ. ಹಾಗಾಗಿ ನೀವೇನಾದರೂ ಈ ವಸ್ತುಗಳನ್ನು ನೋಡಿ ಎದ್ದೇಳುತ್ತಿದ್ದರೆ ಇಂದೇ ನಿಲ್ಲಿಸಿ. ಇದು ನಿಮ್ಮ ದಿನವನ್ನು ಕೆಡಕು ಮಾಡಬಹುದು.

ನೆರಳು

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ನೆರಳನ್ನು ನೋಡುವುದನ್ನು ತಪ್ಪಿಸಿ. ನಿಮ್ಮ ಸ್ವಂತ ನೆರಳನ್ನು ನೋಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ದಿನವು ನಕರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಆದಾಗ್ಯೂ, ನೆರಳನ್ನು ನೋಡಿ ಏಳುವುದರಿಂದ ದೇಹದಲ್ಲಿ ಆಲಸ್ಯ ಉಂಟಾಗುತ್ತದೆ. ಸೂರ್ಯನ ನೇರ ಕಿರಣಗಳು ದೇಹದ ಮೇಲೆ ಬೀಳದಿದ್ದರೆ ಜೈವಿಕ ಗಡಿಯಾರ ಏರುಪೇರಾಗಿ, ಮಾನಸಿಕ ಒತ್ತಡ ಅಥವಾ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗಬಹುದು.

ಒಡೆದ ಕನ್ನಡಿ

ಕನ್ನಡಿಯು ಶಕ್ತಿಯನ್ನು ಪ್ರತಿಫಲಿಸುತ್ತದೆ. ಕನ್ನಡಿ ಒಡೆದಾಗ ಅಥವಾ ಬಿರುಕು ಬಿಟ್ಟಾಗ, ಅದು ಧನಾತ್ಮಕ ಶಕ್ತಿಯನ್ನು ಚದುರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ನೀವೇನಾದರೂ, ಮನೆಯಿಂದ ಹೊರಡುವಾಗ ಒಡೆದ ಗ್ಲಾಸ್​ನಲ್ಲಿ ನಿಮ್ಮನ್ನು ನೋಡಿಕೊಂಡು ಬರುತ್ತಿದ್ದರೆ ಇಂದೇ ತಪ್ಪಿಸಿ, ಈ ರೀತಿ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಕೊಳಕು ಪಾತ್ರೆ

ವಾಸ್ತು ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ತೊಳೆಯದ ಪಾತ್ರೆಗಳು, ಕೊಳಕು ಪಾತ್ರೆಗಳನ್ನು ನೋಡುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಇದು ಉದ್ವಿಗ್ನತೆ, ಹತಾಶೆ ಉಂಟಾಗುವುದರ ಜೊತೆಗೆ ಮನೆಗೆ ನಕರಾತ್ಮಕ ಶಕ್ತಿಯನ್ನು ತರುತ್ತದೆ.  ಹಾಗಾಗಿ ನೀವೇನಾದರೂ ಅಡುಗೆ ಮಾಡಿದ, ಅಥವಾ ಕೊಳಕಾದ ಪಾತ್ರೆಗಳನ್ನು ತೊಳೆಯದೇ ಮಲಗುತ್ತಿದ್ದರೆ, ಇಂದೇ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಮುರಿದ ಗಡಿಯಾರ

ಮುರಿದ ಅಥವಾ ಹಾಳಾದ ಗಡಿಯಾರವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಗಡಿಯಾರವನ್ನು ನೀನು ಎದ್ದ ತಕ್ಷಣ ನೋಡುವುದರಿಂದ ಇದು ನಿಮ್ಮ ದಿನವನ್ನು ನಕರಾತ್ಮಕವಾಗಿರಿಸುತ್ತದೆ. ಹಾಗೆಯೇ ನಿಮ್ಮ ದಿನವನ್ನು ಒತ್ತಡದಿಂದ ಕಳೆಯುವಂತೆ ಮಾಡುತ್ತದೆ.

ಮುರಿದ ವಿಗ್ರಹಗಳು

ವಾಸ್ತು ಪ್ರಕಾರ, ಒಂದು ವಿಗ್ರಹವು ಮುರಿದಾಗ, ಅದು ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅಂತಹ ವಿಗ್ರಹವನ್ನು ನೋಡುವುದರಿಂದ ವ್ಯಕ್ತಿಯಲ್ಲಿನ ಧನಾತ್ಮಕ ಶಕ್ತಿ ಕಡಿಮೆಯಾಗಿ, ದಿನವಿಡೀ ನಿರುತ್ಸಾಹ ಆವರಿಸುತ್ತದೆ. ಇದು ಕೈಗೆತ್ತಿಕೊಂಡ ಕೆಲಸಗಳಲ್ಲಿ ಆಲಸ್ಯತನವನ್ನು ತೋರಿಸುತ್ತದೆ  (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net