ನಿಮ್ಮ ಅಂಗೈನಲ್ಲಿ ಜೀವನ ರೇಖೆ ತುಂಡಾಗಿದ್ಯಾ ನೋಡಿ!; ಹಾಗಾದ್ರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ..Jeevana Rekha

Jeevana Rekha Split
Jeevana Rekha Split
Published on

ಪ್ರಮುಖ ಮುಖ್ಯಾಂಶಗಳು

  • ಅಂಗೈನಲ್ಲಿ ತುಂಡಾದ ಜೀವನ ರೇಖೆ ಹೇಳೋದೇನು ಗೊತ್ತಾ?
  • ಜೀವನ ರೇಖೆ ತುಂಡಾಗಿದ್ದರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆ
  • ಜೀವನ ರೇಖೆ ಸಾವು ಖಚಿತಾನಾ ಹಸ್ತ ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ?

Jeevana Rekha Split: 

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈನಲ್ಲಿ ಕಾಣಿಸುವ ಗೆರೆಗಳು ಒಂದೊಂದು ಗುಟ್ಟನ್ನು ಹೇಳುತ್ತದೆ. ಸಂತಾನ ಭಾಗ್ಯ, ಅನ್ನ ಭಾಗ್ಯ, ಆರ್ಥಿಕ ಸ್ಥಿತಿ ಬಗ್ಗೆ  ಮಾಹಿತಿ ನೀಡುತ್ತದೆ. ಅದರಂತೆ  ನಮ್ಮ ಅಂಗೈನಲ್ಲಿರುವ ಜೀವನ ರೇಖೆಯು ನಮ್ಮ  ಆಯುಷ್ಯದ ಬಗ್ಗೆ, ನಮ್ಮ ನಡವಳಿಕೆ ಹಾಗೂ ಚಿಂತನೆಗಳ ಬಗ್ಗೆ ಮಾಹಿತಿ ನೀಡುತ್ತದೆ.

ಹೀಗಿರಬೇಕು ಜೀವನ ರೇಖೆ

ವ್ಯಕ್ತಿ ಅಂಗೈನಲ್ಲಿರುವ ಜೀವನ ರೇಖೆಯು  ಕಡಿತಗೊಂಡು ಸಣ್ಣದಾಗಿ ಕಾಣಬಾರದು. ಯಾವುದೇ ಅಡೆತಡೆ ಇಲ್ಲದೇ ನೇರ ಇರುವ ರೇಖೆಗಳು ನೀವು ಸುದೀರ್ಘ ಜೀವನವನ್ನು ಬಾಳುತ್ತೀರಿ ಎನ್ನುವದನ್ನು ಉಲ್ಲೇಖಿಸುತ್ತದೆ. ಜೊತೆಗೆ ಆರೋಗ್ಯವಾಗಿರುತ್ತೀರಿ ಎನ್ನುವ ಸೂಚನೆಯನ್ನು ಕೊಡುತ್ತದೆ. 
ಅಂಗೈನಲ್ಲಿ ಜೀವನರೇಖೆ ಗುರು ಪರ್ವತದಿಂದ ಶುಕ್ರದತ್ತ ಚಲಿಸುತ್ತಿದ್ದಂತೆ ಕಂಡು ಬಂದರೆ ಅವರಿಗೆ ಸ್ವಾಭಿಮಾನಿ ಗುಣ ಇದೆ. ಸದ್ಗುಣ ಶೀಲರು ಹಾಗೂ ಸ್ವತಂತ್ರ್ಯವಾಗಿ ಚಿಂತನೆ ಮಾಡುವವರು ಎಂದು ಅರ್ಥ. ಅವರು ಎಂದಿಗೂ ತಮ್ಮ ಕುಟುಂಬಸ್ಥರ ಅಭಿಪ್ರಾಯಕ್ಕೆ ಹೊಂದಿಕೆಯಾಗೋದಿಲ್ಲ. ಅವರ ಅಭಿಪ್ರಾಯ, ಚಿಂತನೆಗಳು ಎಂದಿಗೂ ವಿಭಿನ್ನ ಎನ್ನಲಾಗುತ್ತದೆ. 

ಹೀಗಿದ್ದರೆ ಇಷ್ಟು ಅಪಾಯ ಸಾಧ್ಯತೆ

ಅಕಸ್ಮಾತ್​ ನಿಮ್ಮ ಜೀವನ ರೇಖೆ ಅಂಗೈ ಮಧ್ಯ ಇರುವ ನೇರ ರೇಖೆಯನ್ನು ಅವಲಂಬಿಸಿಕೊಂಡರೆ ನಮಗೆ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ ಎನ್ನಲಾಗುತ್ತದೆ.  ಇಷ್ಟೇ ಅಲ್ಲದೇ ನಿಮ್ಮ ಜೀವನ ರೇಖೆಯು ಅರ್ಧಕ್ಕೆ ಕಟ್​ ಆಗಿದ್ದರೆ..ಅಥವಾ ಕೊನೆಯಲ್ಲಿ ಸೀಳಿದಂತೆ ಕಂಡುಬಂದರೆ ನಿಮ್ಮ ಜೀವನದ ಕೊನೇ ಹಂತದಲ್ಲಿ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಹೇಳಲಾಗಿದೆ. 
ನಿಮ್ಮ ಅಂಗೈನಲ್ಲಿರುವ ರೇಖೆ ವಿಭಜನೆಯಾಗಿರುವಂತೆ ಕಂಡು ಬಂದರೆ ಅದು ನಿಮ್ಮ ಜೀವನದ ಅತಿ ಗಂಭೀರವಾದ ಹಂತ ಎಂದು ಹೇಳಲಾಗುತ್ತದೆ. ನೀವು ಹಲವು ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಹೇಳುತ್ತದೆ. ಅಕಸ್ಮಾತ್ ನಿಮ್ಮ ಅಂಗೈನಲ್ಲಿರುವ ಜೀವನ ರೇಖೆ ಗೋಳಾಕಾರದಲ್ಲಿ ಇದ್ದರೆ,  ಅಂತಹ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ದೀರ್ಘಾಯುಷ್ಯ ಹೋಮದಿರುವವರು ಆಗುತ್ತಾರೆ. ಇಂತವರು ಉನ್ನತ ಗುರಿಯನ್ನು   ಉಳ್ಳವರು..ಆದರೆ ಸಣ್ಣಪುಟ್ಟ ಕೆಲಸ ಮಾಡಲು ಇಚ್ಛಿಸೋದಿಲ್ಲ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net