ಈ 5 ರಾಶಿಯವರು ಯಾವುದೇ ಕಾರಣಕ್ಕೂ ತಮ್ಮ ಸೋಲನ್ನು ಸಹಿಸುವುದಿಲ್ಲ! ನೀವೂ ಇದೇ ರಾಶಿನಾ? Zodiac Signs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
  • ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
  • ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿ ಮತ್ತು ಜನ್ಮ ನಕ್ಷತ್ರವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ದಾಂಪತ್ಯ ಜೀವನ, ವಿಶೇಷ ಪ್ರತಿಭೆಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಆತನ ರಾಶಿ ಅಥವಾ ಜಾತಕ ಕಾರಣ ಎಂಬ ಅಭಿಪ್ರಾಯವೂ ಇದೆ.
ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರು ತುಂಬಾ ಮೃದು ಹೃದಯದವರಾಗಿರುತ್ತಾರಂತೆ ಮತ್ತು ಯಾವುದೇ ಸಂದರ್ಭದಲ್ಲಿ ತಮ್ಮ ವೈಫಲ್ಯವನ್ನು ಅಥವಾ ಸೋಲನ್ನು ಸಹಿಸುವುದಿಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ.
ಜೀವನ ಅಂದ ಮೇಲೆ ಸೋಲು-ಗೆಲುವು ಸಹಜ. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ನಡೆಯಬೇಕೆಂದು ಹಿರಿಯರು ಹೇಳುತ್ತಾರೆ. ಆದರೆ, ಕೆಲವರು ಯಾವುದಾದರೊಂದು ವಿಚಾರದಲ್ಲಿ ಸೋಲು ಅನುಭವಿಸಿದರೆ, ತಮ್ಮ ಜೀವನವೇ ನಾಶವಾಗಿ ಹೋಯಿತು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ, ಕತ್ತಲೆ ಸರಿದ ಮೇಲೆ ಬೆಳಕು ಬಂದೇ ಬರುತ್ತದೆ ಎನ್ನುವಂತೆ ಸೋತವನು ಮತ್ತೆ ಎದ್ದು ನಿಂತರೆ ಗೆದ್ದೇ ಗೆಲ್ಲುತ್ತಾನೆ ಅನ್ನೋದನ್ನು ಮರೆಯಬಾರದು.
ಆದರೆ, ಕೆಲವು ರಾಶಿಯಲ್ಲಿ ಜನಿಸಿದ ಕೆಲವು ಮಂದಿ ಮಾನಸಿಕವಾಗಿ ಅತ್ಯಂತ ದುರ್ಬಲರೆಂದು ಹೇಳಲಾಗುತ್ತದೆ. ಯಾವುದೇ ಸೋಲನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲವಂತೆ. ಹಾಗಾದರೆ, ಯಾವ ರಾಶಿಯವರು ತಮ್ಮ ವೈಫಲ್ಯವನ್ನು ನಿಭಾಯಿಸುವಲ್ಲಿ ಪರದಾಡುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರನ್ನು ಮಂಗಳ ಗ್ರಹ ಆಳುತ್ತದೆ. ಹೀಗಾಗಿ ಈ ರಾಶಿಯವರು ಸ್ವಾಭಾವಿಕವಾಗಿ ಸ್ಪರ್ಧಾತ್ಮಕರು. ಯಾವುದೇ ವಿಷಯದಲ್ಲಿ ಸ್ಪರ್ಧಿಸಲು ಬಯಸುತ್ತಾರೆ. ಅಲ್ಲದೆ, ಸ್ಪರ್ಧಿಸಿದ ಎಲ್ಲದರಲ್ಲೂ ಯಶಸ್ವಿಯಾಗಬೇಕೆಂಬುದು ಅವರ ಗುರಿಯಾಗಿರುತ್ತದೆ. ತಮ್ಮ ಗುರಿ ಮುಟ್ಟಲು ಎಲ್ಲ ಕೆಲಸವನ್ನು ಪೂರ್ಣ ಸಮರ್ಪಣೆಯಿಂದ ಮಾಡುತ್ತಾರೆ. ಹೀಗಾಗಿ, ಒಮ್ಮೊಮ್ಮೆ ಅನಿರೀಕ್ಷಿತವಾಗಿ ಸೋಲನ್ನು ಎದುರಿಸಿದರೆ, ಅದನ್ನು ಸ್ವೀಕರಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಅಂದರೆ, ಈ ರಾಶಿಯವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ತುಂಬಾ ನಿರಾಶೆಗೊಳ್ಳುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯವರು ತುಂಬಾ ಶಾಂತಿಯುತ ಜನರು. ಈ ರಾಶಿಯವರು ತಮ್ಮ ದೇಶಕ್ಕೆ ನಿಷ್ಠರಾಗಿರುತ್ತಾರೆ. ತಾವು ಕೈಗೊಂಡ ಕೆಲಸವನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತಾರೆ. ಅಲ್ಲದೆ, ಯೋಜನೆ ರೂಪಿಸುವುದರಲ್ಲಿ ಈ ರಾಶಿಯವರು ನಿಪುಣರಾಗಿರುತ್ತಾರೆ. ಎಲ್ಲವೂ ಯೋಜನೆಯಂತೆ ನಡೆದರೆ ಅವರು ತುಂಬಾ ಸಂತೋಷವಾಗಿರುತ್ತಾರೆ. ಒಂದು ವೇಳೆ ಯೋಜನೆಯಂತೆ ಏನೂ ನಡೆಯದಿದ್ದರೆ, ಅವರು ಖಿನ್ನತೆಗೆ ಒಳಗಾಗುತ್ತಾರೆ. ತಮ್ಮ ವೈಫಲ್ಯವನ್ನು ಸುಲಭವಾಗಿ ಬಿಟ್ಟುಕೊಡುವ ಪ್ರವೃತ್ತಿ ಹೊಂದಿರುತ್ತಾರೆ. ಸೋಲನ್ನು ಎದುರಿಸಿದ ಸಮಯದಲ್ಲಿ ಅದರಿಂದ ಅವರು ಚೇತರಿಸಿಕೊಳ್ಳುವುದಿಲ್ಲ. ಇದರಿಂದ ಇತರರ ಕಡೆಗೆ ಹಗೆತನದಿಂದ ವರ್ತಿಸುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರು ಹೆಮ್ಮೆ ಮತ್ತು ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಯಾವಾಗ ಬೇಕಾದರೂ ಗೆಲ್ಲಲು ದೃಢನಿಶ್ಚಯವನ್ನು ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಅವರಿಗೆ ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಇರುವುದಿಲ್ಲ. ಅವರು ಯಾವುದೇ ವಿಚಾರದಲ್ಲೂ ಯಶಸ್ವಿಯಾಗಲು ತುಂಬಾ ದೃಢನಿಶ್ಚಯ ಹೊಂದಿರುತ್ತಾರೆ. ಏಕೆಂದರೆ, ಸಿಂಹ ರಾಶಿಯವರು ನಾಯಕತ್ವದ ಪಾತ್ರಗಳಿಗೆ ತುಂಬಾ ಸೂಕ್ತರು. ಹಾಗಾಗಿ, ಸೋಲು ತಮ್ಮ ಘನತೆಯನ್ನು ಕುಗ್ಗಿಸುತ್ತದೆ ಎಂದು ಭಾವಿಸುತ್ತಾರೆ. ಅಲ್ಲದೆ, ವೈಫಲ್ಯವು ತಮ್ಮ ಸ್ವಾಭಿಮಾನವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಬಹುದು. ಇತರರ ಮುಂದೆ ಸೋತರೆ ಅದನ್ನು ಸಹಿಸಲಾರರು. ಇದರಿಂದ ಅವರು ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಈ ರಾಶಿಯವರು ತಮ್ಮ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಮುಂದಿನ ಪ್ರಯತ್ನದಲ್ಲಿ ಯಶಸ್ವಿಯಾಗಲು ಶ್ರಮಿಸುತ್ತಾರೆ.

ಮಕರ ರಾಶಿ

ಮಕರ ರಾಶಿಯವರು ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಉನ್ನತ ಸ್ಥಾನವನ್ನು ಸಾಧಿಸಲು ಶ್ರಮಿಸುತ್ತಾರೆ. ಅವರು ಸೋಲನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಯಾವುದೇ ವಿಚಾರದಲ್ಲಿ ವಿಫಲವಾದರೆ, ಅವರು ತಮ್ಮನ್ನು ತಾವು ಕಡಿಮೆ ಅಂದಾಜು ಮಾಡಿಕೊಳ್ಳುತ್ತಾರೆ. ಆದರೆ, ಎಂದಿಗೂ ತಮ್ಮನ್ನು ತಾವು ಬಿಟ್ಟುಕೊಡುವ ಮನೋಭಾವವನ್ನು ಹೊಂದಿರುವುದಿಲ್ಲ. ಈ ರಾಶಿಯವರು ಯಾವಾಗಲೂ ಕೀಳರಿಮೆಯನ್ನು ಹೊಂದಿರುತ್ತಾರೆ. ಇದರ ಪರಿಣಾಮವಾಗಿ, ಅವರು ಗೆಲುವನ್ನು ಸ್ವೀಕರಿಸುವಷ್ಟು ಸೋಲನ್ನು ಸ್ವೀಕರಿಸುವುದಿಲ್ಲ. ವಿಶೇಷವಾಗಿ ಪ್ರೀತಿಯಲ್ಲಿ ಸೋಲಾದರೆ ಅದನ್ನು ಸಹಿಸುವುದೇ ಇಲ್ಲ. ಆದಾಗ್ಯೂ, ಅವರು ವೈಫಲ್ಯದಿಂದ ಸಾಕಷ್ಟು ಕಲಿಯುತ್ತಾರೆ ಮತ್ತು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಗಂಭೀರ ಸ್ವಭಾವದವರು. ಅವರು ಯಾವುದೇ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಮತ್ತು ಯಾವಾಗಲೂ ಗೆಲ್ಲುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ಎಲ್ಲದರಲ್ಲೂ ಮೊದಲಿಗರಾಗಿರಬೇಕು ಎಂಬುದು ಈ ರಾಶಿಯವರ ಧ್ಯೇಯವಾಕ್ಯವಾಗಿದೆ. ಅವರು ಕೆಲಸದಲ್ಲಿ ಅಥವಾ ತಮ್ಮ ಕುಟುಂಬದಲ್ಲಿ ಎಲ್ಲದರಲ್ಲೂ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇದರ ಪರಿಣಾಮವಾಗಿ, ಅವರು ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಸೋಲು ಅನುಭವಿಸಿದರೆ ಅದರಿಂದ ಚೇತರಿಸಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದಾಗ್ಯೂ, ಅವರು ನಂತರದ ವಿಷಯಗಳಲ್ಲಿ ಯಶಸ್ಸನ್ನು ನೀಡಲು ಬಯಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net