ಮದುವೆ ಅಡೆತಡೆ ನಿವಾರಣೆಗೆ ದುರ್ಗೆಗೆ ಕುಂಕುಮ ಅರ್ಚನೆ: ಅವಿವಾಹಿತೆಯರು ನವರಾತ್ರಿಯಲ್ಲಿ ಹೀಗೆ ಮಾಡಿ..Navaratri

ಮದುವೆ ಅಡೆತಡೆ ನಿವಾರಣೆಗೆ ದುರ್ಗೆಗೆ ಕುಂಕುಮ ಅರ್ಚನೆ: ಅವಿವಾಹಿತೆಯರು ನವರಾತ್ರಿಯಲ್ಲಿ ಹೀಗೆ ಮಾಡಿ..Navaratri
Published on: 
  • ದುರ್ಗೆಗೆ ಅವಿವಾಹಿತ ಯುವತಿಯರು ಸಿಂಧೂರ ಅರ್ಪಿಸಿದರೆ ಏನೆಲ್ಲ ಲಾಭವಿದೆ?.

  • ಕುಂಕುಮ ಪೂಜೆ ಮಾಡುವುದರಿಂದ ಅಪೇಕ್ಷಿತ ಗುಣಗಳ ಜೀವನ ಸಂಗಾತಿ ಪಡೆಯಬಹುದು.

  • ದೇವಿಗೆ ಅರ್ಪಿಸಿದ ಕುಂಕುಮವನ್ನು ಪ್ರಸಾದವಾಗಿ ಬಲಗೈಯ ಉಂಗುರದ ಬೆರಳಿನಿಂದ ಹಣೆಗೆ ಹಚ್ಚಿಕೊಳ್ಳುವುದು ಶುಭ.

ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಭಕ್ತಾದಿಗಳು ಶ್ರದ್ಧೆ ಮತ್ತು ಭಕ್ತಿಯಿಂದ ದೇವಾಲಯದಲ್ಲಿ ದುರ್ಗಾ ಮಾತೆಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಅದರಲ್ಲಿಯೂ ಈ ಸಮಯದಲ್ಲಿ ದೇವಿಗೆ ಕುಂಕುಮ ಅಥವಾ ಸಿಂಧೂರ ಅರ್ಪಣೆ ಮಾಡುವುದು ಮುಖ್ಯ.ಹಿಂದೂ ಸಂಪ್ರದಾಯದಲ್ಲಿ ಸಿಂಧೂರವೂ ಹೆಂಗಳೆಯರಿಗೆ ಸೌಭಾಗ್ಯ ಸೂಚಿಸುವ ಸಂಕೇತ. ಇದು ದಾಂಪತ್ಯ ಸುಖದ ಸಂಕೇತ ಎಂದು ಹೇಳಲಾಗುತ್ತದೆ. ಅದರಂತೆ ಮದುವೆಯಾಗದ ಕನ್ಯೆಯರು ನವರಾತ್ರಿ ಸಮಯದಲ್ಲಿ ದುರ್ಗೆಗೆ ಕುಂಕುಮ ಅರ್ಪಿಸಬೇಕೆ ಅಥವಾ ಬೇಡವೇ ಎಂದು ಗೊಂದಲ ಸೃಷ್ಟಿಯಾಗೋದು ಸಾಮಾನ್ಯ. ನಿಮ್ಮಲ್ಲಿ ಸದ್ಯ ಮೂಡಿರುವ ಹಲವು ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿ ಇದೆ. ಆಧ್ಯಾತ್ಮಿಕ ತಜ್ಞರು ಮತ್ತು ಹಿಂದೂ ಸಂಪ್ರದಾಯದ ಶಾಸ್ತ್ರಗಳ ಪ್ರಕಾರ ಮಾಹಿತಿ ಉಲ್ಲೇಖಿಸಲಾಗಿದೆ.

ಈ ನಿಯಮವಿಲ್ಲ

ಧಾರ್ಮಿಕ ನಂಬಿಕೆ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ, ಅವಿವಾಹಿತ ಮಹಿಳೆಯರು ಅಥವಾ ಯುವತಿಯರು ದುರ್ಗಾ ದೇವಿಗೆ ಕುಂಕುಮವನ್ನು ಅರ್ಪಿಸಬಹುದು. ಹಿಂದೂ ಧರ್ಮದಲ್ಲಿ ದುರ್ಗಾದೇವಿಯನ್ನು ‘ಸರ್ವಮಂಗಳೆ’ ಎಂದು ವರ್ಣಿಸಲಾಗಿದೆ. ಜಗನ್ಮಾತೆಯು ತನ್ನ ಎಲ್ಲಾ ಭಕ್ತರಿಗೂ ಸಮಾನವಾದ ಆಶೀರ್ವಾದವನ್ನು ನೀಡುತ್ತಾಳೆ. ಸಮನಾಗಿ ಬೇಡಿಕೆ ಈಡೇರಿಸುತ್ತಾಳೆ. ಆ ಕಾರಣದಿಂದಾಗಿ ಇಂತಹ ಮಹಿಳೆಯರೇ ದೇವಿಗೆ ಕುಂಕುಮ ಅರ್ಪಿಸಬೇಕು ಎನ್ನುವ ಯಾವುದೇ ನಿಯಮವಿಲ್ಲ.

ಕುಂಕುಮ ಪೂಜೆಯಿಂದ ಸಿಗುವ ಲಾಭ

ಅವಿವಾಹಿತ ಯುವತಿಯರು ದುರ್ಗಾ ದೇವಿಗೆ ಶ್ರದ್ಧಾ-ಭಕ್ತಿಯಿಂದ ಪೂಜೆ ಮಾಡುವುದರಿಂದ ಯುವತಿಯರಿಗೆ ತಮಗೆ ತಕ್ಕ ವರ ಅಥವಾ ತಮ್ಮನ್ನು ಅರ್ಥ ಮಾಡಿಕೊಳ್ಳುವಾತ, ಯಾವ ಗುಣದ ಹುಡುಗನನ್ನು ನೀವು ಹುಡುಕುತ್ತಿದ್ದೀರೋ ಅಂತವರೇ ನಿಮ್ಗೆ ದಕ್ಕುತ್ತಾರೆ. ವಿವಾಹ ಕಾರ್ಯದಲ್ಲಿ ಎದುರಾಗುವ ಸಕಲ ಅಡೆತಡೆಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ.

ಪೂಜೆ ಮಾಡುವಾಗ ಈ ವಿಚಾರ ಗಮನದಲ್ಲಿರಲಿ

ದುರ್ಗಾ ದೇವಿಯ ಪೂಜಾ ದಿನದಲ್ಲಿ ವಿವಾಹಿತ ಮಹಿಳೆಯರು, ಅವಿವಾಹಿತ ಯುವತಿಯರು ಕುಂಕುಮ ಅರ್ಪಿಸುವ ಮತ್ತು ಅದನ್ನು ಧರಿಸುವ ವಿಧಾನದಲ್ಲಿ ಭಿನ್ನತೆ ಇದೆ. ದೇವಿಗೆ ಕುಂಕುಮವನ್ನು ಭಕ್ತಿಯಿಂದ ಅರ್ಪಿಸಿದ ಬಳಿಕ, ಆ ಕುಂಕುಮವನ್ನು ದೇವಿಯ ಪ್ರಸಾದವಾಗಿ ತಮ್ಮ ಹಣೆಗೆ ಇಟ್ಟುಕೊಳ್ಳಬೇಕು ಇದು ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಒಂದು ನಿಯಮ. ನಿಮ್ಮ ಬಲಗೈ ಉಂಗುರದ ಬೆರಳಿನಿಂದ ಹಣೆಯ ಮಧ್ಯಭಾಗದಲ್ಲಿ ಸಿಂಧೂರವಿಟ್ಟುಕೊಳ್ಳೋದು ಶುಭ ಸಂಕೇತ.

ಪೂಜಾ ವಿಧಾನ ಹೇಗಿರಲಿದೆ?

ನವರಾತ್ರಿಯ ದಿನಗಳಲ್ಲಿ ದುರ್ಗಾ ದೇವಿಗೆ ಧೂಪದ್ರವ್ಯ, ಗಂಧ, ತುಪ್ಪದ ದೀಪ, ಹೂ ಅರ್ಪಿಸಬೇಕು. ಸರ್ವಮಂಗಳ ಮಾಂಗಲ್ಯೇ ಶಿವ ಸರ್ವಾರ್ಥ ಸಾಧಿಕೇಎಂಬ ಪವಿತ್ರ ಮಂತ್ರವನ್ನು ಓದುತ್ತ ದೇವಿ ಮೂರ್ತಿಗೆ ಬಲಗೈಯ ಉಂಗುರದ ಬೆರಳಿನಿಂದ ತಾಮ್ರ ಅಥವಾ ಬೆಳ್ಳಿ ವಸ್ತುವಿನಿಂದ ಕುಂಕುಮ ಅರ್ಪಣೆ ಮಾಡಬೇಕು

ದೇವಿಗೆ ಇಷ್ಟವಾದ ನೈವೇದ್ಯವನ್ನು ಅರ್ಪಿಸಿ ಪೂಜೆ ಪೂರ್ಣಗೊಂಡ ನಂತರ, ಪ್ರಸಾದ ರೂಪದ ಅದೇ ಕುಂಕುಮವನ್ನುಹಣೆಗೆ ಹಚ್ಚಿಕೊಳ್ಳಬೇಕು. ಜೀವನ ಸಂಗಾತಿ ಬಗ್ಗೆ ಬೇಡಿಕೆ ಇಡಬೇಕು. ಇದು ದುರ್ಗಾ ಪೂಜೆ ಮಾಡುವಾಗ ಪಾಲನೆ ಮಾಡಬೇಕಾದ ನಿಯಮಗಳಾಗಿವೆ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net