_1778863071212.webp?w=480&auto=format%2Ccompress&fit=max)
_1778863071212.webp?w=480&auto=format%2Ccompress&fit=max)
ನಾದ ಬ್ರಹ್ಮ: ಭಗವಂತನ ನಾಮ ಮತ್ತು ಭಗವಂತನೂ ಬೇರೆಯಲ್ಲ ಎಂಬುದು ನಂಬಿಕೆ. ಶರಣಾಗತಿ: ಹಾಡುವಾಗ ಭಕ್ತನು ತನ್ನನ್ನು ತಾನು ಮರೆತು ಭಕ್ತಿಯ ಲಯದಲ್ಲಿ ಲೀನವಾಗುತ್ತಾನೆ.
ಅಂತಿಮವಾಗಿ, ‘ನಾಹಂ ವಸಾಮಿ ವೈಕುಂಠೇ ಯೋಗಿನಾಂ ಹೃದಯೇ ನ ಚ, / ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿ ನಾರದ’ ಶ್ಲೋಕವು ನಮಗೆ ನೆನಪಿಸುವುದೇನೆಂದರೆ ದೇವರು ಎಲ್ಲೋ ದೂರದ ಸ್ವರ್ಗದಲ್ಲಿರುವ ಸರ್ವಾಧಿಕಾರಿಯಲ್ಲ, ಅಥವಾ ಕೇವಲ ಅತೀಂದ್ರಿಯ ಶಕ್ತಿಗಳಿರುವ ಯೋಗಿಗಳಿಗೆ ಮಾತ್ರ ದಕ್ಕುವ ರಹಸ್ಯವಲ್ಲ. ಪ್ರೀತಿಯಿಂದ ಕರೆದಾಗ ಓಗೊಡುವ ಆತ್ಮೀಯ ಸಖ ಆತ. ಎಲ್ಲಿ ಭಕ್ತಿಯ ಗಾಯನವಿರುತ್ತದೆಯೋ, ಆ ಸಾಮಾನ್ಯ ಜಾಗವೇ ವೈಕುಂಠಕ್ಕಿಂತಲೂ ಪವಿತ್ರವಾದ ತಾಣವಾಗಿ ಮಾರ್ಪಡುತ್ತದೆ.
ನಿಮ್ಮ ಉದ್ಧಾರ ನಿಮ್ಮ ಕೈಯಲ್ಲೇ: ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಸಮಸ್ಯೆಗಳಿಗೆ ನಾವು ಹೊರಗಿನ ಜಗತ್ತಿನಲ್ಲಿ ಪರಿಹಾರ ಹುಡುಕುತ್ತೇವೆ. ಪ್ರೇರಣೆಗಾಗಿ ಯಾರನ್ನೋ ಅವಲಂಬಿಸುತ್ತೇವೆ ಅಥವಾ ನಮ್ಮ ಕಷ್ಟಗಳಿಗೆ ಸಂದರ್ಭಗಳನ್ನು ದೂಷಿಸುತ್ತೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (ಅಧ್ಯಾಯ 6, ಶ್ಲೋಕ 5) ಮಾನವನ ಮನೋಬಲ ಮತ್ತು ಬೆಳವಣಿಗೆಗೆ ಒಂದು ಅದ್ಭುತ ಸೂತ್ರವನ್ನು ನೀಡಿದ್ದಾನೆ:
ಉದ್ಧರೇತ್ ಆತ್ಮನಾ ಆತ್ಮಾನಂ ನ ಆತ್ಮಾನಮ್ ಅವಸಾದಯೇತ್ |ಆತ್ಮ ಏವ ಹಿ ಆತ್ಮನಃ ಬಂಧುಃ ಆತ್ಮ ಏವ ರಿಪುಃ ಆತ್ಮನಃ || 6.5 ||
ಮನುಷ್ಯನು ತನ್ನ ಮನಸ್ಸಿನಿಂದ (ವಿವೇಕದಿಂದ) ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು, ತನ್ನನ್ನು ತಾನೇ ತಗ್ಗಿಸಿಕೊಳ್ಳಬಾರದು (ನಾಶಮಾಡಿಕೊಳ್ಳಬಾರದು). ಏಕೆಂದರೆ, ಈ ಮನಸ್ಸು ತಾನೇ ತನಗೆ ಮಿತ್ರನೂ ಹೌದು, ತಾನೇ ತನಗೆ ಶತ್ರುವೂ ಹೌದು.