Zodiac Signs; ಬುಧನ ಸಂಚಾರ ಬದಲಾವಣೆ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Zodiac Signs
Zodiac Signs
Published on
Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಇನ್ನು ಜ್ಯೋತಿಷ್ಯದ ಪ್ರಕಾರ, ಬುಧನನ್ನು ಎಲ್ಲಾ ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಬುಧನು ಪ್ರತಿ 21 ರಿಂದ 30 ದಿನಗಳಿಗೊಮ್ಮೆ ರಾಶಿ ಬದಲಾಣೆ ಮಾಡುತ್ತಾನೆ. ಇದೀಗ ಬುಧನ ಸದ್ಯ ತುಲಾ ರಾಶಿಯಲ್ಲಿದ್ದು ಹಿಮ್ಮುಖದಲ್ಲಿ ಚಲಿಸುತ್ತಿದ್ದಾರೆ. ನ.29 ರಿಂದ ಹಿಮ್ಮುಖದಿಂದ ನೇರಕ್ಕೆ ಪರಿವರ್ತನೆಗೊಳ್ಳುತ್ತಾನೆ. ಈ ಸಮಯದಲ್ಲಿ ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಮಿಥುನ ರಾಶಿ

ಬುಧನ ನೇರ ಚಲನೆಯಿಂದ, ಮಿಥುನ ರಾಶಿಯವರು ತಮ್ಮ ವೃತ್ತಿಜೀವನ ಮತ್ತು ಸಂವಹನದಲ್ಲಿ ಹೊಸ ಶಕ್ತಿಯನ್ನು ಕಂಡುಕೊಳ್ಳುತ್ತಾರೆ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಯಾವುದೇ ಕೆಲಸವು ಈಗ ವೇಗವಾಗಿ ಮುಂದುವರಿಯುತ್ತದೆ. ಹಿರಿಯ ಅಧಿಕಾರಿಗಳಿಂದ ಬೆಂಬಲ ಲಭ್ಯವಿರುತ್ತದೆ.

ಮಕರ ರಾಶಿ

ಹೂಡಿಕೆಗಳು, ಉಳಿತಾಯ ಅಥವಾ ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳು ಅನುಕೂಲಕರವಾಗಿರುತ್ತವೆ. ಯಾವುದೇ ಹಳೆಯ ಸಾಲಗಳು ಅಥವಾ ಬಾಕಿ ಇರುವ ಹಣವನ್ನು ಮರುಪಡೆಯುವ ಸಾಧ್ಯತೆಯಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ, ಇದು ದೊಡ್ಡ ಯೋಜನೆಗಳನ್ನು ಕೈಗೊಳ್ಳಲು ಸಕಾಲ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಅಥವಾ ಹೊಸ ಯೋಜನೆಯನ್ನು ಪ್ರಾರಂಭಿಸಲು ನೀವು ಬಯಸಿದರೆ, ಬುಧನ ನೇರ ಚಲನೆಯ ಪ್ರಭಾವವು ನಿಮ್ಮನ್ನು ಯಶಸ್ಸಿಗೆ ಕೊಂಡೊಯ್ಯುತ್ತದೆ. ಸಂಬಂಧಿಕರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಮದುವೆ ಪ್ರಸ್ತಾಪಗಳು ಬರಬಹುದು(ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net