ವಾಸ್ತು ವಾಸ್ತವ: ನೈಸರ್ಗಿಕ ವಾಸ್ತುವಿನ್ಯಾಸಕ್ಕೆ ಉತ್ತಮ ಉದಾಹರಣೆ ಹುತ್ತ..!

ವಾಸ್ತು ವಾಸ್ತವ: ನೈಸರ್ಗಿಕ ವಾಸ್ತುವಿನ್ಯಾಸಕ್ಕೆ ಉತ್ತಮ ಉದಾಹರಣೆ ಹುತ್ತ..!
Published on: 

ಪ್ರಕೃತಿಯಲ್ಲಿ ಲಕ್ಷಾಂತರ ಜೀವರಾಶಿ ಸ್ವತಂತ್ರವಾಗಿ ಜೀವಿಸುತ್ತಿವೆ. ಅಂತಹ ಎಲ್ಲ ಜೀವರಾಶಿಗಳ ಚೈತನ್ಯಶಕ್ತಿಯ ಮೂಲ ಪಂಚ ಮಹಾಭೂತ ಗಳು. ಈ ಹಿನ್ನೆಲೆಯಲ್ಲಿ ಪಂಚಭೂತಗಳ ಬಳಕೆಯ ಸಂದರ್ಭದಲ್ಲಿ ಪ್ರಮುಖವಾದದ್ದು ಜೀವಿಗಳು ವಾಸಿಸುವ ಸ್ಥಳ. ಆ ಸ್ಥಳವನ್ನು ವಿನ್ಯಾಸಗೊಳಿಸುವ ಶಕ್ತಿ ಪ್ರತಿ ಜೀವಿಯಲ್ಲೂ ಕರಗತವಾಗಿರುತ್ತದೆ. ಅಂತಹ ಜೀವಿಗಳು ಮತ್ತು ಅವುಗಳ ವಾಸಸ್ಥಳಗಳಲ್ಲಿ ಅತ್ಯಂತ ಪ್ರಮುಖ ಮತ್ತು ಶಾಸ್ತ್ರಬದ್ಧ ನೈಸರ್ಗಿಕ ವಾಸ್ತುವಿನ್ಯಾಸವನ್ನು ಕಾಣಲು ಸಾಧ್ಯವಿರುವುದು ಗೆದ್ದಲುಹುಳುಗಳು ನಿರ್ವಿುಸುವ ಹುತ್ತದಲ್ಲಿ. ಮನುಷ್ಯನಿಗೆ ವಾಸ್ತು ವಿನ್ಯಾಸದ ಮಹತ್ವ ಮತ್ತು ಜ್ಞಾನದ ಅರಿವು ಬರುವುದಕ್ಕೂ ಮೊದಲೇ ಪ್ರಾಣಿಗಳಲ್ಲಿ ವಾಸ್ತು ವಿನ್ಯಾಸದ ಬಳಕೆ ಇತ್ತು ಎಂಬುದಕ್ಕೆ ಇದು ಪ್ರಮುಖ ಸಾಕ್ಷಿ. ಗೆದ್ದಲು ಹುಳುಗಳು ಸೃಷ್ಟಿಯ ಆದಿಯಿಂದಲೂ ತಮ್ಮ ವಾಸಕ್ಕೆ ಅಗತ್ಯವಾದ ಹುತ್ತಗಳನ್ನು ನಿರ್ವಿುಸುವಾಗ ವಾಸ್ತುಪ್ರಕಾರ ಮಾಡುತ್ತಾ ಬಂದಿವೆ.

ಸಾಮಾನ್ಯವಾಗಿ ಮನೆ ನಿರ್ವಣದ ಮೊದಲನೇ ನಿರ್ಣಯ ಸ್ಥಳದ ಆಯ್ಕೆ. ಗೆದ್ದಲುಹುಳುಗಳು ಅತಿ ಜಾಗರೂಕತೆ ಮತ್ತು ವೈಜ್ಞಾನಿಕವಾಗಿ ಪರಿಶೀಲಿಸಿ ಸ್ಥಳವನ್ನು ಆಯ್ಕೆ ಮಾಡುತ್ತವೆ. ಬಹು ಮುಖ್ಯವಾಗಿ ಭೂಮಿಯ ಆಳದಲ್ಲಿ 660 ರಿಂದ ಒಂದು ಸಾವಿರ ಅಡಿ ಒಳಗೆ ನೀರಿನ ಹರಿವು ಇದ್ದರೆ ಮಾತ್ರ ಆ ಸ್ಥಳವನ್ನು ಆಯ್ಕೆ ಮಾಡುತ್ತವೆ. ಕೇವಲ ಜಲಮೂಲವೊಂದೇ ಸ್ಥಳದ ಆಯ್ಕೆಯ ಮಾನದಂಡವಾಗಿರುವುದಿಲ್ಲ. ಬದಲಾಗಿ ತಾನು ಆಯ್ಕೆ ಮಾಡುವ ಸ್ಥಳದ 330 ಅಡಿ ವ್ಯಾಪ್ತಿಯಲ್ಲಿ ತನ್ನ ಆಹಾರದ ಮೂಲವಿರಬೇಕು. ಅಂದರೆ ಗಿಡದ ಎಲೆಗಳನ್ನು ಪ್ರಮುಖ ಆಹಾರವಾಗಿ ಸೇವಿಸುವ ಗೆದ್ದಲುಹುಳುಗಳು ಗಿಡ ಮರಗಳಿರುವ ಪರಿಸರವನ್ನು ಖಾತರಿ ಪಡಿಸಿಕೊಂಡು ನಂತರ ಹುತ್ತ ನಿರ್ಮಾಣಕ್ಕೆ ತೊಡಗುತ್ತವೆ.

ಯೋಜನಾಬದ್ಧ ನಿರ್ವಣದಲ್ಲಿ ನಿಷ್ಣಾತ: ಮನೆ ನಿರ್ವಣಕ್ಕೆ ಅಳತೆ, ಆಳ, ಅಗಲ, ಇತ್ಯಾದಿ ಸ್ವರೂಪವನ್ನು ಮೊದಲು ಯೋಜನಾ ಬದ್ಧ ಮಾಡಿಕೊಂಡು ತನ್ನ ಕಾಮಗಾರಿ ಆರಂಭಿಸುವ ಗೆದ್ದಲುಹುಳು, ವಾಸ್ತುವಿನ್ಯಾಸದಲ್ಲಿ ಪ್ರಮುಖವಾದ ಲೆಕ್ಕಾಚಾರವನ್ನು ಸರಿಯಾಗಿ ಪಾಲಿಸುತ್ತದೆ. ಭೂಮಿಯ ಒಳಗಿನ ಆಳಕ್ಕೆ ಅನುಗುಣವಾದ ಸಮಾನ ಎತ್ತರವನ್ನು ಭೂಮಿಯ ಮೇಲೆಯೂ ನಿರ್ವಿುಸುತ್ತದೆ. ಉದಾಹರಣೆಗೆ ಭೂಮಿಯ ಮೇಲೆ 6 ಅಥವಾ 8 ಅಡಿ ಎತ್ತರದ ಹುತ್ತವಿದ್ದರೆ, ಭೂಮಿಯ ಆಳದಲ್ಲಿಯೂ 6 ಅಥವಾ 8 ಅಡಿ ಇರುತ್ತದೆ. ಹಾಗೆ ನಿರ್ವಣಗೊಂಡ ಹುತ್ತವು ಹೊರನೋಟಕ್ಕೆ ಒಂದೇ ಸುತ್ತಳತೆಯ ರಚನೆಯಂತೆ ಕಂಡರೂ; ಒಳಗೆ ಪ್ರತ್ಯೇಕ ಹಲವು ಚೇಂಬರ್ (ಕಾಲೋನಿ)ಗಳನ್ನು ನಿರ್ವಿುಸುತ್ತದೆ. ಹುಳುಗಳ ವಾಸಕ್ಕೆ ಪ್ರತ್ಯೇಕ ಗೂಡುಗಳು, ಆಹಾರಧಾನ್ಯ ಸಂಗ್ರಹಕ್ಕೆ ಪ್ರತ್ಯೇಕ ಸ್ಥಳ, ರಾಣಿಹುಳುಗಳ ವಾಸಕ್ಕೆ ಪ್ರತ್ಯೇಕ ಕೊಠಡಿ ಹಾಗೂ ಗಾಳಿ, ಬೆಳಕಿನ ಸಂಚಾರಕ್ಕೆ ಪ್ರತ್ಯೇಕ ಮಾರ್ಗಗಳನ್ನು ರೂಪಿಸುತ್ತವೆ. ನುಣುಪಾದ ಮಣ್ಣನ್ನು ತನ್ನ ಎಂಜಲಿನಿಂದ ಹದಗೊಳಿಸಿ ನಿರ್ವಿುಸುವ ಹುತ್ತದ ಕಟ್ಟಡ ಎಂತಹುದೆ ನೈಸರ್ಗಿಕ ವಿಕೋಪಗಳಿಗೆ ಅಷ್ಟು ಸುಲಭವಾಗಿ ಹಾನಿಗೊಳಗಾಗುವುದಿಲ್ಲ.

ಅದ್ಭುತ ವೆಂಟಿಲೇಷನ್ ವ್ಯವಸ್ಥೆ: ಮೇಲ್ನೋಟಕ್ಕೆ ಪೂರ್ಣ ಕ್ಲೋಸ್ ಆಗಿರುವಂತೆ ಕಾಣುವ ಹುತ್ತದ ಒಳಗಿನ ಗಾಳಿಸಂಚಾರ ಸಮರ್ಪಕವಾಗಿರುತ್ತದೆ. ಹುತ್ತದ ಆಳದಲ್ಲಿ ತಂಪುಗಾಳಿಯ ಸಂಚಾರ ಹಾಗೂ ಹುಳುಗಳ ಉಸಿರಾಟದ ಬಿಸಿಗಾಳಿ ಮೇಲ್ಮುಖವಾಗಿ ಹೊರ ಹೋಗುವ ವೆಂಟಿಲೇಷನ್ ವ್ಯವಸ್ಥೆ ಇರುತ್ತದೆ. ಹುತ್ತದ ಹೊರಗಿನ ವಾತಾವರಣದಲ್ಲಿರುವ ಉಷ್ಣಾಂಶದ ಅರ್ಧಕ್ಕಿಂತ ಕಡಿಮೆ ಉಷ್ಣಾಂಶ ಹುತ್ತದೊಳಗೆ ಇರುತ್ತದೆ. ತನ್ನಲ್ಲೇ ಉತ್ಪತ್ತಿಯಾಗುವ ಜೆಲ್ ಮಾದರಿಯ ಲಾವಾರಸದಿಂದ ನುಣಪಾದ ಮಣ್ಣನ್ನು ಸಿಮೆಂಟ್ ಕಾಂಕ್ರೀಟ್ ರೀತಿ ಹದಗೊಳಿಸಿ ಹುತ್ತದ ಹೊರಮೇಲ್ಮೈ ಮತ್ತು ಒಳಮೇಲ್ಮೈ ಎರಡನ್ನು ವಾಟರ್ ಪ್ರೂಫ್ ಮಾದರಿಯಲ್ಲಿ ಪ್ಲಾಸ್ಟ್ ಮಾಡುತ್ತದೆ. ಇದರಿಂದ ಎಷ್ಟೇ ಬಿರುಸಾದ ಮಳೆ ಬಂದರೂ ನೀರು ಹುತ್ತದ ಮೇಲೆ ಇಂಗುವುದಿಲ್ಲ. ವೆಂಟಿಲೇಷನ್ ದ್ವಾರದಿಂದ ಒಳ ಹೋದ ನೀರು ಕೂಡಾ ಹುತ್ತದಿಂದ ಹೊರಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ಮುಂಜಾಗ್ರತೆಗೆ ತಕ್ಕಂತೆ ಒಳಾಂಗಣ ವಿನ್ಯಾಸ: ಚಿಕ್ಕ ಜೀವಿಯಾಗಿರುವ ಗೆದ್ದಲುಹುಳುಗಳಿಗೆ ಮುಂಜಾಗ್ರತೆ ಹೆಚ್ಚು. ಅದಕ್ಕೆ ತಕ್ಕಂತೆ ಹುತ್ತದ ಒಳಾಂಗಣ ವಿನ್ಯಾಸವನ್ನು ಮಾಡುತ್ತವೆ. ಭೂಮಿಯ ಆಳದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ವಾಸಿಸುವ ಗೆದ್ದಲುಹುಳುಗಳು ಹೊರಗಿನ ಪ್ರತಿಯೊಂದು ಚಲನವಲವನ್ನು ಕೇವಲ ಶಬ್ದಮಾತ್ರದಿಂದ ಗಮನಿಸುತ್ತಿರುತ್ತವೆ. ಒಂದು ವೇಳೆ ಹೊರಗಿನ ಶತ್ರುಗಳು ಹುತ್ತದೊಳಗೆ ಎಂಟ್ರಿ ಆದರೆ ಪರ್ಯಾಯ ಮಾರ್ಗದಿಂದ ಕ್ಷಣಮಾತ್ರದಲ್ಲಿ ಹೊರಬರುತ್ತವೆ. ಯಾವುದೇ ಅಪಾಯದ ಪರಿಸ್ಥಿತಿಯನ್ನು ನಿರ್ವಹಿಸಲು ಹುತ್ತದೊಳಗೆ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತವೆ. ಮಳೆಗಾಲದಲ್ಲಿ ಗೆದ್ದಲುಹುಳುಗಳು ಹೊರಗೆ ಬರುವುದಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಬಿಡುವಿಲ್ಲದಂತೆ ದುಡಿದು, ಮಳೆಗಾಲಕ್ಕೆ ಬೇಕಾದ ಅಪಾರ ಪ್ರಮಾಣದ ಆಹಾರಧಾನ್ಯಗಳನ್ನು ಸಂಗ್ರಹಿಸಿಡುತ್ತವೆ. ಭೂಮಿಯೊಳಗೆ ತಿಂಗಳುಗಟ್ಟಲೆ ಇಡುವ ಧಾನ್ಯಗಳು ಕೆಡದಂತೆ ಇಡುವ ಅದ್ಭುತ ತಂತ್ರಜ್ಞಾನ ಅವುಗಳಿಗೆ ಗೊತ್ತು.

ಈ ಹಿನ್ನೆಲೆಯಲ್ಲಿ ವಾಸ್ತುವಿನ್ಯಾಸ ನಿಸರ್ಗದಲ್ಲಿರುವ ಒಂದು ಅದ್ಭುತ ಶಾಸ್ತ್ರ. ಅದನ್ನು ಅನುಸರಿಸಿ ಪ್ರಾಣಿಗಳು ಯಾವುದೇ ರೋಗ-ರುಜಿನವಿಲ್ಲದೆ ತಮ್ಮ ಪೂರ್ಣಾಯುಷ್ಯವನ್ನು ಕಳೆಯುತ್ತವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ಅದರಂತೆ ಮನೆಗಳನ್ನು ನಿರ್ವಿುಸುವ ಕಾರ್ಯ ವಾಸ್ತುವಿನ್ಯಾಸಕಾರರು ಮಾಡಬೇಕು.