ಸತ್ತವರು ಕನಸಿನಲ್ಲಿ ಕಾಣಿಸಿಕೊಂಡರೆ ಆತಂಕ ಪಡಬೇಕಾಗಿಲ್ಲ ಯಾಕೆ? ಇಲ್ಲಿದೆ ನೋಡಿ ವಿಜ್ಞಾನದ ಉತ್ತರ! Science Of Dreams

 Science Of Dreams  ಸಾಂದರ್ಭಿಕ ಚಿತ್ರ
Science Of Dreams ಸಾಂದರ್ಭಿಕ ಚಿತ್ರ
Published on
Science Of Dreams: ನಾವು ಪ್ರೀತಿಪಾತ್ರರನ್ನು, ಆಪ್ತ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಸಾವಿನಿಂದ ಕಳೆದುಕೊಂಡಿದ್ದರೆ, ಅವರು ಬಹುಶಃ ಎಂದಾದರೂ ಒಮ್ಮೆಯಾದರೂ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡಿರಬಹುದು. ಇಂತಹ ಕನಸುಗಳು ಬಿದ್ದಾಗ ಒಂದು ಕಡೆ ಕಳೆದುಕೊಂಡ ವ್ಯಕ್ತಿಯ ನೆನಪಾಗಿ ಮನಸ್ಸು ಭಾವುಕವಾದರೆ, ಮತ್ತೊಂದು ಕಡೆ ಅಂತಹ ಕನಸುಗಳು ಏಕೆ ಬರುತ್ತವೆ ಮತ್ತು ಅದರ ಹಿಂದಿರುವ ಅರ್ಥವೇನು ಎಂದು ಅನೇಕ ಜನರು ಯೋಚಿಸಿರಲಿಕ್ಕಿಲ್ಲ.
ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಕನಸುಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಹಿಂದೂ ವೇದಗಳು ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಅರ್ಥವನ್ನು ನೀಡುತ್ತವೆ. ನಮ್ಮ ಋಷಿಮುನಿಗಳು ಕನಸುಗಳಿಗೆಂದೇ ಮೀಸಲಾಗಿರುವ ಸಂಪೂರ್ಣ ವಿಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು 'ಸ್ವಪ್ನ ಶಾಸ್ತ್ರ' ಎಂದು ಕರೆಯಲಾಗುತ್ತದೆ. ಇದು ಅಂತಹ ವಿಶಿಷ್ಟ ಕನಸುಗಳ ಅರ್ಥ ಮತ್ತು ಅವು ನಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ವಿವರವಾಗಿ ವಿವರಿಸುತ್ತದೆ.

ಮೃತರು ಆರೋಗ್ಯವಾಗಿದ್ದರೆ

ಅನಾರೋಗ್ಯದಿಂದ ಮರಣ ಹೊಂದಿದ ವ್ಯಕ್ತಿಯು ಕನಸಿನಲ್ಲಿ ಆರೋಗ್ಯವಂತನಾಗಿ ಕಾಣಿಸಿಕೊಂಡರೆ, ಅವರು ಒಳ್ಳೆಯ ಸ್ಥಳದಲ್ಲಿ ಪುನರ್ಜನ್ಮ ಪಡೆದಿದ್ದಾರೆ ಎಂದರ್ಥ. ಇದನ್ನು ಸಮಾಧಾನಕರ ಕನಸು ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಚಿಂತೆಗಳನ್ನು ಬಿಟ್ಟು ಮುಂದುವರಿಯಬೇಕು.

ಮರಣ ಹೊಂದಿದ ವ್ಯಕ್ತಿಯ ಅನಾರೋಗ್ಯಕರ ನೋಟ

ಆರೋಗ್ಯವಂತ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಸಾವನ್ನಪ್ಪಿ ಕನಸಿನಲ್ಲಿ ಅಸ್ವಸ್ಥರಾಗಿ ಕಾಣಿಸಿಕೊಂಡರೆ, ಅವರ ಯಾವುದೋ ಒಂದು ಆಸೆ ಈಡೇರಲಿಲ್ಲ ಎಂದು ಸೂಚಿಸುತ್ತದೆ. ಆ ಆಸೆಯ ಬಗ್ಗೆ ನಿಮಗೆ ಯಾವುದೇ ಕಲ್ಪನೆ ಇದ್ದರೆ ಅದನ್ನು ಪೂರೈಸಲು ಪ್ರಯತ್ನಿಸಿ. ಹಾಗೇ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಶಾಂತಿ, ನೆಮ್ಮದಿ ಹೆಚ್ಚಾಗುತ್ತದೆ.

ಜೀವಂತ ವ್ಯಕ್ತಿ ಯಾರಾದರೂ ಸತ್ತಿರುವುದನ್ನು ನೋಡಿದರೆ

ನಿಮ್ಮ ಕನಸಿನಲ್ಲಿ ಜೀವಂತ ವ್ಯಕ್ತಿಯೊಬ್ಬರು ಸತ್ತಿರುವಂತೆ ನಿಮಗೇನಾದರೂ ಕನಸು ಬಿದ್ದರೆ ಹೆದರುವ ಅಗತ್ಯವಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ ಆ ವ್ಯಕ್ತಿಗೆ ಜೀವಿತಾವಧಿ ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ಸತ್ತವರು ಕಂಡರೂ ಮಾತನಾಡಲ್ಲ ಏಕೆ?

ಸ್ವಪ್ನ ಶಾಸ್ತ್ರದ ಪ್ರಕಾರ, ಮೃತಪಟ್ಟ ಸಂಬಂಧಿಕರು ಅಥವಾ ಪ್ರೀತಿಪಾತ್ರರು ಕನಸಿನಲ್ಲಿ ಕಾಣಿಸಿಕೊಂಡು ಏನನ್ನೂ ಮಾತನಾಡದೇ ಮೌನವಾಗಿದ್ದರೆ, ಅದನ್ನು ಕೇವಲ ಸಾಮಾನ್ಯ ಕನಸು ಎಂದು ನಿರ್ಲಕ್ಷಿಸಬಾರದು. ಇದು ಅವರು ನಿಮಗೆ ಮುಂಬರುವ ದಿನಗಳ ಬಗ್ಗೆ ಯಾವುದೋ ಗಂಭೀರ ಎಚ್ಚರಿಕೆಯನ್ನು ನೀಡಲು ಬಯಸುತ್ತಿದ್ದಾರೆ ಎಂಬುದರ ಸಂಕೇತವಾಗಿದೆ. ಇದು ನೀವು ಜೀವನದಲ್ಲಿ ಅಥವಾ ವೃತ್ತಿಬದುಕಿನಲ್ಲಿ ಯಾವುದೋ ಒಂದು ತಪ್ಪು ಹೆಜ್ಜೆ ಇಡುತ್ತಿರಬಹುದು ಅಥವಾ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಬಹುದು ಎಂಬುದನ್ನು ಇದು ಸೂಚಿಸುತ್ತದೆ.

ಆಶೀರ್ವದಿಸಿ/ದುಃಖಿತನಾಗಿ ಕಂಡರೆ

ನಿಮ್ಮ ಮೃತ ಸಂಬಂಧಿಕರು ಕನಸಿನಲ್ಲಿ ಬಂದು ನಿಮ್ಮನ್ನು ಆಶೀರ್ವದಿಸಿದರೆ ಅದನ್ನು ಯಶಸ್ಸಿನ ಸಂಕೇತ ಎಂದು ಹೇಳಲಾಗುತ್ತದೆ. ಆದರೆ, ಅವರು ದುಃಖಿತರಾಗಿ ಅಥವಾ ಕೋಪಗೊಂಡಂತೆ ಕಂಡುಬಂದರೆ, ನೀವು ತಪ್ಪು ನಿರ್ಧಾರ ತೆಗೆದುಕೊಂಡಿರಬಹುದು ಅಥವಾ ಅವರಿಗೆ ಬೇಸರ ಮಾಡಿದ್ದೀರಿ ಎಂಬಂತೆ ಕಾಣಿಸುತ್ತದೆ.

ಕನಸಿನಲ್ಲಿ ವಿಷಯಗಳನ್ನು ಕೇಳುವುದು

ಮೃತ ಸಂಬಂಧಿಯೊಬ್ಬರು ಹಸಿವಿನಿಂದ ಬಳಲುತ್ತಿದ್ದರೆ ಅಥವಾ ಯಾವುದಾದರೂ ಕೊರತೆಯನ್ನು ಹೊಂದಿದ್ದರೆ, ಅವರು ನಿಮ್ಮಿಂದ ಏನನ್ನಾದರೂ ಕೇಳುತ್ತಿದ್ದಾರೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ, ಅವರ ಇಚ್ಛೆಯಂತೆ ದಾನ ಮಾಡುವ ಮೂಲಕ ಮಾನಸಿಕವಾಗಿ ಅವರಿಗೆ ಆ ವಸ್ತುವನ್ನು ಅರ್ಪಿಸಿ.

ಅಂತ್ಯಕ್ರಿಯೆಯ ಮೆರವಣಿಗೆ

ಕನಸಿನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದು ಕೆಟ್ಟ ಶಕುನವಲ್ಲ. ನಿಮ್ಮ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ ಎಂದು ಅದು ಸೂಚಿಸುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net