ಮನೆ ಕಟ್ಟುವಾಗ ಕಿಟಕಿಗಳ ಎಣಿಕೆ ನೆನಪಿರಲಿ: ಒಂದು ಸಣ್ಣ ತಪ್ಪು ನಿಮ್ಮ ನೆಮ್ಮದಿ ಕೆಡಿಸಬಹುದು! Vastu tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಾಸ್ತು ಶಾಸ್ತ್ರದ ಪ್ರಕಾರ, ಮನೆ ಕೇವಲ ವಾಸಿಸಲು ಒಂದು ಸ್ಥಳವಲ್ಲ, ಬದಲಾಗಿ ಒಂದು ಶಕ್ತಿಯ ಕೇಂದ್ರ
  • ಮನೆಯ ಪ್ರತಿಯೊಂದು ಭಾಗಗಳೂ ಕೂಡ ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ
  • ಮನೆಯ ಸರಿಯಾದ ಅಥವಾ ತಪ್ಪಾದ ರಚನೆಯು ಸಕರಾತ್ಮಕ ಮತ್ತು ನಕರಾತ್ಮಕತೆಗೆ ಕಾರಣವಾಗಬಹುದು
Vastu tips: ವಾಸ್ತು ಶಾಸ್ತ್ರದ ಪ್ರಕಾರ, ಮನೆ ಕೇವಲ ವಾಸಿಸಲು ಒಂದು ಸ್ಥಳವಲ್ಲ, ಬದಲಾಗಿ ಒಂದು ಶಕ್ತಿಯ ಕೇಂದ್ರವಿದ್ದಂತೆ. ಮನೆಯ ಪ್ರತಿಯೊಂದು ಭಾಗಗಳೂ ಕೂಡ ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂದಹಾಗೇ, ವಾಸ್ತು ಪ್ರಕಾರ, ಮನೆಯ ಸರಿಯಾದ ಅಥವಾ ತಪ್ಪಾದ ರಚನೆಯು ಸಕರಾತ್ಮಕ ಮತ್ತು ನಕರಾತ್ಮಕತೆಗೆ ಕಾರಣವಾಗಬಹುದು.
ಮನೆಯ ಮುಖ್ಯ ಭಾಗಗಳಲ್ಲಿ ಕಿಟಕಿಯೂ ಒಂದು. ಇದು ಸೂರ್ಯನ ಬೆಳಕು, ತಾಜಾ ಗಾಳಿ ಮತ್ತು ಶಕ್ತಿಯನ್ನು ಮನೆ ಒಳಗೆ ಪ್ರವೇಶ ಮಾಡಲು ಆದ್ಯತೆ ನೀಡುತ್ತದೆ. ಕಿಟಿಕಿಯಿಂದ ಬರುವಂತಹ ಸರಿಯಾದ ಬೆಳಕು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಮನೆಯ ಶಾಂತಿ, ನೆಮ್ಮದಿ, ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಜನರು ಆದಷ್ಟು ಮನೆಯ ವಾಸ್ತುಗಳ ಬಗ್ಗೆ ಗಮನಹರಿಸಬೇಕು.
ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಯಾವಾಗಲೂ ಸರಿಯಾದ ಸಂಖ್ಯೆಯ ಕಿಟಕಿಗಳು ಮತ್ತು ಬಾಗಿಲುಗಳು ಇರಬೇಕು ಎಂದು ಹೇಳಲಾಗುತ್ತದೆ. ಇದು ಮನೆಗೆ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಖಚಿತಪಡಿಸುತ್ತದೆ. ಆದರೆ, ನೀವೇನಾದರೂ, ಬೆಸ ಸಂಖ್ಯೆಯ 1, 3, 5, ಕಿಟಕಿಗಳನ್ನು ಇಡುವುದರಿಂದ ಇದು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ನಿಮಗೆ ಇಷ್ಟೊಂದು ಕಿಟಕಿಗಳು ಬೇಕೇ?

ವಾಸ್ತು ಪ್ರಕಾರ, ಮನೆಯಲ್ಲಿ ಯಾವಾಗಲು ಸ್ವಲ್ಪ ಕಿಟಕಿಗಳನ್ನು ಹೊಂದಿರಬೇಕು. ಜೊತೆಗೆ ಅವು ಸಮನಾಗಿರಬೇಕು. ಉದಾಹರಣೆಗೆ 2, 4, 6, ಅಥವಾ 8 ಕಿಟಕಿಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, 3, 5, 7, ಅಥವಾ 9 ನಂತಹ ಬೆಸ ಸಂಖ್ಯೆಯ ಕಿಟಕಿಗಳು ಮನೆಯ ಶಕ್ತಿಯನ್ನು ಅಸಮತೋಲನಗೊಳಿಸುತ್ತದೆ. ಇದು ಕುಟುಂಬಕ್ಕೆ ನಕರಾತ್ಮಕ ಶಕ್ತಿಯನ್ನು ಬೀಳುವಂತೆ ಮಾಡುತ್ತದೆ. ಆದಾಗ್ಯೂ, ಮನೆಗೆ ಬರುವಂತಹ ಧನಾತ್ಮಕ ಹರಿವನ್ನು ತಡೆದು ಖಾಲಿ ಕೈಯಲ್ಲಿ ಕೂರುವಂತೆ ಮಾಡುತ್ತದೆ. ಬೆಸ ಸಂಖ್ಯೆಯ ಕಿಟಕಿಗಳು ಮನೆಗೆ ಸಾಲಭಾದೆ, ಸಂಸಾರದಲ್ಲಿ ತಾಪತ್ರಯಕ್ಕೆ ಕಾರಣವಾಗುತ್ತದೆ.

ಕಿಟಕಿಗಳ ಸರಿಯಾದ ದೃಷ್ಟಿಕೋನದ ಪ್ರಾಮುಖ್ಯತೆ

ವಾಸ್ತು ಶಾಸ್ತ್ರದ ಪ್ರಕಾರ, ಕಿಟಕಿಗಳ ಸಂಖ್ಯೆ ಮಾತ್ರವಲ್ಲ, ಅವುಗಳ ದಿಕ್ಕು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮನೆಯಲ್ಲಿ ಯಾವಾಗಲೂ ಉತ್ತರ ಮತ್ತು ಪೂರ್ವಕ್ಕೆ ಎದುರಾಗಿ ಕಿಟಕಿಗಳನ್ನು ಇಡುವುದು ಬಹಳ ಶುಭವಾಗಿರುತ್ತದೆ. ಈ ದಿಕ್ಕುಗಳಿಂದ ಬರುವ ಸೂರ್ಯನ ಬೆಳಕು ಮನೆಗೆ ನೆಮ್ಮದಿ, ಆರೋಗ್ಯ, ಶಾಂತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ. ಉತ್ತರ ದಿಕ್ಕನ್ನು ಸಂಪತ್ತು ಮತ್ತು ಅವಕಾಶಗಳ ದಿಕ್ಕು ಎಂದು ಸೂಚಿಸಲಾಗುತ್ತದೆ.

ಯಾವ ನಿರ್ದೇಶನಗಳನ್ನು ತಪ್ಪಿಸಬೇಕು?

ವಾಸ್ತು ಪ್ರಕಾರ, ದಕ್ಷಿಣ ಮತ್ತು ನೈಋತ್ಯ ದಿಕ್ಕುಗಳಲ್ಲಿ ಕಿಟಕಿಗಳನ್ನು ಇಡುವುದನ್ನು ಆದಷ್ಟು ತಪ್ಪಿಸಬೇಕು. ಏಕೆಂದರೆ, ಇದು ಮನೆಯ ಸ್ಥಿರ ಶಕ್ತಿಗೆ ಅಡ್ಡಿಪಡಿಸುತ್ತದೆ. ಈ ಪರಿಸ್ಥಿತಿಯು ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ (ಏಜೆನ್ಸೀಸ್​)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net