ವಾಸ್ತುಶಾಸ್ತ್ರದ ನೆಲೆಯಲ್ಲಿ ನೇರಳೆ ಇಂಡಿಗೋ ಬಣ್ಣದ ಮಹತ್ವ

ವಾಸ್ತುಶಾಸ್ತ್ರ
ವಾಸ್ತುಶಾಸ್ತ್ರ
Published on
ವಾಸ್ತು ಎಂಬುದು ನಾವು ವಾಸಿಸುವ ಕಟ್ಟಡಕ್ಕೆ ಪ್ರಮುಖವಾಗಿ ಸಂಬಂಧಿಸಿರುವುದರಿಂದ ಆ ಕಟ್ಟಡಕ್ಕೆ ಬಳಸುವ ಬಣ್ಣಗಳು ಕೂಡ ಅಷ್ಟೇ ಸಂಬಂಧ ಹೊಂದಿವೆ. ಸೂರ್ಯನಿಂದ ಸೃಷ್ಟಿಯಾಗಿರುವ 7 ಬಣ್ಣಗಳಲ್ಲಿ 6 ಮತ್ತು 7ನೇ ಬಣ್ಣಗಳಾದ ಊದನೀಲಿ ಅಥವಾ ಬೂದನೀಲ (ಇಂಡಿಗೋ) ಮತ್ತು ನೇರಳೆ ಬಣ್ಣಗಳ ಗುಣಧರ್ಮಗಳು ಬಹುತೇಕ ಒಂದೇ ರೀತಿ ಆಗಿವೆ. 
ವಸ್ತುತಃ ಈ ಎರಡೂ ಬಣ್ಣಗಳು ಸಾತ್ವಿಕ ಗುಣವನ್ನು ಪ್ರೇರೇಪಿಸುವ ಬಣ್ಣಗಳಾಗಿವೆ. ಈ ಬಣ್ಣಗಳು ಕೆಂಪು, ನೀಲಿ ಮತ್ತು ಹಳದಿ ಬಣ್ಣದ ನಿಗದಿ ತ ಮಿಶ್ರಣದಿಂದ ಉತ್ಪತ್ತಿಯಾದ ಬಣ್ಣಗಳು. ಈ ಎರಡೂ ಬಣ್ಣಗಳ ತರಂಗಾಂತರವು ಅತಿ ಹೆಚ್ಚು ಇರುವುದರಿಂದ ಮನುಷ್ಯನ ದೇಹದೊಳಗಿನ ಚಲನೆಯ ತೀವ್ರತೆ ಹೆಚ್ಚಾಗಿದೆ. ಮಾತ್ರವಲ್ಲದೆ, ಅತಿವೇಗ ಮತ್ತು ಆಳದವರೆಗೆ ಚಲಿಸುವ ಸಾಮರ್ಥ್ಯವನ್ನು ಈ ಎರಡೂ ಬಣ್ಣಗಳು ಹೊಂದಿವೆ. ಈ ಎರಡೂ ಬಣ್ಣಗಳ ಚಲನೆಯ ತೀಕ್ಷ್ಣತೆ ಎಷ್ಟಿರುತ್ತದೆ ಎಂದರೆ ಈ ಬಣ್ಣದ ಲೇಸರ್ ಮೂಲಕ ಕಠಿಣವಾದ ಕಲ್ಲುಗಳನ್ನು ಕೂಡ ಕತ್ತರಿಸಲಾಗುತ್ತದೆ. 
ಆದ್ದರಿಂದ ವೈದ್ಯಕೀಯ ಚಿಕಿತ್ಸೆಯಲ್ಲಿ ನೀಲಿ ಮತ್ತು ಇಂಡಿಗೋ ಬಣ್ಣದ ಲೇಸರ್ ಬಳಕೆ ಹೆಚ್ಚಾಗಿದೆ. ಮೂಳೆಯ ಒಳಗಿನ ನಿಗದಿತ ಸ್ಥಳವನ್ನು ತಲುಪಿ ಅಲ್ಲಿರುವ ಸಮಸ್ಯೆಗೆ ಚಿಕಿತ್ಸೆ ನೀಡಲು ನೇರಳೆ ಮತ್ತು ಇಂಡಿಗೋ ಬಣ್ಣದ ಲೇಸರ್​ಗಳನ್ನು ಬಳಸಲಾಗುತ್ತದೆ.

ನೇರಳೆ ಮತ್ತು ಇಂಡಿಗೋ ಬಣ್ಣದ ಬಳಕೆಯಿಂದ ಮನುಷ್ಯನ ನೆನಪಿನಶಕ್ತಿ ವೃದ್ಧಿಸುತ್ತದೆ. ಹಿಂದೆ, ಮುಂದಿನ ಆಗುಹೋಗುಗಳ ಬಗ್ಗೆ ಅರಿವು ಇರುವ ವ್ಯಕ್ತಿಗಳು ಈ ಬಣ್ಣಗಳನ್ನು ಬಳಸುವುದರಿಂದ ಅವರ ಜಾಣ್ಮೆ ವೃದ್ಧಿಸುತ್ತದೆ. ಅವರು ಮಾಡುವ ವಿಶ್ಲೇಷಣೆ ನಿಖರವಾಗಿರುತ್ತದೆ. 

ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳು ನೇರಳೆ ಬಣ್ಣವನ್ನು ನಿಗದಿತವಾಗಿ ನೋಡುವುದರಿಂದ ಅವರಲ್ಲಿ ತಾವು ಓದುವ ವಿಷಯ ನೆನಪಿನಲ್ಲಿ ಉಳಿಯುವುದಲ್ಲದೆ, ಭವಿಷ್ಯದ ಬಗ್ಗೆ ಗಂಭೀರ ಚಿಂತನೆಗಳು ಬಂದು, ಜವಾಬ್ದಾರಿಯಿಂದ ನಡೆದುಕೊಳ್ಳಲು ಆರಂಭಿಸುತ್ತಾರೆ. ಮಕ್ಕಳಲ್ಲಿರುವ ಚಂಚಲತೆಯನ್ನು ನಿವಾರಿಸಿ ಮನಸ್ಸನ್ನು ಸಮತೋಲನಗೊಳಿಸಲು ಈ ಬಣ್ಣಗಳು ಪೂರಕವಾಗಿವೆ.

ದೈಹಿಕ ಆರೋಗ್ಯಕ್ಕೆ ಅನುಕೂಲಕರವಾಗಿರುವ ಧ್ಯಾನ, ಯೋಗ, ವ್ಯಾಯಾಮ ಮತ್ತಿತರ ಚಟುವಟಿಕೆಗಳನ್ನು ಮಾಡಲು ಈ ಬಣ್ಣಗಳು ಪ್ರೇರಣೆ ನೀಡುತ್ತವೆ. ಹಾಗೂ ಅಕೌಂಟಿಂಗ್ ವೃತ್ತಿಯಲ್ಲಿ ನಿಖರತೆಯನ್ನು ಸಾಧಿಸಲು ಈ ಬಣ್ಣ ಹೆಚ್ಚು ಸಹಕಾರಿಯಾಗಿದೆ. ಅಗತ್ಯಕ್ಕಿಂತ ಹೆಚ್ಚಿಗೆ ಈ ಬಣ್ಣವನ್ನು ಬಳಸುವುದರಿಂದ ಬಹುಬೇಗ ವೈರಾಗ್ಯದ ಭಾವ ಮೂಡಿಸುತ್ತದೆ. ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಮೇಲಿಂದ ಮೇಲೆ ಹುಟ್ಟುಹಾಕುತ್ತದೆ.

ಕ್ರಿಯಾಶೀಲತೆಗೆ ಪ್ರೇರಣೆ ನೀಡುವ ಬಣ್ಣಗಳು: ನೇರಳೆ ಮತ್ತು ಇಂಡಿಗೋ ಬಣ್ಣಗಳು ಮನಸ್ಸಿನ ಜಡತ್ವವನ್ನು ಕಡಿಮೆ ಮಾಡಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ. ನೇರಳೆ ಮತ್ತು ಹಳದಿ ಬಣ್ಣವನ್ನು ಬಳಿದಿರುವ ಗೋಡೆಗಳಿದ್ದ ಕೋಣೆಯಲ್ಲಿ ವಿದ್ಯಾರ್ಥಿಗಳಿದ್ದರೆ ಅವರ ಮನಸ್ಸು ಶೈಕ್ಷಣಿಕ ಅಭ್ಯಾಸಕ್ಕೆ ಪ್ರೇರೇಪಿತವಾಗುತ್ತದೆ. ಈ ಬಣ್ಣಗಳ ವಸ್ತುಗಳನ್ನು ಶಿಕ್ಷಕರಿಗೆ ನೀಡಿದರೆ ಅವರಿಂದ ಹೆಚ್ಚಿನ ಮಾರ್ಗದರ್ಶನ ಸಿಕ್ಕುತ್ತದೆ. ಆದರೆ ಈ ಬಣ್ಣವನ್ನು ಅತಿಯಾಗಿ ಬಳಸುವುದರಿಂದ ಕ್ರೀಡಾಸಕ್ತಿ ಕಡಿಮೆ ಆಗುತ್ತದೆ. ಅತಿಯಾದ ನೇರಳೆ ಮತ್ತು ಊದನೀಲಿ ಬಣ್ಣದ ಬಳಕೆ ಮನುಷ್ಯನನ್ನು ದೈಹಿಕ ಚಟುವಟಿಕೆಗಳಿಂದ ದೂರ ಮಾಡಿ ಆಧ್ಯಾತ್ಮಿಕ ಚಟುವಟಿಕೆಯೆಡೆಗೆ ಕೊಂಡೊಯ್ಯುತ್ತದೆ. 

ಮನುಷ್ಯನ ಮಿದುಳಿನ ಕ್ರಿಯಾಶೀಲತೆಗೆ ಈ ಬಣ್ಣಗಳು ಪ್ರಚೋದನಕಾರಿಯಾಗಿವೆ. ಮಾನಸಿಕವಾಗಿ ಜರ್ಜರಿತಗೊಳ್ಳುವುದು, ಕೀಳರಿಮೆ, ಆಲಸ್ಯ, ಸೋಮಾರಿತನದಂತಹ ಮನಸ್ಥಿತಿಯನ್ನು ನಿವಾರಿಸಿ ವ್ಯಕ್ತಿಯಲ್ಲಿ ಚೈತನ್ಯವನ್ನು ವೃದ್ಧಿಸಲು ನೇರಳೆ ಮತ್ತು ಇಂಡಿಗೋ ಬಣ್ಣಗಳು ಸಹಕಾರಿಯಾಗಿ ಕೆಲಸ ಮಾಡುತ್ತವೆ. ಜೀವಿಗಳಲ್ಲಿ ಸಂತಾನೋತ್ಪತ್ತಿಗೆ ಬೇಕಾದ ಆಸಕ್ತಿ ಮೂಡಿಸಲು ಈ ಬಣ್ಣಗಳು ಪರಿಣಾಮಕಾರಿಯಾಗಿವೆ.

ಮನುಷ್ಯನ 7 ಚಕ್ರಗಳಿಗೆ 7 ಬಣ್ಣದ ಸಂಬಂಧ: ಮನುಷ್ಯನಲ್ಲಿರುವ ಮೂಲಾಧಾರ, ಸ್ವಾಧಿ ಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ ಹೀಗೆ ಏಳು ಚಕ್ರಗಳಿಗೆ ಕ್ರಮವಾಗಿ ಏಳು ಬಣ್ಣಗಳು ನೇರವಾಗಿ ಸಂಬಂಧ ಹೊಂದಿವೆ. ಆಯಾ ಬಣ್ಣಗಳು ಆಯಾ ಚಕ್ರ ಇರುವ ಭಾಗದ ಅಂಗಾಂಗಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತವೆ. ಅಂತೆಯೇ ನೇರಳೆ ಬಣ್ಣವು ಕುತ್ತಿಗೆ ಮೇಲಿನ ಭಾಗವಾದ ತಲೆ, ಕಣ್ಣು, ಮೂಗು, ಕಿವಿ, ಹಲ್ಲು ಮತ್ತಿತರ ಅಂಗಾಂಗಗಳ ಸಮಸ್ಯೆಗೆ ಪರಿಹಾರವನ್ನು ನೀಡಿದರೆ, ಇಂಡಿಗೋ ಬಣ್ಣವು ಮಿದುಳು ಸಂಬಂಧಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮುಖ್ಯವಾಗಿ ಮೂರ್ಚೆರೋಗದಿಂದ ಬಳಲುವವರು ನೇರಳೆ ಮತ್ತು ಇಂಡಿಗೋ ಬಣ್ಣದ ಆಹಾರ ಪದಾರ್ಥವನ್ನು ಬೆರೆಸಿದ ನೀರನ್ನು ಸೂರ್ಯನ ಬೆಳಕಿನಲ್ಲಿ ಕೆಲಕಾಲ ಇಟ್ಟು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net