ಜೀವದ ಉಗಮವೇ ಕತ್ತಲಲ್ಲಿ ಆದ್ರೂ, ಬಾಹ್ಯ ಪ್ರಪಂಚದ ಶುಭ ಕಾರ್ಯಗಳಿಗೆ ಕಪ್ಪು ಬಣ್ಣ ಅಶುಭ ಯಾಕೆ? ಇಲ್ಲಿದೆ ಅಚ್ಚರಿ ಉತ್ತರ... Bad Color

ಜೀವದ ಉಗಮವೇ ಕತ್ತಲಲ್ಲಿ ಆದ್ರೂ, ಬಾಹ್ಯ ಪ್ರಪಂಚದ ಶುಭ ಕಾರ್ಯಗಳಿಗೆ ಕಪ್ಪು ಬಣ್ಣ ಅಶುಭ ಯಾಕೆ? ಇಲ್ಲಿದೆ ಅಚ್ಚರಿ ಉತ್ತರ... Bad Color
ಜೀವದ ಉಗಮವೇ ಕತ್ತಲಲ್ಲಿ ಆದ್ರೂ, ಬಾಹ್ಯ ಪ್ರಪಂಚದ ಶುಭ ಕಾರ್ಯಗಳಿಗೆ ಕಪ್ಪು ಬಣ್ಣ ಅಶುಭ ಯಾಕೆ? ಇಲ್ಲಿದೆ ಅಚ್ಚರಿ ಉತ್ತರ... Bad Color
Published on

ಪ್ರಮುಖ ಮುಖ್ಯಾಂಶಗಳು

  • ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತಾ ಕಪ್ಪು ಬಣ್ಣ? ಧಾರ್ಮಿಕ ಆಚರಣೆಗಳಲ್ಲಿ ಕಪ್ಪು ಬಟ್ಟೆ ನಿಷೇಧದ ಹಿಂದಿನ ಕಹಿ ಸತ್ಯ!
  • ಕಾಳಿ ಮಾತೆ ಮತ್ತು ಶನಿ ದೇವರ ನೆಚ್ಚಿನ ಬಣ್ಣ ಕಪ್ಪು... ಲೌಕಿಕ ಜೀವನದಲ್ಲಿ ಇದು ದುರಾದೃಷ್ಟದ ಸಂಕೇತವಾಗಿದ್ದು ಹೇಗೆ?
  • ಶುಭ ಸಮಾರಂಭಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಕಪ್ಪು ಬಣ್ಣ ಬಿಟ್ಟು ಈ ಬಣ್ಣಗಳ ಉಡುಪು ಧರಿಸಿ!
  • ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಅಶುಭ ಎನ್ನಲು ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ...
Bad Color : ಹಿಂದೂ ಧರ್ಮ ಮತ್ತು ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ಅಥವಾ ಹಬ್ಬ ಹರಿದಿನಗಳು ನಡೆಯುವಾಗ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಬಾರದು ಎಂಬ ನಿಯಮವಿದೆ. ಕಪ್ಪು ಬಣ್ಣವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆ ಮತ್ತು ಹೆಚ್ಚಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನ್ಯಾಯದ ದೇವರೆಂದೇ ಕರೆಯಲ್ಪಡುವ ಶನಿ ದೇವರ ನೆಚ್ಚಿನ ಬಣ್ಣ ಕಪ್ಪಾಗಿದೆ. ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣವನ್ನು ಬಳಸುವುದರಿಂದ ಆಚರಣೆಗಳ ಧನಾತ್ಮಕ ಫಲಗಳು ಕಡಿಮೆಯಾಗಬಹುದು ಎಂಬ ನಂಬಿಕೆ ಇರುವುದರಿಂದ, ಬೇರೆ ಯಾವುದೇ ಬಣ್ಣದ ಉಡುಪುಗಳನ್ನು ಧರಿಸಿದರೂ ಕಪ್ಪು ಬಣ್ಣದಿಂದ ದೂರವಿರಲು ಹಿರಿಯರು ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಕಪ್ಪು ಬಣ್ಣವು ಬೆಳಕನ್ನು ಪ್ರತಿಫಲಿಸುವ ಬದಲು ತನ್ನೊಳಗೆ ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ, ಹಾಗೆಯೇ ಇದು ಪರಿಸರದಲ್ಲಿರುವ ನಕಾರಾತ್ಮಕ ಕಂಪನಗಳನ್ನು ಮತ್ತು ತಾಮಸಿಕ ಗುಣಗಳನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಮತ್ತೊಂದೆಡೆ, ಗರ್ಭಕೋಶದ ಸೃಷ್ಟಿ ಮತ್ತು ಜೀವದ ಉಗಮದ ಪ್ರಕ್ರಿಯೆಯು ಕತ್ತಲೆಯ ಗರ್ಭದಲ್ಲೇ ಆರಂಭವಾಗುವುದರಿಂದ ಪ್ರಕೃತಿಯ ನಿಯಮದಂತೆ ಅಲ್ಲಿ ಕಪ್ಪು ಬಣ್ಣದ ಉಪಸ್ಥಿತಿ ಸ್ವಾಭಾವಿಕವಾಗಿರುತ್ತದೆ. ಆದರೆ ಬಾಹ್ಯ ಪ್ರಪಂಚದ ಶುಭ ಕಾರ್ಯಗಳಲ್ಲಿ ಮನಸ್ಸಿಗೆ ಉತ್ಸಾಹ, ಪಾವಿತ್ರ್ಯತೆ ಮತ್ತು ಸಕಾರಾತ್ಮಕತೆಯನ್ನು ತರಲು ಬಿಳಿ, ಹಳದಿ, ಕೆಂಪು ಅಥವಾ ಹಸಿರಿನಂತಹ ಇತರ ಪ್ರಕಾಶಮಾನವಾದ ಬಣ್ಣಗಳನ್ನೇ ಧರಿಸಬೇಕು ಎಂದು ಶಾಸ್ತ್ರಗಳು ಪ್ರತಿಪಾದಿಸುತ್ತವೆ.
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಕಪ್ಪು ಬಣ್ಣವು ಮಹಾಶಕ್ತಿಯ ಆರಾಧ್ಯ ದೇವತೆಯಾದ ಕಾಳಿ ಮಾತೆಯನ್ನು ಪ್ರತಿನಿಧಿಸುತ್ತದೆ. ಯಾವುದೇ ಬೆಳಕಿಲ್ಲದ ಸಂಪೂರ್ಣ ಕತ್ತಲೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅಮಾವಾಸ್ಯೆಯ ರಾತ್ರಿಯು ಕಾಳಿ ದೇವಿಯ ಪ್ರಭಾವದಿಂದಲೇ ಕತ್ತಲೆಯಿಂದ ಆವೃತವಾಗಿರುತ್ತದೆ ಎಂದು ಬಲವಾಗಿ ನಂಬಲಾಗಿದೆ. ಕಾಳಿ ಮಾದೇವಿಯು ಬ್ರಹ್ಮಾಂಡದ ಎಲ್ಲಾ ಬಣ್ಣಗಳನ್ನು ಮತ್ತು ನಕಾರಾತ್ಮಕತೆಗಳನ್ನು ತನ್ನೊಳಗೆ ಹೀರಿಕೊಂಡು ಜಗತ್ತಿಗೆ ಕತ್ತಲೆಯ ಸ್ವರೂಪವನ್ನು ನೀಡುತ್ತಾಳೆ ಎನ್ನುವ ಹಿನ್ನೆಲೆಯಲ್ಲಿ ಈ ಬಣ್ಣಕ್ಕೆ ದೈವಿಕ ಪ್ರಾಮುಖ್ಯತೆಯೂ ಇದೆ.
ಆದರೆ, ಇದೇ ಕಾರಣಕ್ಕಾಗಿ ಲೌಕಿಕ ಜೀವನದಲ್ಲಿ ಮತ್ತು ಆಚರಣೆಗಳಲ್ಲಿ ಕಪ್ಪು ಬಣ್ಣವನ್ನು ಅಶುಭ ಅಥವಾ ದುರಾದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಾಳಿ ದೇವಿಯು ಸೃಷ್ಟಿಯ ಎಲ್ಲಾ ರಂಗುಗಳನ್ನು ದೂರಮಾಡಿ ಕತ್ತಲೆಯನ್ನು ಕರುಣಿಸುವಂತೆ, ಕಪ್ಪು ಬಣ್ಣವು ಜೀವನದ ಉತ್ಸಾಹ ಮತ್ತು ಬಣ್ಣಗಳನ್ನು ಮರೆಮಾಡುತ್ತದೆ ಎಂಬ ಭಾವನೆ ಜನರಲ್ಲಿದೆ. ಹೀಗಾಗಿಯೇ ಯಾವುದೇ ಮಂಗಳ ಕಾರ್ಯಗಳಿರಲಿ ಅಥವಾ ಧಾರ್ಮಿಕ ಆಚರಣೆಗಳಿರಲಿ, ಕಪ್ಪು ಬಣ್ಣದ ಬಳಕೆಯನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ.
ಮನೆಯಲ್ಲಿ ನಡೆಯುವ ಮದುವೆ, ಹಬ್ಬ ಅಥವಾ ಪೂಜೆಗಳಂತಹ ಶುಭ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬ ಭಯ ಜನರಲ್ಲಿದೆ. ಈ ನಕಾರಾತ್ಮಕತೆಯು ಆ ದಿನದ ಪಾವಿತ್ರ್ಯತೆಯನ್ನು ಭಂಗಗೊಳಿಸಿ, ಶುಭ ಘಳಿಗೆಯನ್ನು ಅಶುಭವಾಗಿ ಅಥವಾ ಕೆಟ್ಟ ದಿನವನ್ನಾಗಿ ಬದಲಾಯಿಸಬಹುದು ಎಂಬ ಆತಂಕವಿರುತ್ತದೆ. ಆದ್ದರಿಂದಲೇ ಮನಸ್ಸಿಗೆ ಮತ್ತು ಪರಿಸರಕ್ಕೆ ಸಕಾರಾತ್ಮಕ ಕಂಪನಗಳನ್ನು ನೀಡುವ ಇತರ ಬಣ್ಣಗಳಿಗೆ ಆದ್ಯತೆ ನೀಡಿ, ಕಪ್ಪು ಬಣ್ಣದಿಂದ ದೂರವಿರಲು ಹಿರಿಯರು ಸಲಹೆ ನೀಡುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net