ಅದೃಷ್ಟ, ಸಂಪತ್ತು ತರುವ ಗೂಬೆ ಉಂಗುರ: ಯಾವ ಬೆರಳಿಗೆ, ಯಾವ ಲೋಹದಲ್ಲಿ ಧರಿಸಿದರೆ ಶುಭ?..Owl Ring Benefits

Owl Ring Benefits Attract Luck, Wisdom And Prosperity
Owl Ring Benefits Attract Luck, Wisdom And Prosperity
Published on

ಪ್ರಮುಖ ಮುಖ್ಯಾಂಶಗಳು

  • ಗೂಬೆ ಲಕ್ಷ್ಮೀ ದೇವಿಯ ವಾಹನ ಎಂದು ಪರಿಗಣಿಸಲಾಗಿದೆ.
  • ಗೂಬೆಯುಳ್ಳ ಉಂಗುರವನ್ನು ಕೈನಲ್ಲಿ ಧರಿಸುವುದರಿಂದ ಸಂಪತ್ತ, ಸಮೃದ್ಧಿ ಹೆಚ್ಚಾಗುವ ನಂಬಿಕೆ.
  • ಮುಂದಾಲೋಚನೆ, ಅದೃಷ್ಟ, ಸಕರಾತ್ಮಕತೆ ತಂದು ಕೊಡುವ ಗೂಬೆ ಉಂಗುರ.
Owl Ring Benefits Attract Luck, Wisdom And Prosperit: ಈ ಹಿಂದೆ ಅಪಶಕುನ ಎಂದು ನಂಬಲಾಗುತ್ತಿದ್ದ ಗೂಬೆಯನ್ನು ಕಾಲಾನಂತರದಲ್ಲಿ ಇದನ್ನು ಲಕ್ಷ್ಮಿಯ ದೇವತೆಯ ವಾಹನ ಅಥವಾ ಆಕೆಯ ಪ್ರಯಾಣ ವಾಹನ ಎಂತಲೂ ಹೇಳಲಾಗುತ್ತದೆ. ಹಲವು ಕಡೆ ದೇವಿಯ ಪಕ್ಕ ಗೂಬೆಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿರುವು ಕಂಡು ಬಂದಿದೆ.
ಹೀಗಾಗಿ ಇಂದಿನ ದಿನಗಳಲ್ಲಿ ಹಲವರು ಗೂಬೆಯಿರುವ ಉಂಗುರವನ್ನು ಧರಿಸುತ್ತಾರೆ. ರತ್ನದ ಕಲ್ಲುಗಳಿಂದ ಮಾಡಿದ ನೀಲಿ ಅರಳನ್ನು ಕೈಗೆ ತೊಟ್ಟುಕೊಳ್ಳುತ್ತಾರೆ. ಕೆಲವರು ಗೂಬೆ ಆಕಾರದ ಈ ಪರಿಕರವನ್ನು ಅದೃಷ್ಟದ ಸಂಕೇತ ಎಂತಲೂ ಹೇಳುತ್ತಾರೆ.

ಸಂಪತ್ತಿನ ಸಂಕೇತ

ಹಿಂದೂ ಸಂಪ್ರದಾಯದಲ್ಲಿ, ಗೂಬೆ ಲಕ್ಷ್ಮಿ ವಾಹನವೆಂದು ಗುರತಿಸಿರುವ ಕಾರಣ ಇದು ಸಂಪತ್ತು, ಸಮೃದ್ಧಿ ಮತ್ತು ಜಾಗರೂಕತೆಯ ಸಂಕೇತ ಎಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ಕುಟುಂಬದಲ್ಲಿ ಕಾಡುವ ಜಗಳ, ದಾರಿದ್ರ್ಯಾ, ಹಣ ಸಮಸ್ಯೆ ಇರೋದಿಲ್ಲ ಎನ್ನುವ ನಂಬಿಕೆ ಇದೆ. ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ, ಗೂಬೆಯನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತ ಎನ್ನಲಾಗುತ್ತದೆ.

ಸಕರಾತ್ಮಕ ಚಿಂತನೆಗೆ ಸಹಕಾರಿ

ಗೂಬೆಯನ್ನು ಬುಧ್ಧಿವಂತಿಕೆಯ ಸಂಕೇತ ಎನ್ನಲಾಗಿದೆ. ಅದರ ತೀಕ್ಷ್ಣ ಕಣ್ಣುಗಳು ಕಷ್ಟದ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತದೆ. ಈ ಉಂಗುರವನ್ನು ಕೈನಲ್ಲಿ ಧರಿಸುವುದರಿಂದ ಸಕರಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಮುಂದಾಲೋಚನೆ ಹಾಗೂ ಸ್ಪಷ್ಟತೆಯ ಪ್ರತೀಕ

ಗೂಬೆ ಕತ್ತಲಲ್ಲಿಯೂ ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡುವ ಕಾರಣ ಇದನ್ನು ದೂರದೃಷ್ಟಿ ಅಥವಾ ಮುಂದಾಲೋಚನೆಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಸರಿಯಾದ ವಿಚಾರವನ್ನು ಕೆಲಸ, ಮದುವೆ ಆಯ್ಕೆ ಹಾಗೂ ಭವಿಷ್ಯದ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳಲು ಇದನ್ನು ಸಕರಾತ್ಮಕ ಶಕ್ತಿಯಾಗಿ ಆಯ್ಕೆಯ ಮಾಡಬಹುದು.

ಅದೃಷ್ಟ ಹೊತ್ತು ತರುವ ಸಂಕೇತ

ಉಂಗುರದಲ್ಲಿ ಕಾಣುವ ಎರಡು ದೊಡ್ಡ ನೀಲಿ ಕಣ್ಣುಗಳು ಅದೃಷ್ಟದ ಸಂಕೇತ ಎನ್ನುತ್ತಾರೆ. ಇದನ್ನು ಕೆಲವರು ಫ್ಯಾಷನ್​ ಜೊತೆಗೆ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಗೊಳ್ಳಲಿ ಎಂದು ಬಳಕೆ ಮಾಡುತ್ತಾರೆ. ಜೊತೆಗೆ ಈ ಉಂಗುರವು ಮಾನಸಿಕ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

ಯಾವ ಬೆರಳಿಗೆ ಉಂಗುರ ಧರಿಸಬೇಕು?

ಗೂಬೆ ಕಣ್ಣುಗಳುಳ್ಳ ಉಂಗುರವನ್ನು ಬಲಗೈನ ಉಂಗುರದ ಬೆರಳಿಗೆ ಅಥವಾ ಮಧ್ಯದ ಬೆರಳಿಗೆ ಗೂಬೆ ಉಂಗುರ ಧರಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಮಧ್ಯದ ಬೆರಳಿಗೆ ಕೆಲವರು ಧರಿಸುತ್ತಾರೆ ಇದು ಸ್ಥಿರತೆ ಮತ್ತು ಏಕಾಗ್ರತೆಯ ಸಂಕೇತವಾಗಿದೆ.

ಗೂಬೆ ಉಂಗುರ ಯಾವ ದಿನ ಧರಿಸಬೇಕು

ಗೂಬೆ ಲಕ್ಷ್ಮಿಗೆ ಸಂಬಂಧಿಸಿದ ವಾಹನವಾಗಿರುವ ಕಾರಣ ಶುಕ್ರವಾರದಂದು ಉಂಗುರ ಧರಿಸೋಸು ಶುಭ ಎಂದು ಪರಿಗಣಿಸಲಾಗುತ್ತದೆ. ಗುರುವಾರವೂ ಶುಭ ಎಂದು ಪರಿಗಣಿಸುವ ಸಂಪ್ರದಾಯವಿದೆ. ಲಕ್ಷ್ಮಿ ದೇವಿಯ ಪೂಜಾ ಸಮಯದಲ್ಲಿ ಮತ್ತು ಯಾವುದಾದರೂ ಪೂಜಾ ಸಂದರ್ಭದಲ್ಲಿ ಉಂಗುರ ಧರಿಸೋದು ಶುಭ ಎನ್ನಲಾಗುತ್ತದೆ.

ಗೂಬೆ ಉಂಗುರಕ್ಕೆ ಯಾವ ಲೋಹ ಬೆಸ್ಟ್

ಗೂಬೆ ಇರುವ ಉಂಗುರವು ಬೆಳ್ಳಿಯ ಲೋಹದಿಂದ ಮಾಡಿರಬೇಕು. ಇದು ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಹೋಲುತ್ತದೆ. ಹಿತ್ತಾಳೆ, ಸ್ಟೇನ್​ಲೇಸ್​​ ಸ್ಟೀಲ್​​​ ಸಹ ಧರಿಸಬಹುದಾಗಿದೆ,( ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net