ಸ್ನಾನ ಮಾಡಿದ ತಕ್ಷಣ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ! ಇದು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ Vastu tips

untitled-design-2025-10-11t143105416-68ea1ce02907a
Published on

Vastu tips: ವಾಸ್ತು ಶಾಸ್ತ್ರದ ಪ್ರಕಾರ ಮನುಷ್ಯನು ದಿನನಿತ್ಯ ಒಂದಲ್ಲ ಒಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಈ ತಪ್ಪುಗಳು ಅವನ ಜೀವನದ ಮೇಲೆ ಪರಿಣಾಮ ಬಿದ್ದು, ಲಕ್ಷ್ಮೀ ದೇವಿಯನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಅಂದಹಾಗೇ, ಒಬ್ಬ ವ್ಯಕ್ತಿ ಎಷ್ಟೇ ವಯಸ್ಸಿನವರಾಗಿದ್ದರೂ, ಸ್ನಾನ ಮಾಡಿದ ನಂತರ ಕೆಲವು ತಪ್ಪುಗಳನ್ನು ಮಾಡುತ್ತಾನೆ. ಇವು ಜೀವನದಲ್ಲಿ ಆತನನ್ನು ಸಂಕಷ್ಟಕ್ಕೆ ತಲುಪಿಸುವಂತೆ ಮಾಡುತ್ತದೆ. ಹಾಗಾಗಿ ನೀವೇನಾದರೂ ಜೀವನದಲ್ಲಿ ಪ್ರಗತಿಯನ್ನು ಬಯಸಿದರೆ ಸ್ನಾನ ಮಾಡಿದ ನಂತರ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ....

1. ಸ್ನಾನದ ನಂತರ ಬಕೆಟ್​ನಲ್ಲಿ ನೀರನ್ನು ಬಿಡಬೇಡಿ

ಹಲವಾರು ಜನರು ಸ್ನಾನ ಮಾಡಿದ ನಂತರ ಆ ಬಕೆಟ್​ನಲ್ಲಿ ನೀರನ್ನು ಬಿಟ್ಟು ಬರುತ್ತಾರೆ. ಇದು ವಾಸ್ತು ಶಾಸ್ತ್ರದ ಪ್ರಕಾರ ಜನರನ್ನು ಬಡವರನ್ನಾಗಿ ಮಾಡಬಹುದು. ಅಂದಹಾಗೇ, ಇದರಿಂದ ನಿಮ್ಮ ಮೇಲೆ ರಾಹು ಮತ್ತು ಕೇತು ಕೋಪಗೊಂಡು ಮನೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ.

2. ಸ್ನಾನದ ಕೋಣೆಯಲ್ಲಿ ಕೂದಲನ್ನು ಎಸೆಯಬೇಡಿ

ಸಾಮಾನ್ಯವಾಗಿ ಜನರ ಕೂದಲು ಉದುರುವುದು ಸಹಜ. ಸ್ನಾನ ಆದ ನಂತರ ಕೂದಲನ್ನು ನಿಮ್ಮ ಬಾತ್ರೂಮ್​ನಲ್ಲಿ ಬಿಡುವುದರಿಂದ ಶನಿ ಮತ್ತು ಮಂಗಳ ಗ್ರಹಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು. ಇದು ನಿಮ್ಮಲ್ಲಿ ನಕರಾತ್ಮಕತೆಯನ್ನು ಹೆಚ್ಚಿಸಿ, ವೃತ್ತಿ ಮತ್ತು ವ್ಯವಹಾರದಲ್ಲಿ ನಷ್ಟ ಅನುಭವಿಸುವಂತೆ ಮಾಡುತ್ತದೆ.

3. ಸ್ನಾನ ಮಾಡಿದ ತಕ್ಷಣ ಬಟ್ಟೆ ತೊಳೆಯಬೇಡಿ

ಹಲವಾರು ಜನರು ಸ್ನಾನ ಮಾಡಿ ಹೊರಬಂದ ತಕ್ಷಣ ಬಟ್ಟೆ ತೊಳೆಯುತ್ತಾರೆ. ಈ ಅಭ್ಯಾಸವು ನಿಮ್ಮನ್ನು ಬಡವರನ್ನಾಗಿ ಮಾಡಬಹುದು. ಸ್ನಾನ ಮಾಡಿದ ನಂತರ ಹಳೆಯ ಬಟ್ಟೆಗಳನ್ನು ಒಗೆಯುವುದು ಒಳ್ಳೆಯ ಅಭ್ಯಾಸವಲ್ಲ. ಹಾಗಾಗಿ ಈ ಕೆಲಸವನ್ನು ಮಾಡಬೇಡಿ.

4. ಸ್ನಾನಗೃಹದಲ್ಲಿ ಕೊಳಕು ಬಟ್ಟೆಯನ್ನು ಬಿಡಬೇಡಿ

ಸ್ನಾನ ಆದ ನಂತರ ಹಳೆಯ ಬಟ್ಟೆ ಹಾಗೂ ಕೊಳಕು ಬಟ್ಟೆಯನ್ನು ಅಲ್ಲಿಯೇ ಬಿಡುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಈ ಅಭ್ಯಾಸವು ನಿಮ್ಮಲ್ಲಿ ಸೂರ್ಯ ದೇವನು ಕೋಪಗೊಳ್ಳುವಂತೆ ಮಾಡಬಹುದು. ಹಾಗಾಗಿ ಈ ತಪ್ಪುಗಳನ್ನು ಮಾಡಿದಲ್ಲಿ ನಿಮ್ಮ ಯಶಸ್ಸು ಕುಂಠಿತಗೊಳ್ಳುತ್ತದೆ.

5. ಸ್ನಾನ ಮಾಡಿದ ತಕ್ಷಣ ಕುಂಕುಮ ಹಚ್ಚಬೇಡಿ

ಅನೇಕ ಮಹಿಳೆಯರು ಸ್ನಾನ ಮಾಡಿದ ತಕ್ಷಣವೇ ಕುಂಕುಮ ಹಚ್ಚಿಕೊಳ್ಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವ ಮಹಿಳೆಯರು ಕೆಟ್ಟ ಆಲೋಚನೆಗಳನ್ನು ಹೊಂದಿರುತ್ತಾರೆ. ಇವರು ಕುಟುಂಬದ ವಿರುದ್ಧ ಕೆಟ್ಟ ಕೆಲಸ ಮಾಡುತ್ತಾರೆ ಎಂದು ನಂಬಲಾಗಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net