ಆದ್ದರಿಂದ, ನಿಮಗೇನಾದರೂ ಸಿಗುತ್ತದೆಯೋ ಇಲ್ಲವೊ ಎಂಬುದೆಲ್ಲವೂ ಒಂದು ವಿಚಿತ್ರವಾದ ಕರ್ಮದಿಂದ ಆಗುತ್ತವೆ. ಯಶಸ್ಸು, ಹಣ, ಬಲ, ಸಂಬಂಧಗಳು, ಆರೋಗ್ಯ ಇವೆಲ್ಲವೂ ಸೃಷ್ಟಿಯ ಯಾವುದೋ ಒಂದು ನಿಯಮದ ಆಧಾರದ ಮೇಲೆ ಅವಲಂಬಿಸಿರುತ್ತದೆ. ಒಳ್ಳೆಯ ಸಮಯ ಬಂದಾಗ ನಿಮ್ಮ ಅತೀ ಕೆಟ್ಟ ಶತ್ರುವೂ ನಿಮಗೆ ಸಹಾಯ ಮಾಡುತ್ತಾರೆ. ಕೆಟ್ಟ ಸಮಯ ಬಂದಾಗ ನಿಮ್ಮ ಬಹಳ ಒಳ್ಳೆಯ ಮಿತ್ರರು ಸಹ ಶತ್ರುಗಳಂತೆ ವರ್ತಿಸುತ್ತಾರೆ. ಇದೆಲ್ಲವೂ ಕರ್ಮದಿಂದಾಗಿ.