ಶಕ್ತಿ ತುಂಬುವ ಸ್ಕಂದಮಾತೆ

"ನನಗೆ ಮರಣವೇ ಬರಬಾರದು, ಒಂದು ವೇಳೆ ಬಂದರೂ ಶಿವಪುತ್ರನಿಂದ ಮಾತ್ರ' ಎಂಬ ವರವನ್ನು ಬ್ರಹ್ಮದೇವನಿಂದ ಪಡೆದ ನಂತರ ತಾರಕಾಸುರನು ಆರ್ಭಟಿಸಲು ಪ್ರಾರಂಭಿಸಿದ. ಇಂದ್ರ ಪದವಿಗೆ ಹಾಗೂ ದೇವಲೋಕಕ್ಕೆ ಅಡಿಯಿಟ್ಟು ಎಲ್ಲ ದೇವತೆಗಳನ್ನು ಹಿಂಸಿಸತೊಡಗಿದ. ದೇವೇಂದ್ರನ ಉಪಾಯದಂತೆ ಕಾಮದೇವನು ಶಿವನಲ್ಲಿ ಪ್ರವೇಶಿಸಿದಾಗ ಶಿವನು ಕೋಪಗೊಂಡು ತನ್ನ ತ್ರಿನೇತ್ರವನ್ನು ತೆರೆದಾಗ ಆರು ಯೋಗಾಗ್ನಿಯ ದೈವಿಕ ಕಿಡಿಗಳು ಪ್ರಕಾಶಮಾನವಾಗಿ ಸಿಡಿದು ಗಂಗಾನದಿಯಲ್ಲಿ ಬೆರೆತು ಆರು ಶಿಶುಗಳು ಜನನವಾದವು.
ಶಕ್ತಿ ತುಂಬುವ ಸ್ಕಂದಮಾತೆ
Published on: 

ಗಜೇಂದ್ರ ಬಾಬು

(ಲೇಖಕರು ಜ್ಯೋತಿಷ್ಯರು ಮತ್ತು ವಾಸ್ತುತಜ್ಞರು)

"ನನಗೆ ಮರಣವೇ ಬರಬಾರದು, ಒಂದು ವೇಳೆ ಬಂದರೂ ಶಿವಪುತ್ರನಿಂದ ಮಾತ್ರ' ಎಂಬ ವರವನ್ನು ಬ್ರಹ್ಮದೇವನಿಂದ ಪಡೆದ ನಂತರ ತಾರಕಾಸುರನು ಆರ್ಭಟಿಸಲು ಪ್ರಾರಂಭಿಸಿದ. ಇಂದ್ರ ಪದವಿಗೆ ಹಾಗೂ ದೇವಲೋಕಕ್ಕೆ ಅಡಿಯಿಟ್ಟು ಎಲ್ಲ ದೇವತೆಗಳನ್ನು ಹಿಂಸಿಸತೊಡಗಿದ. ದೇವೇಂದ್ರನ ಉಪಾಯದಂತೆ ಕಾಮದೇವನು ಶಿವನಲ್ಲಿ ಪ್ರವೇಶಿಸಿದಾಗ ಶಿವನು ಕೋಪಗೊಂಡು ತನ್ನ ತ್ರಿನೇತ್ರವನ್ನು ತೆರೆದಾಗ ಆರು ಯೋಗಾಗ್ನಿಯ ದೈವಿಕ ಕಿಡಿಗಳು ಪ್ರಕಾಶಮಾನವಾಗಿ ಸಿಡಿದು ಗಂಗಾನದಿಯಲ್ಲಿ ಬೆರೆತು ಆರು ಶಿಶುಗಳು ಜನನವಾದವು.

ಅವುಗಳ ಪಾಲನೆಯನ್ನು ಆರು ಕೃತ್ತಿಕೆಯರು ಮಾಡಿದರು. ಶಿವನ ತೇಜಸ್ಸಿನಿಂದ ಜನನವಾದ ಆರು ಶಿಶುಗಳ ದೇಹವನ್ನು ಒಂದು ಮಾಡಿ ತನ್ನ ಶಕ್ತಿ ತುಂಬಿದ್ದರಿಂದ ಜಗನ್ಮಾತೆಯನ್ನು ಸ್ಕಂದಮಾತೆಯೆಂದು ಕರೆಯಲಾಯಿತು. ತಾರಕಾಸುರನನ್ನು ವಧೆ ಮಾಡಲು ಶಿವನು ತನ್ನ ಆಯುಧಗಳನ್ನೂ, ದುರ್ಗೆಯು ತನ್ನ ಶಕ್ತಿಯನ್ನೂ ತುಂಬಿದರು. ಸ್ಕಂದನು ತಾರಕಾಸುರನನ್ನು ವಧೆ ಮಾಡಿ ದೇವಸೇನಾಧಿಪತಿಯಾದನು. ಹೀಗೆ ಸ್ಕಂದಮಾತೆಯು ಮೂರು ಲೋಕಗಳನ್ನು ಸಂರಕ್ಷಿಸಲು ಕಾರಣೀಭೂತಳಾದಳು. ಆದುದರಿಂದ ಜಗತ್ತಿನಲ್ಲಿ ದೇವಿಯನ್ನು ಸ್ಕಂದಮಾತಾ ಎಂಬ ನಾಮದಿಂದ ಪೂಜಿಸಲಾಗುತ್ತದೆ. ನವರಾತ್ರಿಯ 5ನೇ ದಿನ ಸಿಂಹವಾಹಿನಿಯಾಗಿ ದೇವಿ ತನ್ನ ಪುತ್ರನನ್ನು ತನ್ನೊಡನೆ ಕುಳ್ಳಿರಿಸಿ ವಾತ್ಸಲ್ಯಮಯಿ ಸ್ಕಂದಮಾತಾ ಎಂದೇ ಪ್ರಸಿದ್ಧಳಾಗಿದ್ದಾಳೆ.

ಸ್ಕಂದಮಾತಾ ಬುಧಸ್ಯ ಅಧಿದೇವತಾ & ಬುಧದೋಷ ಶಾಂತಿಗೆ ಸ್ಕಂದಮಾತಾ ಪೂಜೆ ಮಾಡಬೇಕು. ಮಾತೃವಾತ್ಸಲ್ಯಕ್ಕಾಗಿ, ಪ್ರೀತಿಗಾಗಿ, ಬುದ್ಧಿ, ವಿದ್ಯೆ, ಮಾತು, ವ್ಯಾಪಾರ, ಲೆಕ್ಕ ಬರವಣಿಗೆ, ವಕೀಲರು, ಶಿಕ್ಷಕರು, ನರಮಂಡಲದ ಬೆಳವಣಿಗೆ, ಚರ್ಮದ ಸಮಸ್ಯೆ ಇರುವವರು ಸ್ಕಂದಮಾತೆಯನ್ನು ಪೂಜಿಸಿದರೆ ಶುಭ ಫಲ ಪಡೆಯುವರು. ಮಕ್ಕಳಿಗೆ ಮಾತು ಬೇಗ ಬರುತ್ತದೆ. ಮಕ್ಕಳ ಅನಾರೋಗ್ಯ ನಾಶ, ಬಾಲಗ್ರಹ ದೋಷ ನಾಶಿನಿ. ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ವಿಶುದ್ಧ ಚಕ್ರ, ಗಂಟಲಿನ ಚಕ್ರ, ಸ್ಕಂದಮಾತಾ ವಿಶುದ್ಧದ ಅಧಿದೇವತೆ, ಈ ದಿನ ಮಕ್ಕಳನ್ನು ಕೂರಿಸಿಕೊಂಡು ಪೂಜೆ ಮಾಡಿದರೆ ಮಗುವಿನ ಬುದ್ಧಿ, ಆರೋಗ್ಯ ಆಯುಷ್ಯ ವೃದ್ಧಿಯಾಗುತ್ತದೆ. ಸ್ಕಂದಮಾತಾ ಬಾಲ ರಕ್ಷಾ ಕಾರಿಣಿ.

ಅದೃಷ್ಟ ಬಣ್ಣ: ನೀಲಿ ಹೂ: ಕಣಗಿಲೆ ದಾನ: ತೊಗರಿ ಸಂಗೀತ: ಬಿಲಹರಿ ರಾಗ

ಮಂತ್ರ: ಓಂ ಹ್ರೀಂ ಸ್ಕಂದಮಾತಾಯೈ ನಮಃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net