ಮನೆಯಲ್ಲಿ ಸದಾ ಜಗಳ, ಕಷ್ಟನಾ?; ಈ 6 ವಸ್ತುಗಳನ್ನು ಹೊರಹಾಕಿದರೆ ಅದೃಷ್ಟ ಬಾಗಿಲು ತೆರೆಯುತ್ತೆ!..Vastu Tips

ಮನೆಯಲ್ಲಿ ಸದಾ ಜಗಳ, ಕಷ್ಟನಾ?; ಈ 6 ವಸ್ತುಗಳನ್ನು ಹೊರಹಾಕಿದರೆ ಅದೃಷ್ಟ ಬಾಗಿಲು ತೆರೆಯುತ್ತೆ!..Vastu Tips
Published on: 
  • ಎಚ್ಚರ ನಿಮ್ಮ ಮನೆಯಲ್ಲಿ ಈ 6 ವಸ್ತುಗಳಿದ್ರೆ ಕಷ್ಟ ನಿಶ್ಚಿತ

  • ಮನೆಯಲ್ಲಿ ನಿಂತುಹೋದ ಗಡಿಯಾರವಿದ್ದರೆ ತಕ್ಷಣ ಬದಲಾಯಿಸಿ ಅಥವಾ ಸರಿಪಡಿಸಿ.

  • ಮನೆಯ ಒಳಗೆ ಮುಳ್ಳಿನ ಗಿಡಗಳನ್ನು ಬೆಳೆಸುವುದನ್ನು ತಪ್ಪಿಸಿ.

  • ಹಳೇ ಕ್ಯಾಲೆಂಡರ್ ಮತ್ತು ಒಣಗಿದ ಗಿಡಗಳು ನಕಾರಾತ್ಮಕ ಶಕ್ತಿಯ ಸಂಕೇತ.

Negative energy removal items : ಮನೆಯು ನಮ್ಮ ರಕ್ಷಣೆಗೆ ಇರುವ ಒಂದು ಸ್ಥಳವಲ್ಲ. ನಮ್ಮ ಸುರಕ್ಷತೆ ಕಾಪಾಡಲು, ವಾಸಿಸಲು ಇರುವ ಒಂದು ಜಾಗವಲ್ಲ. ಬದಲಾಗಿ ಅದು ನಮ್ಮ ಶಕ್ತಿ, ಯೋಗಕ್ಷೇಮದ ಪ್ರತಿಬಿಂಬ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಅಥವಾ ಅಂಶಗಳು ನೆಗಟಿವ್​ ಎನರ್ಜಿ ತರುತ್ತವೆ ಎಂದು ಪರಿಗಣಿಸಲ್ಪಟ್ಟಿದ್ದು, ಮನೆಯೊಳಗೆ ಇರುವುದನ್ನು ತಪ್ಪಿಸಬೇಕು. ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ತರುವ ಆ ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಮುಳ್ಳಿನ ಗಿಡ

ಮುಳ್ಳಿನ ಸ್ವಭಾವಕ್ಕೆ ಹೆಸರಾದ ಮುಳ್ಳಿನ ಗಿಡಗಳನ್ನು ಈಗ ಇಟ್ಟುಕೊಳ್ಳೋದು ಒಂದು ಫ್ಯಾಷನ್​. ಆದರೆ, ಕಳ್ಳಿ ಗಿಡಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ ಎಂದು ನಂಬಲಾಗುತ್ತದೆ. ಫೆಂಗ್‌ಶೂಯಿ ತತ್ವಗಳ ಪ್ರಕಾರ, ಇವುಗಳ ಚೂಪಾದ ಮುಳ್ಳುಗಳು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮತ್ತು ಕಲಹಗಳನ್ನು ಸೃಷ್ಟಿಸಬಹುದು.

ನಿಂತುಹೋದ ಗಡಿಯಾರಗಳು

ವಾಸ್ತು ಮತ್ತು ಫೆಂಗ್‌ಶೂಯಿ ಪ್ರಕಾರ, ನಿಂತುಹೋದ ಗಡಿಯಾರಗಳು ನಿಶ್ಚಲತೆಯನ್ನು ಸಂಕೇತಿಸುತ್ತವೆ. ಇದು ಮನೆಗೆ ಬರುವ ಸಕರಾತ್ಮಕ ಶಕ್ತಿಗೆ ಅಡ್ಡಿಪಡಿಸುತ್ತವೆ. ಗಡಿಯಾರಗಳು ಕೆಲಸ ಮಾಡದಿದ್ದರೆ ನಿಮ್ಮ ಜೀವನದಲ್ಲೂ ಪ್ರಗತಿ ನಿಂತುಹೋಗಿದೆ ಎಂದರ್ಥ. ಸಮಯವು ಸುಗಮವಾಗಿ ಮತ್ತು ಸಕಾರಾತ್ಮಕವಾಗಿ ಸಾಗಲು ಇವುಗಳನ್ನು ರಿಪೇರಿ ಮಾಡಿಸಿ ಅಥವಾ ಹೊಸದನ್ನು ಬದಲಾಯಿಸಿ.

ಹಳೆಯ ಕ್ಯಾಲೆಂಡರ್‌ಗಳು

ಬಳಕೆಯಲ್ಲಿಲ್ಲದ ಅಥವಾ ಹಳತಾದ ಕ್ಯಾಲೆಂಡರ್ ನಿಮ್ಮ ಜೀವನದಲ್ಲಿ ಪ್ರಗತಿಯ ಕೊರತೆ ಮತ್ತು ಮುಂದಾಲೋಚನೆಯಿಲ್ಲದಿರುವುದನ್ನು ಸೂಚಿಸುತ್ತದೆ. ಮನೆಯ ವಾತಾವರಣವನ್ನು ಹಾಯಾಗಿಡಲು ಹಳೆಯ ಕ್ಯಾಲೆಂಡರ್​ ಆಗಿಂದಾಗಲೇ ತೆಗೆದುಹಾಕುವುದು ಸರಿಯಾದ ವಿಧಾನ ಎಂದು ನಂಬಲಾಗಿದೆ. ಸಕಾರಾತ್ಮಕ ಪ್ರಗತಿಯ ಸಂಕೇತವಾಗಿ ಹಳೆಯ ಕ್ಯಾಲೆಂಡರ್‌ಗಳನ್ನು ಪ್ರಸ್ತುತ ವರ್ಷದ ಹೊಸ ಕ್ಯಾಲೆಂಡರ್‌ನಿಂದ ಬದಲಾಯಿಸಿ.

ಒಣಗಿದ ಸಸ್ಯಗಳು

ಜೀವಂತ ಸಸ್ಯಗಳು ಚೈತನ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುವಂತೆಯೇ, ಒಣಗಿದ ಅಥವಾ ಸತ್ತ ಸಸ್ಯಗಳು ಸಂಪೂರ್ಣ ವಿರುದ್ಧವಾದ ಪರಿಣಾಮ ಬೀರುತ್ತವೆ. ಇವು ನಿಶ್ಚಲತೆ ಮತ್ತು ಅವನತಿಯನ್ನು ಪ್ರತಿನಿಧಿಸುತ್ತವೆ. ನಿಮ್ಮ ವಾಸದ ಸ್ಥಳದಿಂದ ಒಣಗಿದ ಗಿಡಗಳನ್ನು ನಿಯಮಿತವಾಗಿ ತೆಗೆದುಹಾಕಿ, ಆರೋಗ್ಯಕರ ಸಸ್ಯಗಳನ್ನು ಇರಿಸಿ.

ತೂಗುವ ಕುರ್ಚಿ

ಮನೆಯಲ್ಲಿ ತೂಗುವ ಕುರ್ಚಿಯನ್ನು ಇಟ್ಟುಕೊಳ್ಳುವುದು ಒಂದು ಫ್ಯಾಶನ್​. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅವುಗಳನ್ನು ತಪ್ಪಾದ ಸ್ಥಳದಲ್ಲಿಟ್ಟರೆ ನೆಗಟಿವ್​ ಎನರ್ಜಿ ತರಬಹುದು ಎನ್ನಲಾಗುತ್ತದೆ. ರಾಕಿಂಗ್ ಚೇರ್‌ಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು, ಇದು ದಂಪತಿಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ.

ನಕಾರಾತ್ಮಕ ಕಲಾಕೃತಿಗಳು ಅಥವಾ ಪೇಂಟಿಂಗ್‌ಗಳು

ಕಲೆಗೆ ಸ್ಥಳದ ಶಕ್ತಿಯನ್ನು ಪ್ರಭಾವಿಸುವ ಶಕ್ತಿಯಿದೆ. ನಕಾರಾತ್ಮಕ ಭಾವನೆಗಳನ್ನು ಕೆರಳಿಸುವ ಅಥವಾ ಹಿಂಸೆ ಹಾಗೂ ದುಃಖದ ದೃಶ್ಯಗಳನ್ನು ಬಿಂಬಿಸುವ ಕಲಾಕೃತಿಗಳು ಅಥವಾ ಪೇಂಟಿಂಗ್‌ಗಳನ್ನು ಪ್ರದರ್ಶಿಸುವುದನ್ನು ತಪ್ಪಿಸಿ. ನಿಮ್ಮ ವೈಯಕ್ತಿಕ ಶಕ್ತಿಯೊಂದಿಗೆ ಪ್ರತಿಧ್ವನಿಸುವ ಮತ್ತು ಮನೆಯ ಒಟ್ಟಾರೆ ಸಕಾರಾತ್ಮಕತೆಯನ್ನು ಹೆಚ್ಚಿಸುವ ಸ್ಪೂರ್ತಿದಾಯಕ ಕಲೆಗಳನ್ನು ಆಯ್ಕೆಮಾಡಿ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net