ವಾರ ಭವಿಷ್ಯ: ಈ ರಾಶಿಯವರು ಸುಖವಾದ ಜೀವನ ಪಡೆದು ಸಂತೋಷ ಪಡಬಹುದು

Weekly Astrology
Weekly Astrology
Published on
ವೃಷಭ: ಎರಡನೇ ಮನೆಯಲ್ಲಿ ವಕ್ರೀ ಗುರು, ಏಕಾದಶದಲ್ಲಿ ಶನಿಯಿದ್ದು, ನಿಮಗೆ ವಿಧಾತನೇ ಕೊಟ್ಟ ಭಾಗ್ಯ. ಕಷ್ಟಪಟ್ಟು ಮಾಡಿದ ಕೆಲಸ, ಅಭಿವೃದ್ಧಿ ಲಾಭ, ಇನ್ನೂ ಹೆಚ್ಚಿನ ಕೆಲಸಗಳು ಕೈಗೆ ಬಂದು ಸೇರುವವು. ನಿರೀಕ್ಷಿಸಿದ ಕಾರ್ಯಗಳಿಗೆ ವಿಶೇಷವಾದ ಪ್ರಾರ್ಥನೆ ಬೇಕು. ದುರ್ಗಾ ಸಪ್ತಶತಿ ಪಾರಾಯಣ ಮಾಡಿ ಅಥವಾ ಸೌಲಭ್ಯವಿದ್ದರೆ ನಿಮ್ಮ ಕುಲಗುರುಗಳನ್ನು ಸಂರ್ಪಸಿ. ಕಾರ್ಯ ಸಾಧನೆಗೆ ಚಂಡಿ ಹವನ ಮಾಡುವುದರಿಂದ ನಿಮಗೆ ಆಶೋತ್ತರವಾದ ಕಾಲ ಬರುತ್ತದೆ. ಬಂದ ದುಡ್ಡು ನಿಮ್ಮಲ್ಲೇ ನಿಲ್ಲುತ್ತದೆ.
ಮಿಥುನ: ಮಿಥುನಕ್ಕೆ ಆತ್ಮಕಾರಕನಾದ ಗುರು ಲಗ್ನದಲ್ಲಿ ಇರುವುದರಿಂದ ವಿಶೇಷವಾದ ಲಾಭ ತರಲಾರನು. ಗುರು ದ್ವಿತೀಯಕ್ಕೆ 2-6-2026ರಂದು ಬಂದಾಗ ವಿದ್ಯಾದಾನವನ್ನು ಮಾಡುವುದು ಸರ್ವಶ್ರೇಷ್ಠವೆಂದು ವಚನವಿರುತ್ತದೆ. ಸಾಧ್ಯವಾದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ದಾನ ನೀಡಿ. ಸಾಯಂಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಕಟಕ: ಕಟಕ ರಾಶಿಗೆ 12ರಲ್ಲಿ ಗುರು, 9ನೇ ಮನೆಯಲ್ಲಿ ಶನಿಯು ಗುರು ಮನೆಯಲ್ಲಿ ಇರುವುದ ರಿಂದ, ಗುರುವು ಕಟಕ ರಾಶಿಗೆ ಬಂದಾಗ ಗುರುಮನೆಯಲ್ಲಿ ಶನಿಯು ತನ್ನ ಬಲ ಹೆಚ್ಚಿಸಿ ನಿಮ್ಮ ಕೆಲಸ ಕಾರ್ಯಗತವಾಗುವಂತೆ ಮಾಡುತ್ತಾನೆ. ಗುರು ನರಸಿಂಹನ ಪ್ರಾರ್ಥನೆ ಇರಲಿ.
ಸಿಂಹ: 11ನೇ ಮನೆಯಲ್ಲಿ ಇರುವ ಗುರುವೇ ನಿಮ್ಮ ಬಲಾಬಲಕ್ಕೆ ಕಾರಣನಾಗಿದ್ದಾನೆ. ಶನಿಯು ಅಷ್ಟಮದಲ್ಲಿ ಇರುವುದರಿಂದ ಕೆಲಸಗಳು ಸಾಗುತ್ತಿವೆ. ಆದರೆ ನಿಮಗೆ ಬೇಕಾದ ಫಲಿತಾಂಶ ಕಾಣುತ್ತಿಲ್ಲ. ಗುರುವು ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ಆದರೆ ಏನನ್ನೇ ಗಳಿಸಲು ಈಶ್ವರನ ಪ್ರಾರ್ಥನೆ ಮಾಡಿದಲ್ಲಿ ಜೀವನ ಸುಖಮಯವಾಗಿರುತ್ತದೆ.
ಕನ್ಯಾ: ಮನುಷ್ಯನಿಗೆ ರೋಗರಹಿತ, ಋಣರಹಿತ ಜೀವನ ಸಾಗಿಸಲು ಪರಮಾತ್ಮನೇ ಬಲವನ್ನು ತುಂಬಿದರೆ ಸಾಕು. ಸಪ್ತಮ ಶನಿ, 2027ನೇ ಇಸವಿಯಲ್ಲಿ ಅಷ್ಟಮಕ್ಕೆ ಬರುತ್ತಾನೆ. ಗುರುವು 11ನೇ ಮನೆಗೆ ಬರುತ್ತಾನೆ. ದೈವಬಲವು ನಡೆದು ಸಂತೋಷಭರಿತರಾಗುತ್ತೀರಿ. ಸಪ್ತಾಷ್ಟಮದ ಶನಿಯಲ್ಲಿ ಶನಿಶಾಂತಿ ಮಾಡುವುದರಿಂದ ಒಳ್ಳೆಯದಾಗುತ್ತದೆ.
ತುಲಾ: ತುಲಾ ರಾಶಿಯ ಶುಕ್ರನು ಶನಿಯೊಂದಿಗಿದ್ದಲ್ಲಿ 14-3-2026ರಿಂದ ಮೀನ ರಾಶಿಗೆ ಬಂದು, ಲಗ್ನದಲ್ಲಿ ಶುಕ್ರ, ಶನಿಯು ದ್ವಂದ್ವ ಮಾಡುತ್ತಾರೆ. ಆದರೆ ಅದನ್ನು ನಿವಾರಿಸಲು ಗುರು ಆಶ್ರಯ ಬೇಕಾಗುವುದು. 9ನೇ ಮನೆಯಲ್ಲಿ ಇರುವುದರಿಂದ ಕುಲಗುರುಗಳನ್ನು ಪೂಜಿಸಿ, ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ.
ವೃಶ್ಚಿಕ: ಪಂಚಮದಲ್ಲಿ ಶನಿಯಿದ್ದಾನೆ, ಅಷ್ಟಮದಲ್ಲಿ ಗುರುವಿದ್ದಾನೆ. ಈ ಸಮಯದಲ್ಲಿ ನಿಧಾನವಾಗಿ ಇರಬೇಕು. ದಾನದಲ್ಲಿ ಶ್ರೇಷ್ಠದಾನ ಸಮಾಧಾನ. ವಸ್ತುಗಳನ್ನು ದಾನ ನೀಡುವುದು ಈ ಸಮಯದಲ್ಲಿ ಶ್ರೇಷ್ಠವಾದದ್ದು. ಮುತ್ತು-ಅಕ್ಕಿಯನ್ನು ದಾನ ನೀಡಿ. ಕೆಲಸದಲ್ಲಿ ಅತ್ಯಂತ ಹೆಚ್ಚಿನ ಫಲ ಪಡೆಯುತ್ತೀರಿ.
ಧನುಸ್ಸು: 4ನೇ ಮನೆಯಲ್ಲಿ ಶನಿ ಲಗ್ನಕ್ಕೆ ಸಪ್ತಮದಲ್ಲಿ ಗುರುವಿದ್ದಾನೆ. ಗುರು ಎಂದರೆ ನಿಮ್ಮ ಕೈಹಿಡಿದು ನಡೆಸಿ, ಬಾಳನ್ನು ಬಂಗಾರ ಮಾಡಿ, ವಿದ್ಯೆ ಕಲಿಸಿ ನಿಮ್ಮ ಏಳಿಗೆ ನೋಡಲು ಬಯಸುವ ತಂದೆ-ತಾಯಿ. ತಿಳಿದು ಮಾಡುವುದು ಉತ್ತಮ, ಹೇಳಿದರೂ ಮಾಡದೆ ಇರುವವರು ಅಧಮ. ನೀವು ಪ್ರಯತ್ನ ಪಟ್ಟ ಕೆಲಸವು ಈಡೇರುವ ನಿರೀಕ್ಷೆ ಇಟ್ಟುಕೊಂಡು ಗುರುಗಳನ್ನು ಪೂಜಿಸಿ ಆಶೀರ್ವಾದ ಪಡೆದು ಕೆಲಸದಲ್ಲಿ ಮುಂದೆ ಸಾಗಿ ಸಪ್ತಮ ಗುರುವಿನಿಂದ ಸುಖವಾದ ಜೀವನ ಪಡೆದು ಸಂತೋಷ ಪಡಬಹುದು.
ಮಕರ: ಮಕರ ರಾಶಿಗೆ ಶನಿಯು 3ನೇ ಮನೆಯಲ್ಲಿದ್ದು ಗುರು 6ರಲ್ಲಿದ್ದು, ಮನೋರೋಗವನ್ನು ತುಂಬಿರುತ್ತಾನೆ. ರೋಗವೆಂದರೆ ರೋಗವಲ್ಲ, ಹತ್ತು ಹಲವಾರು ಚಿಂತೆಗಳಿಂದ ಕೆಲಸಗಳು ಕೈಗೂಡುವುದಿಲ್ಲ. ಗುರುವು ಸಪ್ತಮಕ್ಕೆ ಬಂದಾಗ ಭರದಿಂದ ಕೆಲಸಗಳು ಮುನ್ನಡೆಯುತ್ತವೆ. 3ರಲ್ಲಿ ಶನಿ ಇದ್ದಾನೆ. ಶನೀಶ್ವರನೇ ನಿಮಗೆ ಸಮಯಕ್ಕೆ ಕೆಲಸ ನಡೆಯುವಂತೆ ಮಾಡುತ್ತಾನೆ. ಶನಿ ಪ್ರಾರ್ಥನೆ ಹಾಗೂ ಶಿವಪೂಜೆ ಇರಲೇಬೇಕು.
ಕುಂಭ: ಕುಂಭ ರಾಶಿಗೆ ಪಂಚ ಗುರು, ಶನಿ ಸಂಚಾರದ ಬಿಸಿ ತಟ್ಟಿ, ಲಗ್ನ ಸೂರ್ಯನೂ ಬಂದು ಸೇರಿ ಅಲ್ಲಿ ರಾಹುವಿರುವುದು ಹಠಾತ್ತಾಗಿ ಸಮಸ್ಯೆ ಬಂದು ಸಮಯವನ್ನು ಹಾಳು ಮಾಡುವುದಲ್ಲದೆ ನಷ್ಟ ಹಾಗೂ ಖಿನ್ನತೆ ಉಂಟು ಮಾಡುತ್ತಾರೆ. ಗುರು ಪ್ರಾರ್ಥನೆ ಹಾಗೂ ಗುರುಕೃಪೆ ಅತ್ಯಗತ್ಯ.
ಮೀನ: ಮೀನ ರಾಶಿಯವರಿಗೆ ಸ್ವಲ್ಪ ಸುಖವನ್ನು ಆಪತ್ತು ವಿಪತ್ತು ಕಳೆದು ನೀವು ಜೀವನ ಸರಿ ಮಾಡಿಕೊಳ್ಳಲು ಗ್ರಹಣದ ಕಾಲದಿಂದ ಮೂರರಿಂದ ಐದು ತಿಂಗಳು ಸಮಯವಿದೆ. ಕೆಲಸಕ್ಕೆ ತಕ್ಕನಾದ ಲಾಭ ಬರುತ್ತದೆ. ಶನಿಸಂಚಾರ ಇರುವುದರಿಂದ ನಿಧಾನವಾಗಿ ಸಾಗುವುದು ಒಳ್ಳೆಯದು. ನಿರೀಕ್ಷಿಸಿದ ಫಲ ಪಡೆಯಬೇಕಾದರೆ ಸೂರ್ಯ ಪ್ರಾರ್ಥನೆ ಹಾಗೂ ಗುರುಸಾರ್ವಭೌಮ ಗುರು ನರಸಿಂಹನನ್ನು ಪ್ರಾರ್ಥಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net