ನಿಷ್ಕಪಟತೆ ದೊಡ್ಡ ಸದ್ಗುಣ

Sincerity is a great virtue
Sincerity is a great virtue
Published on

ಸತ್ಸಂಗದ ನಂತರ ಇತರ ಕೈದಿಗಳೊಂದಿಗೆ ತಮ್ಮ ಕಚೇರಿಗೆ ಹಿಂತಿರುಗುತ್ತಿದ್ದಾಗ, ಸ್ವಾಮೀಜಿ ಹೀಗೆ ಹೇಳಿದರು: ಟೀಕೆಗಳಿಗೆ ಹೆದರದೆ, ಸಾರ್ವಜನಿಕವಾಗಿ ತನ್ನ ದೋಷವನ್ನು ಒಪ್ಪಿಕೊಳ್ಳಲು ನಾಚಿಕೆಪಡದೆ, ಆ ಭಕ್ತನು ತನ್ನ ಹಿಂದಿನ ಜೀವನವನ್ನು ಧೈರ್ಯದಿಂದ ಹೇಳಿದನು. ಈ ನಿಷ್ಕಪಟತೆ ಒಂದು ದೊಡ್ಡ ಸದ್ಗುಣ. ಸಾಧಕನು ದೇವರಿಗೆ ಹೆಚ್ಚು ಹತ್ತಿರವಾಗಲು ಇದು ಅಗತ್ಯವಾಗಿರುತ್ತದೆ. ಪ್ರತಿಯೊಬ್ಬರೂ ಈ ದೈವಿಕ ಸದ್ಗುಣವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಮ್ಮ ತಪ್ಪುಗಳು, ನ್ಯೂನತೆಗಳು ಮತ್ತು ದೋಷಗಳನ್ನು ಒಪ್ಪಿಕೊಳ್ಳಲು ಸಾಕಷ್ಟು ಧೈರ್ಯ ಬೇಕಾಗುತ್ತದೆ.

1925 ರಲ್ಲಿ ತಮ್ಮ ಬಂಗಾಳ ಪ್ರವಾಸದ ಸಮಯದಲ್ಲಿ, ಗಾಂಧೀ ಆಕಸ್ಮಿಕವಾಗಿ ನವಾಬ್​ಗಂಜ್​ಗೆ ಭೇಟಿ ನೀಡಿದರು. ಹರಿಪಾದ್​ಬಾಬು ಅವರ ರಾಷ್ಟ್ರೀಯ ಶಾಲೆಯ ಮಕ್ಕಳು ಅವರ ಭೇಟಿ ಮಾಡಲು ಒಟ್ಟುಗೂಡಿದ್ದರು. ಆ ಮಕ್ಕಳಲ್ಲಿ ಗಾಂಧಿ ಕೇಳಿದರು: ನಿಮ್ಮಲ್ಲಿ ಎಷ್ಟು ಮಂದಿ ಯಾವಾಗಲೂ ಸತ್ಯವನ್ನು ಮಾತನಾಡುತ್ತೀರಿ ಮತ್ತು ಎಂದಿಗೂ ಸುಳ್ಳು ಹೇಳುವುದಿಲ್ಲ?

ಕೆಲವು ಹುಡುಗರು ತಮ್ಮ ಕೈಗಳನ್ನು ಎತ್ತಿದರು. ಆಗ ‘ಈಗ ಹೇಳಿ, ನಿಮ್ಮಲ್ಲಿ ಎಷ್ಟು ಮಂದಿ ಸಾಂರ್ದಭಿಕವಾಗಿ ಸುಳ್ಳು ಹೇಳುತ್ತೀರಿ?’ ಎಂದು ಕೇಳಿದರು. ಇಬ್ಬರು ಹುಡುಗರು ತಕ್ಷಣ ತಮ್ಮ ಕೈಗಳನ್ನು ಎತ್ತಿದರು, ನಂತರ ಮೂವರು, ನಂತರ ನಾಲ್ವರು, ಮತ್ತು ಅಂತಿಮವಾಗಿ, ಬಹುತೇಕ ಎಲ್ಲರೂ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net