ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಅದೃಷ್ಟವೋ, ದುರಾದೃಷ್ಟವೋ?; ವಾಸ್ತು ಶಾಸ್ತ್ರ ಹೇಳೋದೇನು..Rose plant vastu

Vastu tips for rose plant
Vastu tips for rose plant
Published on
Vastu tips for rose plant : ಗುಲಾಬಿ ಹೂ ಎಂದರೆ ಪ್ರೇಮಿಗಳಿಗೆ ಮಾತ್ರವಲ್ಲ ಎಲ್ಲರೂ ಇಷ್ಟಪಡುವ ನೆಚ್ಚಿನ ಹೂ. ಇದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಕಾರಿ ವಿಚಾರಗಳಿವೆ. ಉದ್ಯಾನವನ ಅಥವಾ ಮನೆಯ ತಾರಸಿಯಲ್ಲಿ ಈ ಹೂ ಬಿಟ್ಟರೆ ಪ್ರಕಾಶಮಾನವಾಗಿ ಎದ್ದು ಕಾಣುತ್ತದೆ. ಗುಲಾಬಿ ಹೂವಿನ ನೀರು ಚರ್ಮದ ಕಾಂತಿಯನ್ನು ಹೆಚ್ಚಿಸದರೆ, ಅದರ ದಳದಿಂದ ತಯಾರಾಗುವ ಗುಲ್ಕನ್​​​​​​ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ತಯಾರಾಗುವ ಚಹ ಮತ್ತು ಕಷಾಯ ಒತ್ತಡ ಕಡಿಮೆ ಮಾಡುತ್ತದೆ.
ಆದರೆ ವಾಸ್ತು ಪ್ರಕಾರ, ಮನೆಯಲ್ಲಿ ಗುಲಾಬಿ ನೆಡಬಹುದೆ, ನೆಟ್ಟರೆ ಕುಟುಂಬದ ಮೇಲಾಗುವ ನಕರಾತ್ಮಕ ಪರಿಣಾಮವೇನು, ಆರ್ಥಿಕ ಸಂಕಷ್ಟಕ್ಕೇನಾದ್ರು ಸಿಲುಕಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡೋದು ಸಾಮಾನ್ಯ. ವಾಸ್ತು ಶಾಸ್ತ್ರದ ಪ್ರಕಾರ ಗುಲಾಬಿ ಗಿಡಕ್ಕಿರುವ ಮಹತ್ವೇನು ಎನ್ನುವ ಮಾಹಿತಿ ಇಲ್ಲಿದೆ.

ಗುಲಾಬಿ ಗಿಡ ಅಶುಭ ಅಥವಾ ಶುಭ?

ವಾಸ್ತು ಪ್ರಕಾರ, ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದು ಅತ್ಯಂತ ಶುಭ ಸೂಚನೆ ಎನ್ನಲಾಗುತ್ತದೆ. ಇದು ಮನೆಗೆ ಸಂತೋಷ, ನೆಮ್ಮದಿ, ಪ್ರಶಾಂತತೆಯನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲದೇ, ಗುಲಾಬಿ ಗಿಡವು ಪರೋಕ್ಷವಾಗಿ ಪ್ರೀತಿಯ ಸಂಕೇತವಾಗಿರುವ ಕಾರಣ, ಮನೆಯಲ್ಲಿರುವ ಸದಸ್ಯರ ಮಧ್ಯೆ ಸಮೃದ್ಧಿ, ಪ್ರೀತಿ ಆತ್ಮೀಯತೆ, ಅನೋನ್ಯತೆಯನ್ನು ಸಾಮರಸ್ಯವಾಗಿ ಬೆಳೆಯುವಂತೆ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಇದೆ.

ಗುಲಾಬಿ ಗಿಡ ಯಾವ ದಿಕ್ಕಿನಲ್ಲಿ ನೆಟ್ಟರೆ ಬೆಸ್ಟ್?

ಗುಲಾಬಿ ಗಿಡ ಬೆಳೆಯುವ ವಿಚಾರದಲ್ಲಿ ಹೆಚ್ಚು ಗಮನವಹಿಸಬೇಕು. ಏಕೆಂದರೆ, ಬಾಡಿದ ಎಲೆಗಳನ್ನು ಕಾಲಕಾಲಕ್ಕೆ ತೆಗೆದು ಹಾಕುವುದು ಒಳ್ಳೆಯದು. ಬಾಡದ ಹೂ ಇದ್ದರೆ, ನಕರಾತ್ಮ ಶಕ್ತಿ ಹೆಚ್ಚೋದನ್ನು ತಡೆಯುತ್ತದೆ.

ಲಕ್ಷ್ಮಿ ಆಶೀರ್ವಾದವಿರಲಿದೆ

ಮನೆಯ ಆವರಣದಲ್ಲಿ ಗುಲಾಬಿ ಗಿಡ ನೆಡೋದ್ರಿಂದ ನಕರಾತ್ಮಕ ಶಕ್ತಿ ದೂರವಾಗಿ ಸಕರಾತ್ಮಕ ಚಿಂತನೆಗಳು ಹರಡುತ್ತದೆ. ಮನೆಗೆ ಧನ ಸಂಪತ್ತುನ್ನು ಆಕರ್ಷಿಸಲು ನೆರವಾಗುತ್ತದೆ. ಗುಲಾಬಿ ಲಕ್ಷ್ಮಿ ದೇವಿಯ ಅವತಾರವಾಗಿದ್ದು, ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸದಾ ಕಾಲ ದೊರೆಯುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net