ತಿಥಿ ಊಟ ಸೇವನೆಯು ದುರಾದೃಷ್ಟವೇ?; ಇಲ್ಲಿದೆ ಅಧ್ಯಾತ್ಮಿಕ ಸತ್ಯ ಮತ್ತು ಮೃತರ ಆಶೀರ್ವಾದದ ರಹಸ್ಯ!..Spiritual significance of Thithi Oota

Spiritual significance of Thithi Oota
Spiritual significance of Thithi Oota
Published on

ಪ್ರಮುಖ ಮುಖ್ಯಾಂಶಗಳು

  • ತಿಥಿ ಊಟ ಸೇವನೆ ವರವೋ, ಶಾಪವೋ ಆಧ್ಯಾತ್ಮಿಕ ಶಾಸ್​ತ್ರಗಳು ಏನನ್ನು ಹೇಳುತ್ತವೆ.
  • ತಿಥಿ ಊಟ ತಿಂದರೆ ಅಪಶಕುನ ಎದುರಾಗುತ್ತದೆ ಎನ್ನುವುದು ಮೂಢನಂಬಿಕೆ.
  • ಮೃತರಿಗೆ ಗೌರವ ಅರ್ಪಿಸೋದು ತಿಥಿ ಊಟ ಹಿಂದಿನ ರಹಸ್ಯ ಎನ್ನುತ್ತಾರೆ ತಜ್ಞರು.
Spiritual significance of Thithi Oota: ಯಾರದ್ದೇ ಮನೆಯಲ್ಲಿ ಸಾವಾದಾಗ ಮೂರನೇ ದಿನಕ್ಕೆ ಅಥವಾ ಐದನೇ ದಿನಕ್ಕೆ ಹಾಲು ಎರೆಯುವ ಶಾಸ್ತ್ರವಾಗುತ್ತದೆ. ನಂತರ ತಿಥಿ ಊಟವಿರುತ್ತದೆ. ಕೆಲವರು ಇದನ್ನು 11ನೇ ದಿನಕ್ಕೂ ಮಾಡುತ್ತಾರೆ. ಆದರೆ. ಸದ್ಯ ಹಲವರಲ್ಲಿ ಕಾಡುವ ಪ್ರಶ್ನೆ ಎಂದರೆ ತಿಥಿ ಊಟ ಸೇವನೆ ಅಪಶಕುನ ಎನ್ನುವುದು. ಇದು ತೊಂದರೆಯನ್ನುಂಟು ಮಾಡುತ್ತದೆ ಎನ್ನುವುದನ್ನು ಹಲವರು ನಂಬುತ್ತಾರೆ.
ಕೆಲವರು ತಿಥಿ ಊಟಕ್ಕೆ ಬರುತ್ತೇವೆ ಎಂದು ಸುಳ್ಳು ಹೇಳಿ ನಾನಾ ನೆಪ ಹೇಳಿ ಜಾರಿಕೊಳ್ಳೋದು ಉಂಟು. ಇದು ಅಶುಭ ಕೆಡಕಾಗುತ್ತೆ ಎಂದು ಭಾವಿಸುತ್ತಾರೆ. ಹಾಗಾದ್ರೆ ಈ ಬಗ್ಗ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ. ತಜ್ಞರು ಏನಂತಾರೆ, ಹಿಂದೂ ಸಂಪ್ರದಾಯವು ನಿಜಕ್ಕೂ ಈ ಪದ್ಧತಿಯನ್ನು ಅಪಶಕುನ ಎನ್ನುತ್ತಾ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ

ಅಪಶಕುನ ಎನ್ನುವ ಕಲ್ಪನೆ ತಪ್ಪು

ಸಾಮಾನ್ಯವಾಗಿ ಯಾರಾದರೂ ಸ್ವರ್ಗಸ್ಥರಾದರೇ ಮೂರು ಅಥವಾ ಹನ್ನೊಂದು ಅಥವಾ ಐದನೇ ದಿನಕ್ಕೆ ಪೂಜೆ ಮಾಡಿ, ಸೂತಕ ಕಳೆದುಕೊಂಡು ತಿಥಿ ಊಟ ಹಾಕಿಸುವ ಪದ್ಧತಿ ಇದೆ. ಹನ್ನೊಂದನೇ ದಿನ ಕುಟುಂಬಸ್ಥರು..ರುದ್ರ ಭೂಮಿಗೆ ತೆರಳಿ ಮೃತಪಟ್ಟವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಯಾರ ಮನೆಯಲ್ಲಾದರೂ ಮೃತಪಟ್ಟರೆ ಸೂತಕವಿರುತ್ತದೆ. ಅವರು ಹಣೆಗೆ ತಿಲಕವಿಡಕೂಡದು. ಆರು ಗಂಟೆಯ ನಂತರ ಮನೆಯಿಂದ ಹೊರಕ್ಕೆ ಹೋಗಬಾರದು. ಸೂತಕ ಕಳೆದುಕೊಳ್ಳುವವರೆಗೂ ಯಾವುದೇ ಪೂಜಾ ಕೈಂಕರ್ಯ ಮಾಡಬಾರದು ಹೌದು. ಆದರೆ, ಅವರು ತಯಾರಿ ಮಾಡುವ ಆಹಾರ ಸೇವನೆಯಿಂದ ಏನೂ ಸಂಭವಿಸೋದಿಲ್ಲ. ಇದು ಅಪಶಕುನವು ಅಲ್ಲ. ಇದರಿಂದ ಕಂಟಕ ಅಥವಾ ಆಧ್ಯಾತ್ಮಿಕ ಕಂಟಕ ಎದುರಾಗುತ್ತೆ ಎನ್ನುವುದು ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು.

ಮೂಢನಂಬಿಕೆಯಷ್ಟೇ

ಪುರಾಣ ಮತ್ತು ಹಳೆಯ ಕಾಲದ ಸಂಪ್ರದಾಯಸ್ಥ ಕುಟುಂಬಸ್ಥರು ಈ ನಂಬಿಕೆಯನ್ನು ರೂಢಿಸಿಕೊಂಡಿರುತ್ತಾರೆ. ಹಳೆಯ ಮೂಢನಂಬಿಕೆ. ಇವರುಗಳು ಹರಡುವ ತಪ್ಪು ಮಾಹಿತಿ ಕೆಲವರನ್ನು ದಿಕ್ಕು ತಪ್ಪಿಸುತ್ತಿದೆ. ತಿಥಿ ಮಾಡುವುದು ಸತ್ತ ವ್ಯಕ್ತಿಗೆ ನೀಡುವ ಒಂದು ಗೌರವಯುಕ್ತ ಕಾರ್ಯ. ಇದು ಅವರಿಗೆ ನೀಡುವ ಆತ್ಮತೃಪ್ತಿ. ಇದು ನಿಮಗೆ ಧನಾತ್ಮಕ ಆಶೀರ್ವಾದವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಸಾವಿನ ಮನೆಯಿಂದ ಸಿಗುವ ತೀರ್ಥ, ನೀರು, ಪ್ರಸಾದ ಏನೇ ಆಗಲಿ ಯಾವುದು ದುಷ್ಪರಿಣಾಮ ಬೀರೋದಿಲ್ಲ.
ತಿಥಿ ಊಟಕ್ಕೆ ಹೋಗಿ ಬಂದ ಕೂಡಲೇ ಇವರಿಗೆ ಹೃದಯಾಘಾತವಾಯ್ತು. ಹುಷಾರಿಲ್ಲದೆ ಹಾಸಿಗೆ ಹಿಡದರು ಎಂದು ಕೇಳಿಬರುವ ಮಾತುಗಳಿಗೆ ಕಿವಿಗೊಡಬೇಡಿ. ಇದೆಲ್ಲ ಒಂದು ಕಾಕತಾಳೀಯವಷ್ಟೇ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net