ಬದುಕು-ಶರೀರದ ಅಸ್ಥಿರತೆ

instability
instability
Published on
ಬದುಕು ಮತ್ತು ಶರೀರದ ಅಸ್ಥಿರತೆ ತಿಳಿದುಕೊಳ್ಳಲು ನಾಲ್ಕು ಸಾಲಿನ ಇದೊಂದು ವಚನ ಸಾಕು. ಒಬ್ಬ ಬೇಡ ಹೊಟ್ಟೆಯ ಉಪಜೀವನಕ್ಕಾಗಿ ಒಂದು ಮೊಲವನ್ನು ಹೊಡೆದು, ಅದನ್ನು ಪೇಟೆಗೆ ತಂದು ಮಾರುತ್ತಾನೆ. ಜನರು ಬೆಲೆ ಕೊಟ್ಟು ಕೊಳ್ಳುತ್ತಾರೆ. ಬೇಡನಿಗೆ ಮೊಲ ಮಾರಿದ ಹಣದಿಂದ ಅನ್ನವೋ ಅಂಬಲಿಯೋ ದೊರೆಯುತ್ತದೆ. ಮೊಲದಂತಹ ಪುಟ್ಟ ಪ್ರಾಣಿಗೆ ಬೆಲೆ ಇದೆ. ಆದರೆ ಈ ನೆಲವನ್ನು ಆಳಿದ ಮಹಾರಾಜ ರತ್ನಖಚಿತ ಸಿಂಹಾಸನ ಮೇಲೆ ಕೂತು ಜೀವನ ಕಳೆದಿದ್ದರೂ ಸತ್ತಿದ್ದಾನೆ. ಇವನನ್ನು ಪುಕ್ಕಟೆ ಕೊಡುತ್ತೇವೆ ಎಂದರೂ ಯಾರೂ ಖರೀದಿಸರು. ಅವರಿವರ ಸುದ್ದಿಬೇಡ.
ನಮ್ಮ ಮನೆಯೊಳಗೆ ಎಷ್ಟೋ ಜನ ತಂದೆ-ತಾಯಿ, ಬಂಧು-ಬಳಗ ಸತ್ತಿದ್ದಾರೆ. ಜೀವಂತ ಇರುವಾಗ ಎಷ್ಟು ಪ್ರೀತಿಯಿಂದ ಇರುತ್ತೇವೆ. ಆದರೆ ಸತ್ತಾಗ ಯಾರ ಜೊತೆಗೆ ಯಾರೂ ಹೋಗುವುದಿಲ್ಲ. ಎಂಥ ಕರಕಷ್ಟ ನರನ ಬಾಳುವೆ. ಒಂದು ದಿನ ಇಟ್ಟು ಮರುದಿನ ಮಣ್ಣು ಮಾಡುವುದೆಂದರೆ ಇನ್ನೊಂದು ಘಳಿಗೆಗೆ ನಾರುತ್ತದೆ. ಅವಾಗ ಆ ಕೀಳು ಪ್ರಾಣಿಗಿಂತ ಮನುಷ್ಯನ ಬಾಳು ಎಷ್ಟು ಕನಿಷ್ಠ ಎನ್ನುವುದು ಇದರಿಂದ ತಿಳಿದು ಬರುತ್ತದೆ.
ಈ ಜೀವನಕ್ಕೆ ಯಾವಾಗ ಬೆಲೆ ಬರುತ್ತದೆ ಎಂದರೆ ‘ಸಲೆನಂಬು ನಮ್ಮ ಕೂಡಲಸಂಗಮ ದೇವನ’. ದೇವರನ್ನ ನಂಬಿ ಭಕ್ತಿ ಮಾಡು. ಧರ್ಮದಿಂದ ನಡೆ. ಜೀವನದಲ್ಲಿ ಆಚಾರ-ವಿಚಾರ ರೂಢಿಸಿಕೊ, ಸ್ನೇಹ ಪ್ರೀತಿ ಬದುಕಿನೊಳಗೆ ತುಂಬಿಕೊ, ದಯಾ ಧರ್ಮ, ದಾಸೋಹ ಅನ್ನುವಂತಹ ತತ್ವದೊಳಗೆ ನಿನ್ನನ್ನು ನೀನು ಅರ್ಪಿಸಿಕೊಂಡರೆ ಈ ಜೀವನಕ್ಕೊಂದು ಕಿಮ್ಮತ್ತು ಬರುತ್ತದೆ. ಬಸವಣ್ಣನವರು ಮೊಲನಿಗಿಂತ ನರನ ಬಾಳುವೆ ಎಷ್ಟು ಕೀಳು ಎಂಬುದನ್ನು ತುಲನೆ ಮಾಡಿ ತೋರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net