

Astrology: ದಾನ ಮಾಡುವುದರಿಂದ ನಮ್ಮ ಕಷ್ಟಗಳಲ್ಲೇ ಕಳೆದುಹೋಗುತ್ತದೆ ಎಂದು ನಾವು ನಂಬಿರುತ್ತೇವೆ. ದಾನ ಮಾಡುವುದು ಇತರರಿಗೆ ಸಹಾಯ ಮಾಡುವುದಲ್ಲದೇ, ಅವರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತುಂಬುತ್ತದೆ. ನಿಯಮಿತವಾಗಿ ದಾನ ಮಾಡುವುದರಿಂದ ನಮ್ಮ ಜೀವನದಲ್ಲಿ ಸಕರಾತ್ಮಕತೆಯು ತುಂಬುತ್ತದೆ ಎಂದು ತಿಳಿದಿದ್ದೇವೆ. ಆದರೆ, ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡುವುದು ಜ್ಯೋತಿಷ್ಯದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಸಂತೋಷ ಮತ್ತು ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮಗಳು ಬೀಳಲಾರಂಭಿಸುತ್ತವೆ. ಹಾಗಿದ್ದರೆ, ಆ ಮೂರು ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ...
ವಾಸ್ತು ಪ್ರಕಾರ, ರಾತ್ರಿಯಲ್ಲಿ ಹಾಲನ್ನು ದಾನ ಮಾಡಬಾರದು. ಹಾಲು ಸೂರ್ಯ ಮತ್ತು ಚಂದ್ರನೊಂದಿಗೆ ಸಂಬಂಧ ಹೊಂದಿದ್ದು, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹಾಗಾಗಿ ಸೂರ್ಯಾಸ್ತದ ನಂತರ ಹಾಲನ್ನು ದಾನ ಮಾಡುವುದು ನಿಮ್ಮ ಜೀವನದಲ್ಲಿ ಆರ್ಥಿಕ ತೊಂದರೆ ಉಂಟು ಮಾಡುತ್ತವೆ. ಹಾಗೆಯೇ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕೊರತೆ ಅನುಭವಿಸುವಂತೆ ಮಾಡುತ್ತದೆ.
ಹಿಂದೂ ಸಂಪ್ರದಾಯದ ಪ್ರಕಾರ, ಮೊಸರು ಶುಕ್ರ ಗ್ರಹದ ಅಂಶವಾಗಿ, ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಸೂರ್ಯಾಸ್ತದ ನಂತರ ದಾನ ಮಾಡುವುದರಿಂದ ಇದು ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಬೀರುತ್ತದೆ. ಹಾಗೆಯೇ, ಇದನ್ನು ನೀಡುವುದರಿಂದ ಮನೆಯಲ್ಲಿ ಶಾಂತಿ, ಸಂತೋಷ ಎಲ್ಲವನ್ನು ಕಳೆದುಕೊಂಡು ಕುಟುಂಬವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಪ್ರಕಾರ, ರಾತ್ರಿಯಲ್ಲಿ ಉಪ್ಪನ್ನು ದಾನ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಮನೆಯಲ್ಲಿ ಸಂತೋಷ, ನೆಮ್ಮದಿ ಸಮೃದ್ಧಿಯ ಸಂಕೇತ ಎಂದು ಗುರುತಿಸಲಾಗುತ್ತದೆ. ಆದರಿಂದ ರಾತ್ರಿಯ ವೇಳೆ ಉಪ್ಪು ದಾನ ಮಾಡುವುದರಿಂದ ಮನೆಗೆ ನಕರಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ದುಃಖ, ಒತ್ತಡ, ಗಲಭೆ, ವಾದ-ವಿವಾದಗಳು ಉಂಟಾಗಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಹಿಂದೂ ನಂಬಿಕೆಯ ಪ್ರಕಾರ, ರಾತ್ರಿ ಮೊಸರು, ಉಪ್ಪು, ಹಾಲನ್ನು ದಾನ ಮಾಡುವುದು ಅಶುಭವೆಂದು ತಿಳಿಯಲಾಗುತ್ತದೆ. ಏಕೆಂದರೆ, ಇದು ಲಕ್ಷ್ಮೀ ದೇವಿಯ ಸಂಕೇತವಾಗಿದ್ದು, ಸೂರ್ಯಾಸ್ತದ ನಂತರ ದಾನ ಮಾಡಿದರೆ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಸಂಪತ್ತು ಕುಗ್ಗುತ್ತದೆ, ಆರ್ಥಿಕ ನಷ್ಟ, ಆರೋಗ್ಯದಲ್ಲಿ ಏರುಪೇರು, ದುರ್ಬಲತೆ, ಅಸಮೃದ್ಧಿಯಂತಹ ಘಟನೆಗಳು ಪ್ರಾರಂಭವಾಗುತ್ತವೆ, ಹಾಗಾಗಿ ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡಬೇಡಿ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.