ಆದರೆ, ‘ಮೇಲ್ಬೇರು ಕೆಳಗೊಂಬೆಯ ವೃಕ್ಷವೊಂದುಂಟು; ಅದನ್ನು ನೀವು ಕಂಡಿದ್ದೀರಾ?’ ಎಂದು ಶ್ರೀರಂಗಮಹಾಗುರುಗಳು ಶಿಷ್ಯರನ್ನು ಪ್ರಶ್ನಿಸಿದ್ದರು. ಕೃಷಿಕ್ಷೇತ್ರದಲ್ಲಿದ್ದವರೂ ಅಂತಹದೊಂದನ್ನು ಕಂಡಿಲ್ಲವೆಂದರು. ಆಗ, ನಾವೆಲ್ಲರೂ ಅಂತಹ ವೃಕ್ಷವೇ! ಎಂದವರು ಪ್ರತಿಪಾದಿಸಿದರು. ಹೀಗೆ ಎಲ್ಲೆಡೆ ಗೋಚರಿಸುವ ಮರವಿದುವೇ!