ಸಮಾಜದಲ್ಲಿ ಗೌರವ ಗಳಿಸಲು ಈ 5 ವಿಷಯಗಳನ್ನು ನೆನಪಿಡಿ! respect

respect
respect
Published on
ಬೆಂಗಳೂರು: ( respect) ಸಮಾಜದಲ್ಲಿ ಗೌರವವನ್ನು ಬೇಡಿ ಪಡೆಯಲು ಸಾಧ್ಯವಿಲ್ಲ. ಅದನ್ನು ನಮ್ಮ ಗುಣಗಳ ಮೂಲಕವೇ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವನ ಅಭ್ಯಾಸಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಕೆಳಗಿನ 5 ಗುಣಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ.

ನಿಮ್ಮನ್ನು ನೀವು ಗೌರವಿಸಬೇಕು:

ತನ್ನನ್ನು ತಾನು ಗೌರವಿಸಿಕೊಳ್ಳದ ವ್ಯಕ್ತಿಯನ್ನು ಜಗತ್ತು ಎಂದಿಗೂ ಗೌರವಿಸುವುದಿಲ್ಲ. ಮೊದಲು ನೀವು ನಿಮ್ಮನ್ನು ಗೌರವಿಸದಿದ್ದರೆ, ಇತರರು ನಿಮ್ಮನ್ನು ಕೀಳಾಗಿ ಕಾಣುತ್ತಾರೆ. ನೀವು ನಿಮ್ಮ ಆಲೋಚನೆಗಳು, ಸಮಯ ಮತ್ತು ಶ್ರಮವನ್ನು ಗೌರವಿಸಲು ಪ್ರಾರಂಭಿಸಿದಾಗ ಮಾತ್ರ ಸಮಾಜವು ನಿಮ್ಮನ್ನು ಗೌರವಿಸಲು ಪ್ರಾರಂಭಿಸುತ್ತದೆ ಎನ್ನುವುದನ್ನು ಚಾಣುಕ್ಯರು ಹೇಳಿದ್ದಾರೆ.

ನುಡಿದಂತೆ ನಡೆಯಿರಿ:

ಮನುಷ್ಯನ ವ್ಯಕ್ತಿತ್ವ ಅಡಗಿರುವುದು ಅವನ ಮಾತಿನಲ್ಲಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿರುತ್ತದೆ. ಸುಳ್ಳು ಭರವಸೆ ನೀಡುವುದಕ್ಕಿಂತ, ಮೌನವಾಗಿರುವುದು ಅಥವಾ ನೇರವಾಗಿ ನಿರಾಕರಿಸುವುದು ಉತ್ತಮ.

ಇತರರನ್ನು ಮೆಚ್ಚಿಸಲು ಹೋಗಬೇಡಿ:

ಇತರರನ್ನು ಮೆಚ್ಚಿಸುವ ಗುರಿಯನ್ನು ಹೊಂದುವುದರಿಂದ ಸಮಾಜದಲ್ಲಿ ನಿಮ್ಮ ಮೌಲ್ಯ ಕಡಿಮೆಯಾಗುತ್ತದೆ. ಚಾಣಕ್ಯನು ವಿನಮ್ರತೆ ಅಗತ್ಯ ಆದರೆ ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ಸ್ಪಷ್ಟವಾಗಿ, ಸಮತೋಲನದಿಂದ ಮಾತನಾಡುವ ವ್ಯಕ್ತಿಗೆ ಮಾತ್ರ ಗೌರವ ಸಿಗುತ್ತದೆ.

ಪ್ರಾಮಾಣಿಕತೆ ನಿಮ್ಮ ದಾರಿಯಾಗಲಿ:

ಮಾಡಿದ ತಪ್ಪನ್ನು ಮುಚ್ಚಿಡಲು ಸುಳ್ಳಿನ ಮೊರೆ ಹೋದರೆ ಗೌರವ ಹಾಳಾಗುತ್ತದೆ. ಪ್ರಾಮಾಣಿಕವಾಗಿ ತಪ್ಪು ಒಪ್ಪಿಕೊಳ್ಳುವವನು ದೊಡ್ಡವನಾಗಿ ಕಾಣುತ್ತಾನೆ. ಅಧರ್ಮದ ಹಾದಿಯಲ್ಲಿ ಗಳಿಸುವ ಲಾಭಕ್ಕಿಂತ, ಸತ್ಯದ ಹಾದಿಯಲ್ಲಿ ಗಳಿಸುವ ಗೌರವ ಶಾಶ್ವತವಾದುದು.

ಭರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ:

ಸಿಟ್ಟಿನ ಭರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಆಡುವ ಮಾತುಗಳು ಜೀವನಪೂರ್ತಿ ಪಶ್ಚಾತ್ತಾಪ ಪಡುವಂತೆ ಮಾಡುತ್ತವೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಬೇಕಾದರೆ ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸುವುದನ್ನು ಕಲಿಯಬೇಕು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net