ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಎಣ್ಣೆ ಹಚ್ಚಿ ಸ್ನಾನ ಮಾಡಲಾಗುತ್ತದೆ. ಈ ಹಿಂದೆ ಹಿರಿಯರು ಅಭ್ಯಂಜನ ಸ್ನಾನ ಮಾಡಿಸುತ್ತಿದ್ದರು. ಇದು ಹಬ್ಬಕ್ಕಾಗಿ ಮಾಡುವುದಾದರು ದೇಹದ ನೋವು, ಕೂದಲ ಆರೈಕೆ, ಮನಶ್ಶಾಂತಿಯನ್ನುಂಟು ಮಾಡುತ್ತದೆ ಎಂದು ಹಿರಿಕರು ಹೇಳುತ್ತಾರೆ. ಹೆಂಗಳೆಯರು ರಂಗೋಲಿ ಹಾಕಿ, ಮನೆ ಸಾರಿಸಿ ಸಿಂಗರಿಸುತ್ತಾರೆ. ಇನ್ನು ಮನೆಗೆ ಮಾವಿನ ತೋರಣ, ಬೇವಿನ ಸೊಪ್ಪು ಕಟ್ಟುವುದು ಸಕರಾತ್ಮಕ ಆಲೋಚನೆಗಳನ್ನು ನೀಡುತ್ತದೆ.