ಶುಭ ದಿನಗಳಲ್ಲಿ ತಲೆಸ್ನಾನ ಕಡ್ಡಾಯವೇಕೆ? ಇಲ್ಲಿದೆ ನಮ್ಮ ಸಂಪ್ರದಾಯದ ಹಿಂದಿನ ಆರೋಗ್ಯ ರಹಸ್ಯ!...Hindu traditions head bath

Hindu traditions head bath
Hindu traditions head bath
Published on

ಪ್ರಮುಖ ಮುಖ್ಯಾಂಶಗಳು

  • ಪೂಜೆ, ವ್ರತ, ಮದುವೆ ಹಾಗೂ ಹಬ್ಬಗಳಂತಹ ಶುಭದಿನದಲ್ಲಿ ತಲೆ ಸ್ನಾನ ಮಾಡೋದು ಕಡ್ಡಾಯ ಯಾಕೆ?
  • ಮೈಸ್ನಾನ ಹಾಗೂ ತಲೆಸ್ನಾನದ ನಂತರ ದೇವರನ್ನು ಪ್ರಾರ್ಥಿಸುವುದರಿಂದ ಮನಸ್ಸಿಗೆ ನೆಮ್ಮದಿ
  • ದೇಹದ ಆಯಾಸವನ್ನು ಹೋಗಲಾಡಿಸಿ, ಹೊಸ ದಿನದ ಆರಂಭಕ್ಕೆ ಉತ್ಸಾಹ ನೀಡುತ್ತದೆ.
HeadBath Tradition: ಸಾಮಾನ್ಯವಾಗಿ ಹಬ್ಬ-ಹರಿದಿನ, ಪೂಜಾ ಸಮಾರಂಭಗಳಲ್ಲಿ ನಮ್ಮ ಪೂರ್ವಜರು ಸೇರಿದಂತೆ, ಇತ್ತೀಚಿನ ಕಾಲಮಾನದವರು ಸಹ ತಲೆ ಸ್ನಾನ ಮಾಡುವುದುನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ಶಾರೀರಿಕ ಸ್ವಚ್ಛತೆಯೊಂದಿಗೆ ಮಾನಸಿಕ ಪ್ರಶಾಂತತೆ ಹಾಗೂ ಆಧ್ಯಾತ್ಮಿಕ ಪಾವಿತ್ರ್ಯತೆಯನ್ನು ಹೊಂದುವುದೇ ಈ ಸಂಪ್ರದಾಯದ ಮೂಲ ಉದ್ದೇಶವಾಗಿದೆ.
ಮದುವೆ, ನಾಮಕರಣ, ಪೂಜೆ ಪುನಸ್ಕಾರಗಳು ಅಥವಾ ಇತರೆ ಪ್ರಮುಖ ಸಂದರ್ಭಗಳಿಗೆ ಮುನ್ನ ತಲೆಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಫ್ರೆಶ್ ಆಗಿ, ದಿನವನ್ನು ಸಕಾರಾತ್ಮಕ ಯೋಚನೆಗಳೊಂದಿಗೆ ಆರಂಭಿಸಬಹುದು ಎಂಬುದು ಹಿರಿಯರ ನಂಬಿಕೆಯಾಗಿದೆ.

ಪಾವಿತ್ರ್ಯತೆಯಿಂದ ಮಾತ್ರ ದೈವಾರಾಧನೆಗೆ ಸಂಪೂರ್ಣ ಫಲ

ಹಿಂದೂ ಸಂಪ್ರದಾಯದ ಪ್ರಕಾರ ಸ್ವಚ್ಛತೆ ಎಂದರೆ ಕೇವಲ ಮೈಯನ್ನು ತೊಳೆಯುವುದು ಮಾತ್ರವಲ್ಲ. ಮನಸ್ಸಿನ ಆಲೋಚನೆ ಹಾಗೂ ನಮ್ಮ ನಡವಳಿಕೆ ಶುದ್ಧಿಯಾಗಿರಬೇಕು ಎಂದು ಶಾಸ್ತ್ರಗಳು ಸಾರುತ್ತವೆ. ದೇವಸ್ಥಾನಕ್ಕೆ ತೆರಳುವ ಮುನ್ನ ಅಥವಾ ಮನೆಯಲ್ಲೇ ಪೂಜೆ ಮಾಡುವ ಮುನ್ನ ತಲೆಸ್ನಾನ ಮಾಡುವುದು ಅನೇಕ ಕುಟುಂಬಗಳಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ. ತಲೆಸ್ನಾನದ ಬಳಿಕ ದೇವರಿಗೆ ಭಕ್ತಿಭಾವದಿಂದ ನಮಿಸುವುದರಿಂದ ಏಕಾಗ್ರತೆ ಹಾಗೂ ವೃದ್ಧಿಸುವುದಲ್ಲದೆ, ಪೂಜೆಯ ಸಂಪೂರ್ಣ ಆಧ್ಯಾತ್ಮಿಕ ಅನುಭೂತಿ ಲಭಿಸುವಂತೆ ಮಾಡುತ್ತದೆ.

ದೇಹ ಮತ್ತು ಮನಸ್ಸಿಗೆ ಹೊಸ ಹುರುಪು

ತಲೆಸ್ನಾನ ಮಾಡಿ ಯಾವುದೇ ಶುಭಕಾರ್ಯ ಮಾಡುವುದು ಆಯಾಸ ದೂರವಾಗುವಂತೆ ಮಾಡಿ, ಮನಸ್ಸು ಪ್ರಶಾಂತವಾಗಿರುವುದರೊಂದಿಗೆ ಉತ್ಸಾಹವೂ ಇಮ್ಮಡಿಯಾಗುವಂತೆ ಮಾಡುತ್ತದೆ.

ಹೊಸ ಆರಂಭದ ಸಂಕೇತ

ಶುಭ ದಿನಗಳೆಂದರೆ ಹೊಸ ಅವಕಾಶಗಳು, ಹೊಸ ಆಸೆಗಳು ಮತ್ತು ಧನಾತ್ಮಕ ಬದಲಾವಣೆಗಳ ಸಂಕೇತ. ಅಂತಹ ದಿನವನ್ನು ತಲಸ್ನಾನದೊಂದಿಗೆ ಶುರು ಮಾಡುವುದು ಎಂದರೆ ಹಿಂದಿನ ಆಯಾಸ ಹಾಗೂ ನಕಾರಾತ್ಮಕ ಭಾವನೆಗಳನ್ನು ಮರೆತು, ಹೊಸ ಉಮ್ಮಸ್ಸಿನೊಂದಿಗೆ ಜೀವನವನ್ನು ಸ್ವಾಗತಿಸುವುದಾಗಿದೆ. ಮೈ-ಮನಸ್ಸು ಸ್ವಚ್ಛವಾಗಿದ್ದಾಗ ಆಲೋಚನೆಗಳೂ ಹೆಚ್ಚು ಶಿಸ್ತಿನಿಂದ ಕೂಡಿರುತ್ತವೆ.

ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿ

ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ತಲೆಸ್ನಾನ ಪ್ರಮುಖ ಪಾತ್ರ ವಹಿಸುತ್ತದೆ. ಬೆವರು, ಧೂಳು ಮತ್ತು ಕೊಳೆ ಸಂಪೂರ್ಣವಾಗಿ ತೊಳೆದುಹೋಗುವುದರಿಂದ ಚರ್ಮ, ನೆತ್ತಿ ಹಾಗೂ ಕೂದಲು ಆರೋಗ್ಯವಾಗಿರಲು ಇದು ಸಹಕರಿಸುತ್ತದೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಅಥವಾ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದ ಬಳಿಕ ಸ್ನಾನ ಮಾಡುವುದರಿಂದ ದೇಹವು ಹಗುರಾಗಿ ಫ್ರೆಶ್ ಅನಿಸುತ್ತದೆ. ಆದರೆ ಜ್ವರ, ಗಂಭೀರ ಅನಾರೋಗ್ಯ ಅಥವಾ ವೈದ್ಯರು ಸೂಚಿಸಿದ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಲಸ್ನಾನ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net