ಸೂರ್ಯಾಸ್ತದ ನಂತರ ಅಂತ್ಯಸಂಸ್ಕಾರ ಯಾಕೆ ಮಾಡಬಾರದು ಗೊತ್ತಾ? ಇದರ ಹಿಂದಿರುವ ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ! Funeral Rules

Funeral Rules ಸಾಂದರ್ಭಿಕ ಚಿತ್ರ
Funeral Rules ಸಾಂದರ್ಭಿಕ ಚಿತ್ರ
Published on
Funeral Rules: ಹಿಂದೂ ಧರ್ಮವು ಕೇವಲ ಒಂದು ಜೀವನ ಪದ್ಧತಿಯಲ್ಲ, ಅದು ಪ್ರತಿಯೊಂದು ಹಂತದಲ್ಲೂ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲೊಂದಾಗಿದೆ. ಜನನದಿಂದ ಹಿಡಿದು ಮರಣದ ವರೆಗೆ ಮಾನವ ಜೀವನವನ್ನು 16 ಪ್ರಮುಖ ಸಂಸ್ಕಾರಗಳಾಗಿ ವಿಂಗಡಿಸಲಾಗಿದೆ.
ಇದರಲ್ಲಿ ಅತ್ಯಂತ ಕೊನೆಯ ಹಾಗೂ ಪ್ರಮುಖವಾದ ಸಂಸ್ಕಾರವೇ 'ಅಂತ್ಯಸಂಸ್ಕಾರ' ಅಥವಾ 'ಅಂತಿಮ ಕ್ರಿಯೆ'. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಯಾವುದೇ ಒಂದು ಶುಭ ಅಥವಾ ಅಶುಭ ಕಾರ್ಯವು ಶಾಸ್ತ್ರೋಕ್ತವಾದ ವಿಧಿವಿಧಾನಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ, ಆತನ ಆತ್ಮಕ್ಕೆ ಸದ್ಗತಿ ಸಿಗಬೇಕಾದರೆ ಅಂತ್ಯಕ್ರಿಯೆಗಳನ್ನು ಸಂಪೂರ್ಣ ಆಚರಣೆಗಳೊಂದಿಗೆ ನಡೆಸುವುದು ಅತ್ಯಂತ ಕಡ್ಡಾಯವಾಗಿದೆ.
ಆದಾಗ್ಯೂ, ಸರಿಯಾದ ವಿಧಿವಿಧಾನಗಳೊಂದಿಗೆ ತಮ್ಮ ಅಂತಿಮ ಸಂಸ್ಕಾರಗಳನ್ನು ಮಾಡದವರಿಗೆ ಎಂದಿಗೂ ಮುಕ್ತಿ ಸಿಗುವುದಿಲ್ಲ ಮತ್ತು ಅವರ ಆತ್ಮಗಳು ಅಲೆದಾಡುತ್ತವೆ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ ಅಂತಿಮ ಸಂಸ್ಕಾರಗಳನ್ನು ಎಂದಿಗೂ ಮಾಡಬಾರದು ಎಂದು ಗರುಡ ಪುರಾಣವು ಹೇಳುತ್ತದೆ. ಹಾಗಿದ್ದರೆ ಈ ರೀತಿ ಹೇಳಲು ಕಾರಣವೇನು ಎಂದು ನೋಡೋಣ ಬನ್ನಿ...
ಹೆಚ್ಚಿನ ಕಡೆಗಳಲ್ಲಿ ಸೂರ್ಯಾಸ್ತದ ನಂತರ ದಹನ ಸಂಸ್ಕಾರವನ್ನು ಮಾಡುವುದಿಲ್ಲ. ಸೂರ್ಯಾಸ್ತದ ನಂತರ ವ್ಯಕ್ತಿ ಸತ್ತರೆ, ಮರುದಿನ ಬೆಳಿಗ್ಗೆ ಸೂರ್ಯೋದಯದವರೆಗೆ ದೇಹವನ್ನು ಇರಿಸಿ ಮರುದಿನ ದಹನ ಮಾಡಲಾಗುತ್ತದೆ.

ರಾಕ್ಷಸನಾಗಿ ಹುಟ್ಟುವ ಭಯ

ಗರುಡ ಪುರಾಣದ ಪ್ರಕಾರ, ಸೂರ್ಯಾಸ್ತದ ನಂತರ ಯಮಲೋಕದ ದ್ವಾರಗಳು ತೆರೆದುಕೊಳ್ಳುತ್ತವೆ. ಜೊತೆಗೆ ನಕಾರಾತ್ಮಕ ಶಕ್ತಿಗಳು, ರಾಕ್ಷಸರು ಮತ್ತು ರಕ್ತಪಿಸಾಸು ಶಕ್ತಿಗಳು ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗುತ್ತವೆ. ಆದಾಗ್ಯೂ, ರಾತ್ರಿ ಸಮಯದಲ್ಲಿ ಅಂತ್ಯಕ್ರಿಯೆ ನಡೆಸಿದರೆ, ಆತ್ಮವು ಮರಾಣಾನಂತರದ ಜೀವನಕ್ಕೆ ಪರಿವರ್ತನೆಯ ಸಮಯದಲ್ಲಿ ನೋವನ್ನು ಅನುಭವಿಸುತ್ತದೆ. ಇದರಿಂದ ರಾಕ್ಷಸ, ದೆವ್ವ ಅಥವಾ ರಕ್ತಪಿಶಾಚಿಯಾಗಿ ಮರುಜನ್ಮ ಪಡೆಯಬಹುದು ಎಂದು ಹೇಳುತ್ತಾರೆ.

ಮುಂದಿನ ಜೀವನದಲ್ಲಿ ಕೊರತೆಗಳು

ರಾತ್ರಿಯಲ್ಲಿ ಅಂತ್ಯಕ್ರಿಯೆ ನಡೆಸುವುದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಇದರಿಂದ ಮುಂದಿನ ಜನ್ಮದಲ್ಲಿ ಆ ವ್ಯಕ್ತಿ ದೈಹಿಕ ಅಥವಾ ಮಾನಸಿಕ ಅಂಗವೈಕಲ್ಯವನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

ಪಾಪಗಳು

ಸೂರ್ಯಾಸ್ತದ ನಂತರ ಬೆಂಕಿಯನ್ನು ನಂದಿಸುವುದು ಶಾಸ್ತ್ರಬದ್ಧವಾಗಿ ಸ್ವೀಕಾರಾರ್ಹವಲ್ಲ. ಹಾಗೆ ಮಾಡುವುದರಿಂದ ಕುಟುಂಬ ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರ ಮೇಲೆ ಪಾಪ ಬರುವ ಸಾಧ್ಯತೆ ಹೆಚ್ಚಿದೆ.
ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ದಹನ ಕ್ರಿಯೆಯ ಅಗತ್ಯವಿದ್ದರೆ, ಪಾಪಗಳನ್ನು ತೊಡೆದುಹಾಕಲು "ದೋಷ ನಿವಾರಣ ಸಂಸ್ಕಾರ" ಎಂಬ ಆಚರಣೆಯನ್ನು ಮಾಡಲಾಗುತ್ತದೆ. ಈ ಆಚರಣೆಯು ಚಿನ್ನ, ಬೆಳ್ಳಿ ಮತ್ತು ಹಿಟ್ಟನ್ನು ಬಳಸಿ ಸೂರ್ಯ ದೇವರ ಸಾಂಕೇತಿಕ ವಿಗ್ರಹವನ್ನು ತಯಾರಿಸಿ ದೇಹದೊಂದಿಗೆ ಚಿತೆಯ ಮೇಲೆ ಇಡುವುದನ್ನು ಒಳಗೊಂಡಿರುತ್ತದೆ. ಇದಾದ ಬಳಿಕ ಮನುಷ್ಯನನ್ನು ಸುಡಲಾಗುತ್ತದೆ.

ವ್ಯಕ್ತಿಯ ದೇಹದಲ್ಲಿ ಐದು ಅಂಶಗಳು

ವೇದಗಳ ಪ್ರಕಾರ, ಮಾನವನ ದೇಹವು ನೀರು, ಭೂಮಿ, ಬೆಂಕಿ, ಗಾಳಿ ಮತ್ತು ಆಕಾಶ ಐದು ಅಂಶಗಳಿಂದ ಮಾಡಲ್ಪಟ್ಟಿರುತ್ತದೆ. ಯಾರನ್ನಾದರೂ ದಹನ ಮಾಡಿದಾಗ, ಈ ಅಂಶಗಳು ಅಂತಿಮ ವಿಧಿಗಳ ಭಾಗವಾಗಿ ಅವರು ಬಂದ ದೇಹದೊಂದಿಗೆ ವಿಲೀನಗೊಳ್ಳುತ್ತವೆ. ನಂತರ ಅವರು ಮತ್ತೊಂದು ದೇಹವನ್ನು ಪ್ರವೇಶಿಸಲು ಸಿದ್ಧರಾಗುತ್ತಾರೆ.
ನಿಗದಿತ ಆಚರಣೆಗಳ ಪ್ರಕಾರ ಅಂತಿಮ ಸಂಸ್ಕಾರಗಳನ್ನು ಮಾಡದಿದ್ದಾಗ, ಆತ್ಮವು ಮುಕ್ತಿಯನ್ನು ಪಡೆಯಲು ಸಾಧ್ಯವಾಗದೆ ಕಳೆದುಹೋಗುತ್ತದೆ. ಇಂತಹ ಆತ್ಮವು ಈ ಲೋಕದಲ್ಲಿ ಅಥವಾ ಮರಣಾನಂತರದ ಜೀವನದಲ್ಲಿ ಸ್ಥಾನ ಪಡೆಯುವುದಿಲ್ಲ. ಅಂತಹ ಆತ್ಮಗಳು ಪ್ರೇತಗಳ ಲೋಕದಲ್ಲಿ ಸ್ಥಾನವನ್ನು ಪಡೆಯುತ್ತವೆ.

ಅಂತ್ಯಕ್ರಿಯೆಯನ್ನು ನಡೆಸುವ ನಿಯಮಗಳು

ಒಬ್ಬ ವ್ಯಕ್ತಿಯ ಸಾವು ಎಂದರೆ ಅವರ ಅಂತ್ಯಕ್ರಿಯೆಯನ್ನು ಯಾವುದೇ ಸಮಯದಲ್ಲಿ ನಡೆಸಬೇಕು ಎಂದಲ್ಲ. ಶಾಸ್ತ್ರಗಳು ದಹನ ಕ್ರಿಯೆಗೆ ಕೆಲವು ನಿಯಮಗಳನ್ನು ಸೂಚಿಸುತ್ತವೆ. ಈ ನಿಯಮಗಳಲ್ಲಿ ಒಂದು ರಾತ್ರಿ ಅಥವಾ ಸೂರ್ಯಾಸ್ತದ ನಂತರ ಒಬ್ಬ ವ್ಯಕ್ತಿಯು ಸತ್ತರೆ, ಸೂರ್ಯಾಸ್ತದ ನಂತರ ಅಂತ್ಯಕ್ರಿಯೆಯನ್ನು ಮಾಡಬಾರದು. ತುಳಸಿ ಮಾತೆಯ ಬಳಿ ರಾತ್ರಿಯಲ್ಲಿ ಶವವನ್ನು ಮನೆಯಲ್ಲಿ ಇರಿಸಲಾಗುತ್ತದೆ ಮತ್ತು ದೇಹದ ಸುತ್ತಲೂ ದೀಪವನ್ನು ಬೆಳಗಿಸಲಾಗುತ್ತದೆ.
ಸೂರ್ಯೋದಯದ ನಂತರ, ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಉಳಿದ ಆಚರಣೆಗಳನ್ನು ಅಲ್ಲಿ ಪೂರ್ಣಗೊಳಿಸಲಾಗುತ್ತದೆ. ಸೂರ್ಯಾಸ್ತದ ನಂತರ ದಹನ ಕ್ರಿಯೆಯನ್ನು ಅಶಾಸ್ತ್ರೀಯವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಸೂರ್ಯೋದಯದ ಹಗಲಿನಲ್ಲಿ ಒಬ್ಬ ವ್ಯಕ್ತಿ ಸತ್ತರೆ ಅವರ ಅಂತ್ಯಕ್ರಿಯೆಯನ್ನು ಸೂರ್ಯಾಸ್ತದ ಮೊದಲು ಮಾಡಬೇಕು. ಸೂರ್ಯಾಸ್ತದ ನಂತರ ದಹನ ಕ್ರಿಯೆಯನ್ನು ನಡೆಸಲಾಗುವುದಿಲ್ಲ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net