ವರಮಹಾಲಕ್ಷ್ಮಿ ಹಬ್ಬ ಯಾವ ದಿನದಂದು ಆಚರಿಸಲಾಗುತ್ತದೆ?; ಇಲ್ಲಿದೆ ಶುಭ ಮುಹೂರ್ತ, ಪೂಜಾ ವಿಧಾನದ ಮಾಹಿತಿ..Varalakshmi Vrat

Varalakshmi Vrat 2026 Date
Varalakshmi Vrat 2026 Date
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ 28ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
  • ವರಮಹಾಲಕ್ಷ್ಮಿ ಹಬ್ಬವನ್ನುಈ ದಿನ ಆಚರಿಸಿದರೆ ಅಷ್ಟ ಲಕ್ಷ್ಮಿಯರನ್ನು ಪೂಜಿಸಿದಂತೆ ಅರ್ಥ.
  • ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತ, ಪೂಜಾ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

Varalakshmi Vrat 2026 Date:

ದೃಕ್ ಪಂಚಾಂಗ

ದ ಪ್ರಕಾರ ಶ್ರಾವಣ ಮಾಸದ ಮಾಸದ ಕೊನೆಯ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಮಾತ್ರ ಪಾಲಿಸುವ ಈ ಹಬ್ಬವನ್ನು ಆರ್ಥಿಕ ಸಮೃದ್ಧಿಗಾಗಿ ಆಚರಣೆ ಮಾಡಲಾಗುತ್ತದೆ. ವರ ಎಂದರೆ ಬೇಡಿಕೆಗಳನ್ನು ವರ ನೀಡುವ ಲಕ್ಷ್ಮಿ ದೇವಿ ಎಂದು ಕರೆಯಲಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು?

ಈ ದಿನದಂದು ಸರಿಯಾದ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಈ ದಿನದಂದು ವರ-ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟ ಲಕ್ಷ್ಮಿಯರಾದ ಶ್ರೀ (ಸಂಪತ್ತು), ಭೂ (ಭೂಮಿ), ಸರಸ್ವತಿ (ವಿದ್ಯೆ), ಪ್ರೀತಿ (ಪ್ರೀತಿ), ಕೀರ್ತಿ (ಕೀರ್ತಿ), ಶಾಂತಿ (ಶಾಂತಿ), ತುಷ್ಟಿ (ಸಂತೋಷ) ಮತ್ತು ಪುಷ್ಟಿ (ಶಕ್ತಿ) ಇವರನ್ನು ಪೂಜಿಸುವುದಕ್ಕೆ ಸಮಾನ ಎಂದು ದೃಕ್​​ ಪಂಚಾಗ ಹೇಳುತ್ತದೆ.

ಯಾವ ದಿನ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ?

ದೃಕ್​​ ಪಂಚಾಗದ ಪ್ರಕಾರ, ಶ್ರಾವಣ ಮಾಸದ ಕೊನೆಯ ಶುಕ್ರವಾರ ಅಂದರೆ ಆಗಸ್ಟ್​28ರಂದು ಬರುತ್ತದೆ. ಈ ದಿನವು ಶ್ರಾವಣ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು ನಿರ್ಧಿಷ್ಟ ಲಗ್ನದಲ್ಲಿ ದೇವಿಯನ್ನು ಪೂಜಿಸೋದು ಶುಭ ಎಂದು ಪರಿಗಣಿಸಲಾಗಿದೆ. ಮುಂಜಾನೆಯ ಅವಧಿಯಾದ ಬ್ರಾಹ್ಮಿ ಮುಹೂರ್ತದಲ್ಲಿ ದೇವಿ ಪೂಜೆ ಎಲ್ಲ ಏರ್ಪಾಟು ಮಾಡಿಕೊಳ್ಳಬಹುದು.
ಸಿಂಹ ಲಗ್ನ, ವೃಶ್ಚಿಕ ಲಗ್ನ, ಕುಂಭ ಲಗ್ನ ಮತ್ತು ವೃಷಭ ಲಗ್ನದಲ್ಲಿ ಪೂಜೆ ಮಾಡುವುದರಿಂದ ನಕರಾತ್ಮಕ್ಕೆ ಮುಕ್ತಿ ಕೊಟ್ಟು ಸಕಾರಾತ್ಮಕ ಫಲಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದು ನಂಭಲಾಗಿದೆ.

ಪೂಜೆಗಾಗಿ ಅತ್ಯಂತ ಸೂಕ್ತವಾದ ಸಮಯವನ್ನು ಹೀಗಿದೆ..

  • ಸಿಂಹ ಲಗ್ನ ಪೂಜಾ ಮುಹೂರ್ತ (ಬೆಳಿಗ್ಗೆ)
  • 05:07 AM ರಿಂದ 07:29 AMಅವಧಿ - 01 ಗಂಟೆ 32 ನಿಮಿಷಗಳು
  • ವೃಶ್ಚಿಕ ಲಗ್ನ ಪೂಜಾ ಮುಹೂರ್ತ (ಮಧ್ಯಾಹ್ನ)
ಅವಧಿ - 02 ಗಂಟೆ 19 ನಿಮಿಷಗಳು
  • ಕುಂಭ ಲಗ್ನ ಪೂಜಾ ಮುಹೂರ್ತ (ಸಂಜೆ)
ಅವಧಿ - 1 ಗಂಟೆ 27 ನಿಮಿಷಗಳು

ವೃಷಭ ಲಗ್ನ ಪೂಜಾ ಮುಹೂರ್ತ (ಮಧ್ಯರಾತ್ರಿ)

10:37 PM ರಿಂದ 12:33 AM (ಆಗಸ್ಟ್ 29)
ಅವಧಿ - 01 ಗಂಟೆ 56 ನಿಮಿಷಗಳು
ಶ್ರಾವಣ ಮಾಸದ ಕೊನೆಯ ಶುಕ್ರವಾರ ವರಲಕ್ಷ್ಮಿ ವ್ರತ ಆಚರಣೆ ಮಾಡಲಾಗುತ್ತದೆ. ಶ್ರಾವಣ ಪೂರ್ಣಿಮೆಗಿಂತ ಕೇವಲ ಕೆಲವು ದಿನಗಳ ಮುಂಚಿತವಾಗಿ ಬರುತ್ತದೆ ಎಂದು ದೃಕ್​ ಪಂಚಾಗ ಹೇಳುತ್ತದೆ. ಆದರೆ, ಈ ವರ್ಷ ಅಂದರೆ 2026ರಲ್ಲಿ ವ್ರತವು ಶ್ರಾವಣ ಪೂರ್ಣಿಮೆಯಂದೇ ಬಂದಿದೆ. ಹುಣ್ಣಿಮೆಯ ದಿನದಂದು ಪವಿತ್ರ ಸ್ನಾನ ಮಾಡುವುದು ಮತ್ತು ದಾನ ಧರ್ಮಗಳನ್ನು ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಇದೇ ದಿನದಂದು ರಕ್ಷಾ ಬಂಧನವನ್ನು ಕೂಡ ಆಚರಿಸಲಾಗುತ್ತದೆ.

ವ್ರತ ಆಚರಣೆ ಹೀಗಿರಲಿದೆ

ಬೆಳಗ್ಗೆದ್ದು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸುವ ಸುಮಂಗಲಿಯರು, ದೇವರ ಕೈಂಕರ್ಯಕ್ಕೆ ಮುಂದಾಗುತ್ತಾರೆ. ಕಲಶವನ್ನು ಸ್ಥಾಪಿಸಿ ಮತ್ತು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿ. ದೇವಿಗೆ ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು ಮತ್ತು ದೀಪವನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ. ನಂತರ ದೇವರ ಕತೆಗಳನ್ನು ಕೇಳುವುದು ಒಳ್ಳೆಯದು.
ದಿನವಿಡೀ ಸಾತ್ವಿಕ ಆಹಾರವನ್ನು ಸೇವನೆ ಮಾಡಿ ಸಂಜೆ ಆರತಿಯ ನಂತರ ಪ್ರಸಾದ ಸ್ವೀಕರಿಸಿ. ಶುದ್ಧ ಮನಸ್ಸಿನಿಂದ ದೇವಿಯ ಪೂಜೆ ಮಾಡುವುದರಿಂದ ವರಮಹಾಲಕ್ಷ್ಮಿಯ ಪೂರ್ಣ ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗಿದೆ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net