2026ರಲ್ಲಿ ಗಜಕೇಸರಿ ಯೋಗದ ಅಬ್ಬರ: ಈ ಮೂರು ರಾಶಿಯವರಿಗೆ ಹಣದ ಮಳೆ ಖಚಿತ! Astology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astology: ಇನ್ನೇನು ನಾಳೆಯಿಂದಲೇ ಹೊಸ ವರ್ಷ ಆರಂಭವಾಗಲಿದೆ. ಅನೇಕರು 2026 ರನ್ನು ಬರಮಾಡಿಕೊಳ್ಳಲು ತುದಿಕಾಲಿನಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಗುರು ಮತ್ತು ಚಂದ್ರನ ಅನುಕೂಲಕರ ಸ್ಥಾನವು ಗಜಕೇಸರಿ ಯೋಗವನ್ನು ಸೃಷ್ಟಿಸುತ್ತದೆ. ಈ ಸಮಯದಲ್ಲಿ ಗುರು ಮತ್ತು ಚಂದ್ರರು ಮಿಥುನ ರಾಶಿಯಲ್ಲಿ ಒಂದಾಗಿ ಗಜಕೇಸರಿ ಯೋಗವನ್ನು ರೂಪಿಸುತ್ತಾರೆ.
ಈ ಅಪರೂಪದ ಕಾಕತಾಳೀಯವು ಕೆಲವೊಂದು ರಾಶಿಗಳಿಗೆ ತುಂಬಾ ಶುಭವನ್ನು ನೀಡುತ್ತದೆ ಎಂದು ಜ್ಯೋತಿಷ್ಯವು ಹೇಳುತ್ತದೆ. ಗಜಕೇಸರಿ ಯೋಗವು ವೃತ್ತಿಪರ ಜೀವನದ ಪ್ರಗತಿಯನ್ನು ಉತ್ತೇಜಿಸುವುದುರ ಜೊತೆಗೆ ಮನೆಗೆ ಹೆಚ್ಚಿನ ಸಂಪತ್ತನ್ನು ನೀಡುತ್ತದೆ. ಇದಲ್ಲದೇ, ಈ ಹೊಸ ವರ್ಷದಲ್ಲಿ ಈ ರಾಶಿಚಕ್ರದ ಜನರಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಮುಂದುವರಿಯುತ್ತದೆ.

ವೃಷಭ ರಾಶಿ

ವೃಷಭ ರಾಶಿಯ ಜನರು ಗಜಕೇಸರಿ ಯೋಗದಿಂದ ತಾವು ಕಳೆದುಕೊಂಡ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಹೊಸ ವರ್ಷ ಇವರಿಗೆ ಒಳ್ಳೆಯ ಘಟನೆಗಳಿಗೆ ಎಡೆ ಮಾಡಿಕೊಡುತ್ತದೆ. ಹಳೆಯ ಹೂಡಿಕೆಗಳು ಗಣನೀಯ ಲಾಭವನ್ನು ನೀಡಲಿವೆ. ಇವರು ಹೊಸ ಆಸ್ತಿ ಖರೀದಿಸಲು ಮುಂದಾಗುತ್ತಾರೆ. ಈ ಜನರ ಆರ್ಥಿಕ ಸ್ಥಿತಿ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯಿಂದ ಕಾಲ ಕಳೆಯಲಿದ್ದಾರೆ.

ಮಿಥುನ ರಾಶಿ

ಗಜಕೇಸರಿ ಯೋಗವು ಮಿಥುನ ರಾಶಿಯವರಿಗೆ ಸಕರಾತ್ಮಕ ಪರಿಣಾಮವನ್ನು ಬೀರಲಿದೆ. ಇದು ವೃತ್ತಿ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುವುದರ ಜೊತೆಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಕೆಲಸದಲ್ಲಿ ಅನೇಕ ಜವಬ್ದಾರಿಗಳು ಸಿಗಲಿವೆ. ಹೊಸ ವರ್ಷವು ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ. ಅರ್ಧದಲ್ಲೇ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರಲಿದೆ.

ತುಲಾ ರಾಶಿ

ಗಜಕೇಸರಿ ಯೋಗದಿಂದ ತುಲಾ ರಾಶಿಯವರು ತಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆರ್ಥಿಕ ಪರಿಸ್ಥಿತಿಗಳು ಬಲಗೊಳ್ಳುತ್ತವೆ. ಈ ವರ್ಷವು ಸಂತೋಷ ಮತ್ತು ನೆಮ್ಮದಿಯ ವಾತಾವರಣ ಸಿಗಲಿದ್ದು, ನೀವು ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಸುಧಾರಿಸುತ್ತದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಮುಂದುವರೆಯುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net